Dailyhunt
ಕಾರು-ಲಾರಿ ನಡುವೆ ಭೀಕರ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು

ಕಾರು-ಲಾರಿ ನಡುವೆ ಭೀಕರ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು

ಖನೌ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಹಾಪುರ್​ ಜಿಲ್ಲೆಯಲ್ಲಿರುವ ದೆಹಲಿ-ಲಖನೌ ಎಕ್ಸ್​ಪ್ರೆಸ್​​ ಹೈವೇಯಲ್ಲಿ ನಡೆದಿದೆ.

ಅಪಘಾತದಲ್ಲಿ ಎರಡು ಕಾರುಗಳು ಜಖಂಗೊಂಡಿದ್ದು, ಪೊಲೀಸರು ಮೃತದೇಹಗಳನ್ನು ಹೊರತೆಗೆಯುವುದಕ್ಕೆ ಹರಸಾಹಸಪಟ್ಟಿದ್ದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ತೊರೆದು ಕಲ್ಕತ್ತಾ ಸೇರ್ತಾರ ಹಿಟ್​​ಮ್ಯಾನ್​​?; ಪುಷ್ಠಿ ನೀಡುತ್ತಿವೆ ಫೋಟೋಗಳು

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಹಾಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 09 ರ ಅಲ್ಲಾಭಕ್ಷಪುರ ಟೋಲ್ ಪ್ಲಾಜಾ ಬಳಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಎದುರು ಬರುತ್ತಿದ್ದ ಲಾರಿಗೆ ಗುದ್ದಿದೆ. ಕಾರಿನಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. ಓರ್ವ ಸ್ಥಿತಿ ಚಿಂತಾಜನಕವಾಗಿದೆ.

ಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರನ್ನು ಕಟ್​ ಮಾಡಿ ಮೃತದೇಹ ಹಾಗೂ ಗಾಯಾಳುಗಳನ್ನು ಹೊರತೆಗೆಯಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಜ್​ಕುಮಾರ್​ ಅಗರ್ವಾಲ್​ ತಿಳಿಸಿದ್ದಾರೆ.

ನನ್ನ ಒಪ್ಪಿಗೆ ಇಲ್ಲದೇ ಜನ್ಮ ನೀಡಿದ್ದಾರೆ ಎಂದು ಆರೋಪಿಸಿ ಪೋಷಕರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಟಾಯ್ಲೆಟ್​ಗೆ ಹೋದರೂ ಫ್ಲಶ್​ ಮಾಡೋಕೆ ನೀರಿಲ್ಲ ಗುರು…; ಈಕೆ ಕಷ್ಟ ಕೇಳೋರು ಯಾರು ಇಲ್ವಂತೆ

Dailyhunt
Disclaimer: This content has not been generated, created or edited by Dailyhunt. Publisher: Vijayvani