ಬೆಂಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಹುಟ್ಟುಹಬ್ಬವನ್ನು ಅಥವಾ ಅಪ್ಪುಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಆದರೆ ಇಂದು ಪುನೀತ್ರ ಹುಟ್ಟುಹಬ್ಬಕ್ಕೆ ಅಶ್ವಿನಿ ಅವರು ಗೈರಾಗಿದ್ದರು.

ಹುಟ್ಟುಹಬ್ಬದಂದು ಅಪ್ಪು ಅವರ ಸ್ಮಾರಕಕ್ಕೆ ದೊಡ್ಮನೆಯ ಹಲವು ಸದಸ್ಯರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರಿ, ಪೂಜೆ ಕಾರ್ಯಕ್ರಮಗಳನ್ನು ಮಾಡಿದರು. ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬದವರು ಕಾರ್ಯಗಳನ್ನು ನೆರವೇರಿಸಿದರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂಬೈಗೆ ತೆರಳಿದ್ದಾರೆ. ದೊಡ್ಮನೆಯ ಕುಲದೇವತೆಯ ಪೂಜೆಗೆ. ದೊಡ್ಮನೆಯ ಕುಲದೇವತೆ ವಜ್ರೇಶ್ವರಿ ದೇವಿಯ ದೇವಾಲಯಕ್ಕೆ ಪುನೀತ್ರ ಹುಟ್ಟುಹಬ್ಬದ ದಿನದಂದೇ ತೆರಳಿ ವಿಶೇಷ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ದಿಟ್ಟ ಹೆಜ್ಜೆಯೊಂದನ್ನು ಇಡಲು ವಜ್ರೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಪಿಆರ್ಕೆ ಪ್ರೊಡಕ್ಷನ್ ಹಾಗೂ ಪಿಆರ್ಕೆ ಆಡಿಯೋಸ್ ಅನ್ನು ನೋಡಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಇನ್ನು ಮುಂದೆ ವಜ್ರೇಶ್ವರಿ ಕಂಬೈನ್ಸ್ ಅನ್ನೂ ಸಹ ನೋಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅಪ್ಪು ಹುಟ್ಟುಹಬ್ಬದಂದೇ ವಜ್ರೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ
ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಲೇಬೇಡಿ; ಅನಾರೋಗ್ಯ ಖಂಡಿತಾ…
ಬೆಂಗಳೂರಿನಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ
ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನಲೇಬೇಡಿ; ಅನಾರೋಗ್ಯ ಖಂಡಿತಾ…

