Dailyhunt Logo
  • Light mode
    Follow system
    Dark mode
    • Play Story
    • App Story
Amruthadhaare Serial: ಅಖಾಡಕ್ಕೆ ಇಳಿದೇ ಬಿಟ್ಲು ಭೂಮಿ! ಮಿಂಚು ಸುಳಿವು ಸಿಕ್ಕೇ ಬಿಡ್ತಾ?

Amruthadhaare Serial: ಅಖಾಡಕ್ಕೆ ಇಳಿದೇ ಬಿಟ್ಲು ಭೂಮಿ! ಮಿಂಚು ಸುಳಿವು ಸಿಕ್ಕೇ ಬಿಡ್ತಾ?

Vishwavani 1 month ago

'ಅಮೃತಧಾರೆ'' ಧಾರಾವಾಹಿ (Amruthadhaare) ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಇನ್ನೇನು ಮಿಂಚು ರಹಸ್ಯ ಗೌತಮ್‌ಗೆ ಗೊತ್ತಾಗಬೇಕು, ಅಷ್ಟರಲ್ಲಿ ಲಕ್ಷ್ಮೀಕಾಂತ್‌ನನ್ನು ಜೈದೇವ್ ಕಿಡ್ನಾಪ್ ಮಾಡಿದ್ದಾನೆ. ಅಷ್ಟೇ ಇಲ್ಲ ಈಗ ಮಿಂಚು ಕೂಡ ಜೈದೇವ್‌ (Jaidev) ಪಾಲಾಗಿದ್ದಾಳೆ.

ಜೈದೇವ್‌ನ ಕುತಂತ್ರದಿಂದ ಮಿಂಚು ಕಾಣೆಯಾಗಿದ್ದು, ಆಕೆಯ ನಿಜವಾದ ಪೋಷಕರು ಎಂದು ಹೇಳಿಕೊಂಡು ಅಪರಿಚಿತ ದಂಪತಿ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಗೌತಮ್‌ (Gowtham diwan) ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗೌತಮ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈಗ ಭೂಮಿನೇ ಸ್ವತಃ ಮಗಳನ್ನು ಹುಡುಕಿಕೊಂಡು ಹೋಗಿದ್ದಾಳೆ.

ಮಿಂಚುಳನ್ನು ಭೂಮಿ ಹಾಗೂ ಪಾರ್ಥ ಹುಡುಕಿಕೊಂಡು ಹೋಗಿದ್ದಾರೆ. ಒಬ್ಬ ರೌಡಿ ಬಳಿ ಈ ಬಗ್ಗೆ ಮಾತನಾಡಿ ಹಣವನ್ನು ನೀಡಿದ್ದಾಳೆ, ಆತ ಈಗ ಮಿಂಚು ಎಲ್ಲಿದ್ದಾಳೆ ಎನ್ನೋದರ ಬಗ್ಗೆ ಸುಳಿವು ನೀಡಿದ್ದಾನೆ. ಪ್ರೋಮೋದಲ್ಲಿ ಭೂಮಿ ಮಗಳನ್ನು ಹುಡುಕಲು ಯಶಸ್ವಿ ಆಗುತ್ತಾಳಾ ಅನ್ನೋ ಕುತೂಹಲ ಇದೆ.

Kannada serial TRP: ಕನ್ನಡ ಕಿರುತೆರೆಯ ಟಾಪ್ 5 ಸೀರಿಯಲ್‌ಗಳು ಯಾವುವು?

ಇಷ್ಟರವರೆಗೆ ಆಗಿದ್ದೇನು?

ಜೈದೇವ್‌ ಬಳಿ ಮಿಂಚು ಇದ್ದಾಳೆ. ಮಿಂಚು ಸ್ಕೂಲ್‌ನಿಂದ ನೇರವಾಗಿ ಮನೆಯಿಂದ ಆಚೆ ಹೋಗಲು ನಿರ್ಧಾರ ಮಾಡಿದ್ದಾಳೆ. ಮಹಿಮಾ ಜೊತೆ ಇರಲು ಇಷ್ಟ ಪಡದ ಮಿಂಚು ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಈಗ ಸ್ಕೂಲ್‌ನಿಂದ ಮಿಂಚು ಕಾಣೆಯಾಗಿದ್ದಾಳೆ ಎಂದು ಕಾಲ್‌ ಬಂದಿದೆ.ಅಷ್ಟೊತ್ತಿಗೆ ಗೌತಮ್‌ ಮನೆಗೆ ಅಪರಚಿತ ದಂಪತಿ ಬಂದಿದ್ದಾರೆ. ಮಿಂಚು ದತ್ತು ಕೊಡುತ್ತಿರುವ ಸಂದರ್ಭದಲ್ಲಿ ದಿವಾನ್ ಮನೆಗೆ ಇಬ್ಬರ ಆಗಮನವಾಗಿದೆ. ಈ ಇಬ್ಬರು ಮಿಂಚು ನಮ್ಮ ಮಗಳು ಎಂದು ಹೇಳಿದ್ದಾರೆ. ನಾವು ಮಗುವನ್ನು ಬಿಟ್ಟು ಹೋಗಿದ್ದೀವಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani