ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಒಂದು ಕಡೆ ಗೌತಮ್‌ಗೆ ಅನಾರೋಗ್ಯದ ಸಮಸ್ಯೆ ಎದುರಾದರೆ ಇನ್ನೊಂದು ಕಡೆ ಶಕುಂತಲಾಗೆ (Shakuntala) ಆಸ್ತಿಯ ಬಗ್ಗೆ ಯೇ ಯೋಚನೆ.
ವೈದ್ಯರು ಗೌತಮ್‌ಗೆ ಕರೆ ಮಾಡಿದ್ದಾರೆ. ಈ ವೇಳೆ ಗೌತಮ್ ಜತೆಗೆ ಮಾತನಾಡಬೇಕು ಎಂದಿದ್ದಾರೆ. ಇದು ಭೂಮಿಕಾಗೆ (Bhoomika) ಸಂಶಯ ಬರುವಂತೆ ಮಾಡಿದೆ, ಗೌತಮ್ ರಿಪೋರ್ಟ್‌ನಲ್ಲಿ ಏನಾದರೂ ಸಮಸ್ಯೆ ಇದೆಯಾ ಅನ್ನೋ ಅನುಮಾನ ಆಕೆಗೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಈ ಬಗ್ಗೆ ತಾನೇ ಹೋಗಿ ಸ್ವತಃ ವಿಚಾರಿಸಬೇಕು ಅಂತ ನಿರ್ಧಾರ ಮಾಡಿದ್ದಾಳೆ.
ಮಗನಿಗೇ ಶಕುಂತಲಾ ತಿರುಮಂತ್ರ?
ಇನ್ನೊಂದು ಕಡೆ ಶಕುಂತಲಾ ನಡೆಯೂ ವೀಕ್ಷಕರಿಗೆ ಅನುಮಾನ ಸೃಷ್ಟಿಸಿದೆ. ಪೂರ್ಣ ಆಸ್ತಿಗಾಗಿ ಮಗನಿಂದ ಕೆಲವು ಸಹಿಯನ್ನು ಪಡೆದುಕೊಂಡಿದ್ದಾಳೆ. ಆದರೆ ಮೊದಲಿಗೆ ಕೆಡಿ ಜಯದೇವ್ ಸಹಿ ಹಾಕೊಲ್ಲ ಎಂದಿದ್ದಾನೆ. ಆದರೆ ಏಕಾಏಕಿ ಅಮ್ಮನ ಮಾತನ್ನು ನಂಬಿ ತನ್ನ ಬಳಿ ಇರುವ ಆಸ್ತಿಯನ್ನು ಬರೆದುಕೊಟ್ಟಿದ್ದಾಳೆ. ಈ ನಡೆಯನ್ನು ಕಂಡು ವೀಕ್ಷಕರು ಶಕುಂತಲಾ ಬದಲಾಗಿರಬೇಕು. ಮಗನ ಮುಂದೆ ನಾಟಕ ಮಾಡುತ್ತಿದ್ದಾಳೇನೋ ಅಂತ ಕಮೆಂಟ್ ಕೂಡ ಮಾಡುತ್ತಿದ್ದಾರೆ.
ಅಂದ ಹಾಗೇ ಅಮೃತಧಾರೆ ಧಾರಾವಾಹಿ ಇತ್ತೀಚೆಗಷ್ಟೆ 1000 ಸಂಚಿಕೆ ಪೂರ್ಣಗೊಳಿಸಿದ್ದು. ಸದ್ಯಕ್ಕಂತೂ ಗೌತಮ್-ಭೂಮಿಕಾ ಮತ್ತು ಮಿಂಚು, ಆಕಾಶ್ ಹಾಗೂ ತುಂಬು ಕುಟುಂಬ ಸಂತೋಷದಿಂದ ಬಾಳುತ್ತಿರುವ ಎಪಿಸೋಡ್ ಗಳು ಪ್ರಸಾರವಾಗುತ್ತಿದೆ. ಆದರೆ ಅದರ ಜೊತೆಗೊಂದು ಟ್ವಿಸ್ಟ್ ಕೂಡ ಸಿಕ್ಕಿದೆ.

