ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 62ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಆದರೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದ್ದು, ಈ ವಿಚಾರ ತಂಡಗಳು ಹಾಗೂ ಅಭಿಮಾನಿಗಳನ್ನು ಚಿಂತೆಗೆ ದೂಡಿದೆ.
ಏಕೆಂದರೆ ಕಳೆದ ಕೆಲ ದಿನಗಳಿಂದ ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇಂದು (ಮೇ 12) ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ನಗರದಲ್ಲಿ ತಾಪಮಾನ ಕೂಡ ಇಳಿಕೆಯಾಗಿದ್ದು, ಭಾನುವಾರದಂದು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಏಳು ಸೋಲುಗಳ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಆರ್ಸಿಬಿ ತಾನಾಡಿರುವ 4 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಫಾಫ್ ಪಡೆ ಸಜ್ಜಾಗಿದ್ದು, ಆಫ್‌ಗೆ ಇನ್ನಷ್ಟು ಹತ್ತಿರವಾಗುವ ಲೆಕ್ಕಾಚಾರದೊಂದಿಗೆ ಆರ್ಸಿಬಿ ಕಣಕ್ಕಿಳಿಯುತ್ತಿದೆ. ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ರಾತ್ರಿ 7.30 ಕ್ಕೆ ಪ್ರಾರಂಭವಾಗಲ್ಲಿದ್ದು, ಈ ವೇಳೆಯೂ ಅಂದರೆ ಸಂಜೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ನಾಳೆ ಶೇ.55ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪರಪುರುಷರ ಜತೆ ರೊಮ್ಯಾನ್ಸ್ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ; ಮುಂದೆ ನಡೆದಿದ್ದು ಮಾತ್ರ…
ಒಂದೆ ವೇಳೆ ಮಳೆ ಕಾಡಿದರು ಸ್ಪಷ್ಟ ಫಲಿತಾಂಶ ಸಿಗಬಹುದು. ಒಂದು ವೇಳೆ ಪಂದ್ಯ ರದ್ದಾದರೆ ಆರ್ಸಿಬಿ ಅಧಿಕೃತವಾಗಿ ಪ್ಲೇಆ ರೇಸ್ನಿಂದ ಹೊರಬೀಳಲಿದೆ ಮತ್ತು ಡೆಲ್ಲಿ ತಂಡ ಗಣಿತಶಾಸ್ತ್ರದ ಪ್ರಕಾರವಷ್ಟೇ ಪ್ಲೇಆ ರೇಸ್ನಲ್ಲಿ ಉಳಿಯಲಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಮಳೆ ಬರಲಿ ಎಂದು ಆಶಿಸುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ಭಾನುವಾರ ಮಾತ್ರ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಪಿಚ್ ಯಾರಿಗೆ ಸಹಕಾರಿ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದು ಪರಿಗಣಿಸಲಾಗಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಸಹಾಯ ಪಡೆಯುತ್ತಾರೆ. ಮೈದಾನ ಚಿಕ್ಕದಾಗಿರುವುದರಿಂದ ಬೌಂಡರಿ, ಸಿಕ್ಸರ್ಗಳ ಮಳೆ ಸುರಿಯುವುದನ್ನು ಈ ಹಿಂದಿನ ಪಂದ್ಯಗಳಲ್ಲಿ ನಾವು ನೋಡಿದ್ದೇವೆ. ಹೀಗಾಗಿ ಆರ್ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದಲ್ಲೂ ಈ ರೀತಿಯ ಪ್ರದರ್ಶನವನ್ನು ನೋಡಬಹುದಾಗಿದೆ.
ಬೆಂಗಳೂರಿನ ಈ ಮೈದಾನದಲ್ಲಿ ಇದುವರೆಗೆ ಒಟ್ಟು 90ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡಕ್ಕಿಂತ ಚೇಸ್ ಮಾಡಿದ ತಂಡಗಳು ಅತಿ ಹೆಚ್ಚು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ತಂಡ ಟಾಸ್ ಗೆಲ್ಲುತ್ತದೆಯೋ ಆ ತಂಡ ಮೊದಲು ಬೌಲಿಂಗ್ ಮಾಡಲು ಮುಂದಾಗುತ್ತದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕೈ ಹಿಡಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.
ಧೈರ್ಯ ಇದ್ದರೆ ಈ ವಿಡಿಯೋ ವೈರಲ್ ಮಾಡಿ; ನೆಟ್ಟಿಗರಿಗೆ ಸವಾಲೆಸೆದ ನಟಿ ಜ್ಯೋತಿ ರೈ
ಈ ಐದು ಕಂಡೀಷನ್ಗಳಲ್ಲಿ ಪಾಸ್ ಆದರೆ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವುದು ಕನ್ಫರ್ಮ್!
ಈ ಐದು ಕಂಡೀಷನ್ಗಳಲ್ಲಿ ಪಾಸ್ ಆದರೆ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವುದು ಕನ್ಫರ್ಮ್!
