Dailyhunt Logo
  • Light mode
    Follow system
    Dark mode
    • Play Story
    • App Story
LSGvsDC; ಈ ಪಂದ್ಯದಲ್ಲಿ ಯಾರು ಗೆದ್ದರೆ ಆರ್​ಸಿಬಿ ಪಾಲಿಗೆ ಪ್ಲಸ್​

LSGvsDC; ಈ ಪಂದ್ಯದಲ್ಲಿ ಯಾರು ಗೆದ್ದರೆ ಆರ್​ಸಿಬಿ ಪಾಲಿಗೆ ಪ್ಲಸ್​

ವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ 64ನೇ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಲಖನೌ ಸೂಪರ್​ಜೈಂಟ್ಸ್​ ಮುಖಾಮುಖಿಯಾಗಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಏಕೆಂದರೆ ಉಭಯ ತಂಡಗಳು ಪ್ಲೇಆಫ್​ ರೇಸ್​ನಲ್ಲಿದ್ದು, ಈ ಎರಡು ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ.

ಇದಲ್ಲದೆ ಆರ್​ಸಿಬಿಗೂ ಕೂಡ ಈ ಪಂದ್ಯ ಮಹತ್ವದಾಗಿದೆ.

ಡೆಲ್ಲಿ ಹಾಗೂ ಲಖನೌಗೆ ಈ ಪಂದ್ಯ ನಿರ್ಣಾಯಕವಾಗಿದ್ದು, ಈ ಪಂದ್ಯದ ಫಲಿತಾಂಶ ಆರ್​ಸಿಬಿ ತಂಡದ ಪ್ಲೇಆಫ್ ಹಾದಿಯನ್ನು ಕೂಡ ನಿರ್ಧರಿಸಲಿದೆ. ಅಂದರೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಸುಗಮವೋ ಅಥವಾ ಕಠಿಣವಾಗಲಿದೆಯೋ ಎಂಬುದು ತಿಳಿಯಲಿದೆ.

ಕ್ರೀಡಾ ತಜ್ಞರು ಹೇಳುವ ಪ್ರಕಾರ ಇಂದಿನ (ಮೇ 14) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಗೆಲ್ಲುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಇದು ಲೀಗ್​ನ ಕೊನೆಯ ಪಂದ್ಯವಾಗಿದ್ದು, ಒಂದು ವೇಲೆ ಲಖನೌ ವಿರುದ್ಧ ಗೆದ್ದರೆ 14 ಅಂಕ ಸಂಪಾದಿಸಲಿದ್ದು, ಆರ್​ಸಿಬಿಯನ್ನು ಪಾಯಿಂಟ್ಸ್​ ಟೇಬಲ್​ನಲ್ಲಿ ಹಿಂದಿಕ್ಕ ಬೇಕಿದ್ದರೆ 100ಕ್ಕೂ ಹೆಚ್ಚಿನ ರನ್​ಗಳ ಅಂತರದಲ್ಲಿ ಗೆಲ್ಲಬೇಕಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದರೆ ಆರ್​ಸಿಬಿ ಪಾಲಿಗೆ ವರದಾಯಕವಾಗಲಿದೆ.

ಟಾಯ್ಲೆಟ್​ಗೆ ಹೋದರೂ ಫ್ಲಶ್​ ಮಾಡೋಕೆ ನೀರಿಲ್ಲ ಗುರು…; ಈಕೆ ಕಷ್ಟ ಕೇಳೋರು ಯಾರು ಇಲ್ವಂತೆ

ಒಂದು ವೇಳೆ ಇಂದಿನ ಪಂದ್ಯದಲ್ಲಿ ಲಖರ್ನ ಸೂಪರ್​ಜೈಂಟ್ಸ್​ ಗೆದ್ದರೆ ಆರ್​ಸಿಬಿ ಪಾಲಿಗೆ ಪ್ಲೇಆಫ್​ ಹಾದಿ ತುಸು ಕಠಿಣವಾಗಬಹುದು ಎಂದು ಹೇಳಲಾಗಿದೆ. ಏಕೆಂದರೆ ಲಖನೌ ಸೂಪರ್​ಜೈಂಟ್ಸ್​ ಆಡಿರುವ 12 ಪಂದ್ಯಗಳ ಪೈಕಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದೆ. ಒಂದು ವೇಳೆ ಮುಂದಿನ ಎರಡು ಪಂದ್ಯಗಳಲ್ಲಿ ಲಖನೌ ಭರ್ಜರಿ ಜಯ ಸಾಧಿಸಿದರೆ ಆರ್​ಸಿಬಿ ಪ್ಲೇಆಫ್​ ಹಾದಿ ದುರ್ಗಮವಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಡೆಲಲಿ ಗೆಲ್ಲಲಿ ಎಂದು ಆರ್​ಸಿಬಿ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಹೀಗಾಗಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಡಿಮೆ ರನ್​ಗಳ ಅಂತರದಿಂದ ಅಥವಾ ಸಾಮಾನ್ಯ ಗೆಲುವು ಸಾಧಿಸಬೇಕು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಲಿದೆ. ಇದಾಗ್ಯೂ ಸಿಎಸ್​ಕೆ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಆರ್​ಸಿಬಿಗೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ಉತ್ತಮ ಅವಕಾಶ ಇರಲಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಪಾಲಿಗೆ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವುದು ಉತ್ತಮ ಎಂದು ಕ್ರೀಡಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾರು-ಲಾರಿ ನಡುವೆ ಭೀಕರ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು

ನನ್ನ ಒಪ್ಪಿಗೆ ಇಲ್ಲದೇ ಜನ್ಮ ನೀಡಿದ್ದಾರೆ ಎಂದು ಆರೋಪಿಸಿ ಪೋಷಕರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಕಾರು-ಲಾರಿ ನಡುವೆ ಭೀಕರ ಅಪಘಾತ; ಆರು ಮಂದಿ ಸ್ಥಳದಲ್ಲೇ ಸಾವು
Dailyhunt
Disclaimer: This content has not been generated, created or edited by Dailyhunt. Publisher: Vijayvani