ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್ ಪ್ರಾರಂಭಗೊಂಡು ಈಗಾಗಲೇ 58 ಪಂದ್ಯಗಳು ಮುಕ್ತಾಯಗೊಂಡಿದ್ದು, ಈವರೆಗೆ ಯಾವುದೇ ತಂಡ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿಲ್ಲ. ನಾಲ್ಕನೇ ಸ್ಥಾನಕ್ಕಾಗಿ ಐದು ತಂಡಗಳು ಪೈಪೋಟಿ ನಡೆಸುತ್ತಿದ್ದು, ಈ ಬಾರಿಯ ಪ್ಲೇಆಪ್ ರೇಸ್ನಲ್ಲಿ ಆರ್ಸಿಬಿ ಹಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಗುಜರಾತ್ ವಿರುದ್ಧ ಚೆನ್ನೈ ಸೋತ ಬಳಿಕ ಆರ್ಸಿಬಿ ಪ್ಲೇಆಫ್ ಅಲ್ಪಮಟ್ಟಿಗೆ ಸುಗಮವಾಗಿದೆ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾ ತಜ್ಞರು ಹೇಳುವ ಪ್ರಕಾರ ಈ ಐದು ಕಂಡೀಷನ್ಗಳನ್ನು ಆರ್ಸಿಬಿ ಪಾಸ್ ಮಾಡಿದರೆ ಸುಮಗವಾಗಿ ನಾಲ್ಕನೇ ಸ್ಥಾನಕ್ಕೇರಿ ಪ್ಲೇಆಫ್ ಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ರಾಜಸ್ಥಾನ ಹಾಗೂ ಕಲ್ಕತ್ತಾ ಪ್ಲೇಆಫ್ ಪ್ರವೇಶಿಸುವುದು ಖಚಿತವಾಗಿದ್ದು, ಸನ್ರೈಸರ್ಸ್ ಕೂಡ ಪ್ಲೇಆಫ್ ಪ್ರವೇಶಿಸುವುದು ಕನ್ಫರ್ಮ್ ಆಗಿದ್ದು, ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಪೈಪೋಟೀ ಏರ್ಪಟ್ಟಿದೆ.
ಕಂಡೀಷನ್ ನಂ. 1: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಬೇಕಾಗುತ್ತದೆ. ಉತ್ತಮ ರನ್ರೇಟ್ ಹೊಂದಿದ್ದಲ್ಲಿ ಫಾಫ್ ಪಡೆಯ ಪ್ಲೇಆಫ್ಗೆ ಸುಗಮವಾಗಿ ಪ್ರವೇಶಿಸುತ್ತದೆ. ಒಂದು ವೇಳೆ ಆರ್ಸಿಬಿ ಒಂದು ಪಂದ್ಯದಲ್ಲಿ ಸೋತರು ಪ್ಲೇಆಫ್ ಬಾಗಿಲು ಮುಚ್ಚುತ್ತದೆ.
ಕಂಡೀಷನ್ ನಂ. 2: ಮೇ 10ರಂದು ನಡೆದ ಲೀಗ್ ಹಂತದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೋಲು ಕಂಡಿದ್ದು, ಉಳಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋಲಬೇಕಿದೆ. ಉತ್ತಮ ರನ್ರೇಟ್ ಹೊಂದಿರುವ ಚೆನ್ನೈ ಮುಂದಿನ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಸೋತರೆ ಆರ್ಸಿಬಿ ಪಾಲಿಗೆ ವರದನವಾಗಲಿದೆ.
SSLC ವಿದ್ಯಾರ್ಥಿನಿ ಹತ್ಯೆ ಆರೋಪಿ ಅರೆಸ್ಟ್; ರುಂಡಕ್ಕಾಗಿ ಮುಂದುವರೆದ ಶೋಧ
ಕಂಡೀಷನ್ ನಂ. 3: ಆರ್ಸಿಬಿ ಹೊರತುಪಡಿಸಿ ಲಖನೌ ಸೂಪರ್ಜೈಂಟ್ಸ್ ತಂಡವು ನಾಲ್ಕನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಬಲ ತಂಡವಾಗಿದೆ. ಆಡಿರುವ 12 ಪಂದ್ಯಗಳ ಪೈಕಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಎಲ್ಎಸ್ಜಿ ಉಳಿದ ಎರಡು ಪಂದ್ಯಗಳಲ್ಲಿ ಸೋಲಬೇಕಾಗಿದೆ. ಒಂದು ವೇಳೆ ಎರಡು ಪಂದ್ಯಗಳಲ್ಲಿ ಗೆದ್ದೆರ ಆರ್ಸಿಬಿಗೆ ಪ್ಲೇಆಫ್ ಅವಕಾಶ ತಪ್ಪಲಿದೆ.
ಕಂಡೀಷನ್ ನಂ. 4: ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಪ್ಲೇಆಫ್ ರೇಸ್ನಲ್ಲಿದ್ದು, ಮುಂದಿನ ಎರಡು ಪಂದ್ಯಗಳನ್ನು ಆರ್ಸಿಬಿ ಹಾಗೂ ಲಖನೌ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳಲ್ಲಿ ಡೆಲಲಿ ಸೋತರೆ ಆರ್ಸಿಬಿ ಪ್ಲೇಆಫ್ ಹಾದಿ ಸುಗಮವಾಗಲಿದೆ. ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಡಿಸಿ ಸೋತರೆ ಬೆಂಗಳೂರಿಗೆ ಉತ್ತಮ ಅವಕಾಶವಿದೆ.
ಕಂಡೀಷನ್ ನಂ.5: ಆರ್ಸಿಬಿ ಟಾಪ್ 3 ಪ್ರವೇಶಿಸುವ ಉತ್ತಮ ಅವಕಾಶ ಹೊಂದಿದ್ದು, ಇದಕ್ಕಾಗಿ ಎಸ್ಆರ್ಎಚ್ ತನ್ನ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಸೋಲಬೇಕಿದೆ. ದೊಡ್ಡ ಅಂತರದಲ್ಲಿ ಏನಾದರೂ ಎಸ್ಆರ್ಎಚ್ ಸೋತಲ್ಲಿ ಆರ್ಸಿಬಿ ಇದರ ಲಾಭ ಪಡೆಯಲಿದ್ದು, ಆರ್ಸಿಬಿ ಮುಂದಿನ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ರನ್ರೇಟ್ ಸುಧಾಸಿದರೆ ಮಾತ್ರ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಬಹುದಾಗಿದೆ. ಒಂದು ವೇಳೆ ಈ ಐದು ಕಂಡೀಷನ್ಗಳು ಆರ್ಸಿಬಿ ಪರವಾದಲ್ಲಿ ಸುಗಮವಾಗಿ ಪ್ಲೇಆಫ್ ಪ್ರವೇಶಿಸುತ್ತ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ ಬ್ಯಾಟ್ಸ್ಮನ್ಗಳ ಆರ್ಭಟಕ್ಕೆ ಕಣ್ಣೀರಿಟ್ಟ ಸಿಎಸ್ಕೆ ಫ್ಯಾನ್; ವಿಡಿಯೋ ವೈರಲ್
ಗುಜರಾತ್ ಬ್ಯಾಟ್ಸ್ಮನ್ಗಳ ಆರ್ಭಟಕ್ಕೆ ಕಣ್ಣೀರಿಟ್ಟ ಸಿಎಸ್ಕೆ ಫ್ಯಾನ್; ವಿಡಿಯೋ ವೈರಲ್
