Dailyhunt
Amruthadhaare Serial: ಹನಿಮೂನ್ ಹೊರಟಿರೋ ಮಲ್ಲಿ-ಸುನಿಗೆ ತಪ್ಪಿಲ್ಲ ಕೇಡಿ ಜೈದೇವ್‌ ಕಾಟ!

Amruthadhaare Serial: ಹನಿಮೂನ್ ಹೊರಟಿರೋ ಮಲ್ಲಿ-ಸುನಿಗೆ ತಪ್ಪಿಲ್ಲ ಕೇಡಿ ಜೈದೇವ್‌ ಕಾಟ!

Vishwavani 3 weeks ago

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ''ಅಮೃತಧಾರೆ'' (amruthadhaare serial) ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ಅಂತೂ ನೆರವೇರಿದೆ. ಮತ್ತೊಂದು ಕಡೆ ತನ್ನ ಯೋಚನೆ ಮತ್ತು ಯೋಜನೆಯೇ ಬೇರೆ ಎಂದು ಜೈದೇವ್‌ಗೆ ಸುನಿ ಹೇಳಿದ್ದು ಸೀದಾ ನವವಧು ಮಲ್ಲಿಯನ್ನು ಕರೆದುಕೊಂಡು ಜೈದೇವ್ (Jaidev) ಮನೆಗೆ ಬಂದಿದ್ದ.

ಆದರೆ ಅಲ್ಲಿ ಜೈದೇವ್‌ ಪ್ಲ್ಯಾನ್‌ ಉಲ್ಟಾ ಆಗಿದೆ. ಗೌತಮ್‌ (Gowtham) ಮಾಡಿದ ಪ್ಲ್ಯಾನ್‌ಗೆ ಫೂಲ್‌ ಆಗಿದ್ದಾನೆ ಜೈದೇವ್.‌

ಮಲ್ಲಿ ಸುದ್ದಿಗೆ ಬರಲೇ ಬಾರದು ಅಂತ ಗೌತಮ್‌ ಕೂಡ ಜೈದೇವ್‌ಗೆ ವಾರ್ನ್‌ ಮಾಡಿದ್ದರೂ, ಇನ್ನೂ ಬದಲಾದಂತಿಲ್ಲ. ಹನಿಮೂನ್ ಹೊರಟಿರೋ ಗೌತಮ್ - ಭೂಮಿಕಾಗೆ ಕೆಡಿ ಕಾಟ ಮಾತ್ರ ತಪಿಲ್ಲ.

ತಪ್ಪಿಲ್ಲ ಕೇಡಿ ಕಾಟ!

ಮಲ್ಲಿ ಮದುವೆ ಬಳಿಕ ಗೌತಮ್‌ ಕೆಲವು ಹನಿಮೂನ್‌ ಸ್ಥಳಗಳನ್ನು ಆಯ್ಕೆ ಮಾಡಿ ಇಟ್ಟಿದ್ದ. ಆಗ ಮಲ್ಲಿ ಕೂಡ ಒಂದು ಡಿಮ್ಯಾಂಡ್‌ ಇಟ್ಟಿದ್ದಾಳೆ. ನಾವು ಹನಿಮೂನ್‌ಗೆ ಹೋಗಬೇಕು ಅಂದರೆ ಭೂಮಿಕಾ ಹಾಗೂ ಗೌತಮ್‌ ಕೂಡ ಬರಬೇಕು ಎನ್ನುತ್ತಾಳೆ.

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

ಇತ್ತ ಇವರು ಸಂತೋಷದಲ್ಲಿ ಇದ್ದರೆ, ಅತ್ತ ಜೈದೇವ್‌ ಇನ್ನೂ ಮಾಸ್ಟರ್‌ ಪ್ಲ್ಯಾನ್‌ ಮಾಡ್ತಾನೆ ಇದ್ದಾನೆ. ನಾವು ಸೋತ್ವಿ ಅಂತ ಅಲ್ಲಿ ಸೆಲೆಬ್ರೆಟ್‌ ಮಾಡ್ತಾ ಇರಬೋದು. ಆದರೆ, ಸೋತಿರೋನ ಪ್ರತಿಕಾರದ ಬಗ್ಗೆ ಇನ್ನೂ ಗೊತ್ತಿಲ್ಲ ಅಂತ ಮತ್ತೆ ಅಬ್ಬರಿಸುತ್ತಲೇ ಇದ್ದಾನೆ ಜೈದೇವ್‌.

ಮುಂದೆ ಜೈದೇವ್‌ ಪ್ಲ್ಯಾನ್‌ ಏನು?

ಈಗ ಮಲ್ಲಿ ಕೂಡ ಪರೀಕ್ಷೆ ಪಾಸ್‌ ಆಗಿದ್ದಾಳೆ. ಹಾಗೇ ಮದುವೆ ಕೂಡ ಆಗೋಗಿದೆ. ಮುಂದೆ ಜೈದೇವ್‌ ಪ್ಲ್ಯಾನ್‌ ಏನು? ಮಲ್ಲಿನ ಸುಮ್ಮನೆ ಬಿಡ್ತಾನಾ? ಗೌತಮ್‌ ಕೂಡ ಈ ಬಾರಿ ಸುಮ್ಮನೆ ಆಗ್ತಾನಾ? ಅನ್ನೋದು ವೀಕ್ಷರಲ್ಲಿ ಇರೋ ಕುತೂಹಲ. ಅತ್ತ ಗೌತಮ್‌ ಕೂಡ ಬ್ಯುಸಿನೆಸ್‌ನಲ್ಲೂ ಮುಂದೆ ಬರುತ್ತಲೇ ಇದ್ದಾನೆ. ಪಾರ್ಥ ಈ ಬಗ್ಗೆ ಸುಳಿವೂ ಕೊಟ್ಟಿದ್ದಾಗಿದೆ. ಜೈದೇವ್‌ ತನ್ನ ಕೈಯಾರೆ ತನ್ನ ಸಾಮ್ರಾಜ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ.

ಗೌತಮ್‌ ಕೂಡ ಜೈದೇವ್‌ಗೆ ನಿನ್ನನ್ನು ನೀನು ಕಿಲಾಡಿ ಅಂದುಕೊಂಡಿದ್ದೆ. ಆದರೆ ನೀನೆ ದೊಡ್ಡ ಫೂಲ್‌ ಆಗಿಬಿಟ್ಟೆ. ಇನ್ನು ಹೋರಾಡಲ್ಲ. ಏನೇ ಇದ್ದರೂ ನೇರವಾಗಿ ಜಡ್ಜ್‌ಮೆಂಟ್‌ ಕೊಡ್ತೀನಿ ಎಂದು ಕೇಡಿ ಜೈದವ್‌ಗೆ ಎಚ್ಚರಿಕೆಯನ್ನು ನೀಡಿದ್ದಾನೆ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಖಡಕ್ ವಾರ್ನಿಂಗ್‌ನ್ನೂ ಕೂಡ ನೀಡಿದ್ದಾಳೆ. ಇನ್ನು ಜೈದೇವ್ ಸುಮ್ಮನೆ ಇರುವ ವ್ಯಕ್ತಿಯಂತೂ ಅಲ್ಲ. ಮುಂಬರುವ ದಿನಗಳಲ್ಲಿ ಮಲ್ಲಿಯನ್ನು ಖೆಡ್ಡಾಗೆ ಬೀಳಿಸಲು ಜೈದೇವ್ ಮತ್ತೊಂದು ಪ್ಲಾನ್ ಹೆಣೆಯುತ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Ram Charan: 'ಪೆದ್ದಿ' ಹೊಸ ಪೋಸ್ಟರ್‌ ಔಟ್‌; ರಿಲೀಸ್ ದಿನಾಂಕವೇ ಇಲ್ಲ, ಫ್ಯಾನ್ಸ್‌ ಶಾಕ್‌

ಅಮೃತಧಾರೆ' ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani