Dailyhunt
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ 'ಆಸ್ಕರ್​' ವಿಶೇಷ ಗೌರವ

ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ 'ಆಸ್ಕರ್​' ವಿಶೇಷ ಗೌರವ

ಮುಂಬೈ: ಉಪೇಂದ್ರ ನಟನೆಯ ಐಶ್ವರ್ಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ದೀಪಿಕಾ ಪಡುಕೋಣೆಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಭಾರತ ಮಾತ್ರವಲ್ಲದೇ ಹಾಲಿವುಡ್​​ ಮಂದಿ ಕೂಡ ಇವರ ನಟನೆಗೆ ಮೆಚ್ಚುಗೆ ಸೂಚಿಸಿದ್ದು, ಅದಕ್ಕೆ ಪೂರಕವಂಬಂತೆ ನಟಿಗೆ ವಿಶೇಷ ಗೌರವ ನೀಡಲಾಗಿದೆ.

ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ನೀಡುವ ಆಸ್ಕರ್ (ದಿ ಅಕಾಡೆಮಿ ಪ್ರಶಸ್ತಿ) ಸಂಘಟಕರು ದೀಪಿಕಾಗೆ ಅಪರೂಪದ ಗೌರವ ನೀಡಿದ್ದಾರೆ. ಆಸ್ಕರ್ ಪ್ರಶಸ್ತಿಯ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ನಟನೆಯ 'ಬಾಜಿರಾವ್ ಮಸ್ತಾನಿ' ಸಿನಿಮಾದ 'ದಿವಾನಿ ಮಸ್ತಾನಿ..' ಹಾಡನ್ನು ಹಂಚಿಕೊಳ್ಳುವ ಮೂಲಕ ಗೌರವ ಸೂಚಿಸಲಾಗಿದೆ.

ತರಕಾರಿ ವ್ಯಾಪಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಪೊಲೀಸ್​ ಅಧಿಕಾರಿಯ ಪುತ್ರ; ವಿಡಿಯೋ ವೈರಲ್

ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹೆಜ್ಜೆ ಹಾಕಿದ ದೀವಾನಿ ಮಸ್ತಾನಿ ಹಾಡು (ಗಾಯಕಿ ಶ್ರೇಯಾ ಘೋಷಾಲ್) ಇದು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ. ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ ಎಂದು ಪೋಸ್ಟ್​ಗೆ ಕ್ಯಾಪ್ಷನ್​ ನೀಡಲಾಗಿದೆ. ಇತ್ತ ಆಸ್ಕರ್ (ದಿ ಅಕಾಡೆಮಿ ಪ್ರಶಸ್ತಿ) ಸಂಘಟಕರ ಪೋಸ್ಟ್​ಗೆ ದೀಪಿಕಾ ಪಡುಕೋಣೆ ಪತಿ, ನಟ ರಣವೀರ್​ ಸಿಂಗ್​ ಮೆಸ್ಮರಿಕ್​ ಎಂದು ಕಮೆಂಟ್​ ಮಾಡಿದ್ದಾರೆ. ಇದರ ಜೊತೆಗೆ ನೆಟ್ಟಿಗರು ತಮ್ಮ ಕಮೆಂಟ್​ಗಳ ಮೂಲಕ ಮೆಚ್ಚುಗೆಯೆ ಮಹಾಪೂರವನ್ನೇ ಹರಿಸಿದ್ದಾರೆ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್​ ಮಸ್ತಾನಿ ಚಿತ್ರವು 2015ರಲ್ಲಿ ತೆರೆಕಂಡು ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ರಣವೀರ್​ ಸಿಂಗ್​ಗೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ನಾಯಕಿಯರಾಗಿ ನಟಿಸಿದ್ದರು.

ಗ್ಯಾರಂಟಿ ಯೋಜನೆಗಳ ಸವಲತ್ತು ಪಡೆದರೆ ಸ್ವಾಭಿಮಾನ ಮಾರಿಕೊಂಡಂತೆ: ನಟ ಜಗ್ಗೇಶ್​

ಸೋಲಿನ ಬೆನ್ನಲ್ಲೇ ರಿಷಭ್​ ಪಂತ್​ಗೆ 24 ಲಕ್ಷ ರೂ. ದಂಡ, ​ನಿಷೇಧದ ಭೀತಿ

ಗ್ಯಾರಂಟಿ ಯೋಜನೆಗಳ ಸವಲತ್ತು ಪಡೆದರೆ ಸ್ವಾಭಿಮಾನ ಮಾರಿಕೊಂಡಂತೆ: ನಟ ಜಗ್ಗೇಶ್​
Dailyhunt
Disclaimer: This content has not been generated, created or edited by Dailyhunt. Publisher: Vijayvani