Dailyhunt Logo
  • Light mode
    Follow system
    Dark mode
    • Play Story
    • App Story
Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್‌

Amruthadhaare Serial: ಇಂದು ಅಮೃತಧಾರೆ ಮಹಾಸಂಚಿಕೆ; ಜೋಡಿ ಜೀವಗಳ ರೊಮ್ಯಾಂಟಿಕ್ ಎಪಿಸೋಡ್‌

Vishwavani 3 months ago

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಭೂಮಿಕಾ ಹಾಗೂ ಗೌತಮ್‌ ಸಖತ್‌ ಖುಷ್‌ ಆಗಿದ್ದಾರೆ. ಇಷ್ಟೂ ದಿನ ಜೈದೇವ್‌ ಕುತಂತ್ರಗಳೇ ಎಪಿಸೋಡ್‌ನಲ್ಲಿ ಹೈಲೈಟ್‌ ಆಗಿತ್ತು. ಆದರೀಗ ಗೌತಮ್‌ ದಿವಾನ್‌ (Gowtham Diwan) ಕುಟುಂಬ ಮತ್ತೆ ಖುಷಿಯಲ್ಲಿ ತೇಲಾಡುತ್ತಿದೆ.

ಮಲ್ಲಿ ಮದುವೆ ಆದ ಬಳಿಕ ಇಡೀ ಕುಟುಂಬ ಒಂದು ಕಡೆ ಸೇರಿ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಸೀರಿಯಲ್‌ ವೀಕ್ಷಕರಿಗೆ ಇದೀಗ ವಾಹಿನಿಯೂ ಗುಡ್‌ ನ್ಯೂಸ್‌ ಕೊಟ್ಟಿದೆ.

ಅಮೃತಧಾರೆ ಮಹಾಸಂಚಿಕೆ

ಹೌದು ಒಂದು ಗಂಟೆ ಈ ಧಾರಾವಾಹಿಯನ್ನು ನೋಡಬಹುದು. ಇಂದು ಜೋಡಿ ಜೀವಗಳ ರೋಮ್ಯಾಂಟಿಕ್ ಸಂಚಿಕೆಯನ್ನು ಒಂದು ಗಂಟೆಗಳ ಕಾಲ ವೀಕ್ಷಕರು ವೀಕ್ಷಿಸಬಹುದಾಗಿದೆ. ಅಮೃತಧಾರೆ ಮಹಾಸಂಚಿಕೆ ಇಂದು ಸಂಜೆ 6.30-7.30ರವರೆಗೆ ಪ್ರಸಾರ ಕಾಣಲಿದೆ.

Shadow Play OTT: ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ರೋಚಕ ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

ಜೋಡಿ ಜೀವಗಳ ರೋಮ್ಯಾಂಟಿಕ್ ಸಂಚಿಕೆ!

ಸದ್ಯ ಅಮೃತಧಾರೆಯಲ್ಲಿ ಮಲ್ಲಿ ಹಾಗೂ ಸುನಿ, ಭೂಮಿ ಹಾಗೂ ಗೌತಮ್‌ ಜೋಡಿಗಳೇ ಹೈಲೈಟ್‌ ಆಗಿದೆ. ಹೊಸ ಪ್ರೋಮೋ ಔಟ್‌ ಆಗಿದೆ. ಮನೆಯವರೆಲ್ಲರೂ ಒಟ್ಟಾಗಿ ಸೇರಿದಾಗ ಆನಂದ್‌ ಜ್ಯೂಸ್‌ನಲ್ಲಿ ಸ್ವಲ್ಪ ಡ್ರಿಂಕ್ಸ್‌ ಹಾಕಿದ್ದಾನೆ.

ಹೀಗಾಗಿ ಭೂಮಿಕಾ ಮತ್ತೆ ನಶೆಯಲ್ಲಿ ತೇಲಿದ್ದಾಳೆ. ಗೌತಮ್‌ ಜೊತೆ ಭೂಮಿ ಮತ್ತೆ ಕ್ಯೂಟ್‌ ಕ್ಯೂಟ್‌ ಆಗಿ ಪ್ರೇಮ ನಿವೇದನೆಯನ್ನೂ ಮಾಡಿದ್ದಾಳೆ. ಸತ್ಯಮೇವ ಜಯತೇ ಅನ್ನೋ ಅರ್ಥನೇ ಗೊತ್ತಿಲ್ಲ. ಕೋಟಿ ಕೋಟಿ ಎಣಿಸೋದೇ ಆಯ್ತು. ಗೌತಮ್‌ ದಿವಾನ್‌, ಭೂಮಿಕಾ ದಿವಾನ್‌ಗೆ ಮೋಸ ಮಾಡಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕು ಅಂತ ನಶೆಯಲ್ಲಿ ಭೂಮಿ, ಗೌತಮ್‌ಗೆ ತನ್ನ ಪ್ರೀತಿಯ ಮಾತುಗಳನ್ನು ಹೇಳಿದ್ದಾಳೆ.

ಗೌತಮ್‌ ಕುಟುಂಬ ಅಜ್ಜಿ ಮನೆಗೆ ಬಂದಿದೆ. ಅಜ್ಜಿ ಮನೆಯನ್ನು ನೋಡಿ ಗೌತಮ್‌ ಭಾವುಕನಾಗುತ್ತಾನೆ. ಸಣ್ಣವನಿದ್ದಾಗ ಕಳೆದ ದಿನಗಳು, ಅಮ್ಮನ ನೆನಪು, ಹೀಗೆ ಪ್ರತಿಯೊಂದು ನೆನಪಿಸಿಕೊಂಡು ಭಾವುಕನಾಗುತ್ತಾನೆ. ಸುನಿ ಕೂಡ ಈ ವೇಳೆ ಮನೆಯನ್ನು ನೋಡಿ ತನ್ನ ಬಾಲ್ಯದ ದಿನಗಳಿಗೆ ಜಾರುತ್ತಾನೆ.

ಸೀರಿಯಲ್‌ನಲ್ಲಿ ಮತ್ತೊಂದು ರೋಚಕ ತಿರುವು

ಮಲ್ಲಿ ಮದುವೆ ಸಂಚಿಕೆಗಳು ಅಮೃತಧಾರೆ ಸೀರಿಯಲ್‌ನಲ್ಲಿ ಮತ್ತೊಂದು ರೋಚಕ ತಿರುವನ್ನು ಪಡೆದುಕೊಂಡಿತ್ತು. ಜೈದೇವ್‌ ಮಾಡುತ್ತಿರುವ ಪ್ಲ್ಯಾನ್‌ಗಳಿಗೆ ಇದೇ ಮೊದಲ ಬಾರಿ ಗೌತಮ್ ಅವರು ಸರಿಯಾದ ಟಕ್ಕರ್ ಕೊಟ್ಟಿದ್ದಾರೆ ಎಂದು ಪ್ರೇಕ್ಷಕರು ಹೇಳಿದ್ದರು. ಮಲ್ಲಿ ಮದುವೆ ವಿಚಾರದಲ್ಲಿ ಗೌತಮ್ ಹಾಗೂ ಭೂಮಿಕಾ ಅವರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ಆದರೆ ಅಂತಿಮವಾಗಿ ಮಲ್ಲಿ ಮದುವೆ ಆಗಿದೆ. ಜೆಡಿ ಕೆಡಿತನಕ್ಕೆ ಮಲ್ಲಿ ಮತ್ತೊಮ್ಮೆ ಬಲಿಯಾಗಲಿದ್ದಾಳೆ ಇದು ಬೇಡವಾಗಿತ್ತು ಎಂದು ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಾಗಲೇ ಮಲ್ಲಿ ತಿರುಗಿ ಬಿದ್ದಿರುವುದು ಪ್ರೇಕ್ಷಕರಿಗೆ ಖುಷಿ ನೀಡಿದೆ.

ಇನ್ನೂ ಜೈದೇವ್‌ ಮಾತ್ರ ಕುತಂತ್ರ ಮಾಡದೇ ಸುಮ್ಮನೆ ಇರೋನೇ ಅಲ್ಲ. ಜೈದೇವ್‌ ಈಗ ಸುನಿಯನ್ನು ಮುಗಿಸಲು ರೌಡಿಗಳು ಛೂ ಬಿಟ್ಟಿದ್ದಾನೆ. ಮುಂದೆ ಜೈದೇವ್‌ ಏನು ಮಾಡ್ತಾನೆ? ಸುನಿ ಪ್ರಾಣಕ್ಕೆ ಅಪಾಯ ಬರುತ್ತಾ? ಭೂಮಿಕಾ-ಗೌತಮ್‌ ಮುಂದಿನ ಪ್ಯಾನ್‌ ಏನು ಎಂಬುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Amruthadhaare Serial: ಸುನಿ ಕಥೆ ಮುಗಿಸಲು ಸಂಚು ಹೂಡಿದ ಜೈದೇವ್‌! ಆನಂದ್‌ ಶಾಕ್‌

ಅಮೃತಧಾರೆ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani