Dailyhunt Logo
  • Light mode
    Follow system
    Dark mode
    • Play Story
    • App Story
ಹೋಳಿ ಸಂಭ್ರಮಾಚರಣೆ ಬಳಿಕ ಕೈ ತೊಳೆಯಲು ಹೋಗಿ ಯುವಕ ಸಾವು

ಹೋಳಿ ಸಂಭ್ರಮಾಚರಣೆ ಬಳಿಕ ಕೈ ತೊಳೆಯಲು ಹೋಗಿ ಯುವಕ ಸಾವು

ಬೆಂಗಳೂರು: ಕೈ ತೊಳೆಯಲು ಹೋಗಿ ಯುವಕನೋರ್ವ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ನರಸಿಂಹನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಉಜಿನಿ ಹೊಸಹಳ್ಳಿ ಗ್ರಾಮದ ಸುನಿಲ್ (30) ಎಮದು ಗುರುತಿಸಲಾಗಿದ್ದು, ವಿಜಿಕುಮಾರ್ ಫಾರಂನಲ್ಲಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದೊಡ್ಡಬಳ್ಳಾಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಮೃತ ಯುವಕ ಸುನಿಲ್​ ವಿಜಿಫಾರಂನಲ್ಲಿ ಕೆಲಸ ಮಾಡುತ್ತಿದ್ದ. ಹೋಳಿ ಹಬ್ಬ ಇದ್ದ ಕಾರಣ ಸ್ನೇಹಿತರ ಜೊತೆ ಆಟವಾಡಿ ಸಂಜೆ ಆರು ಘಂಟೆ ಸುಮಾರಿಗೆ ಕೃಷಿಹೊಂಡದ ಬಳಿ ಕೈ ತೊಳೆಯಲು ಹೋಗಿದ್ದಾನೆ. ಈ ವೇಳೆ ಆತ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊತ್ತು ಊಟಕ್ಕಾಗಿ ಪರದಾಡಿದ ನಟ ಇಂದು ಒಟಿಟಿಯ ಸೂಪರ್​ಸ್ಟಾರ್​

ಪಂದ್ಯದ ವೇಳೆ ಕ್ರೀಡಾಂಗಣದಲ್ಲೇ 'ಧಮ್' ಹೊಡೆದ ಶಾರುಖ್​ ಖಾನ್​; ವಿಡಿಯೋ ವೈರಲ್​

ಇಳಿ ವಯಸ್ಸಿನಲ್ಲಿ ಸಿಧು ಮೂಸೆವಾಲ ಪೋಷಕರಿಗೆ ಗಂಡು ಮಗು ಜನನ; ಆರೋಗ್ಯ ಕಾರ್ಯದರ್ಶಿಗೆ ಶೋಕಾಸ್​ ನೋಟಿಸ್​ ಜಾರಿ

ಹೊತ್ತು ಊಟಕ್ಕಾಗಿ ಪರದಾಡಿದ ನಟ ಇಂದು ಒಟಿಟಿಯ ಸೂಪರ್​ಸ್ಟಾರ್​ಪಂದ್ಯದ ವೇಳೆ ಕ್ರೀಡಾಂಗಣದಲ್ಲೇ 'ಧಮ್' ಹೊಡೆದ ಶಾರುಖ್​ ಖಾನ್​; ವಿಡಿಯೋ ವೈರಲ್​
Dailyhunt
Disclaimer: This content has not been generated, created or edited by Dailyhunt. Publisher: Vijayvani