ಅಮೃತಧಾರೆಯಲ್ಲಿ (Amruthadhaare serial) ರೋಚಕ ಘಟ್ಟದತ್ತ ಸಾಗುತ್ತಿದೆ. ದಿಯಾ ಮತ್ತು ಅನು ಕಣ್ಮರೆಯ ಸತ್ಯವನ್ನು ಜೈದೇವನಿಂದ ಹೊರತರಲು, ಭೂಮಿಕಾ ಮತ್ತು ಮಲ್ಲಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸ್ ಅಧಿಕಾರಿ ಮಧುರಾಳನ್ನು (Madhura) ಬಳಸಿಕೊಂಡು ಜೈದೇವನ (Jaidev) ಹೆಣ್ಣಿನ ವೀಕ್ನೆಸ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.
ಜೀವಾ ಕೂಡ ಇದಕ್ಕೆ ಸಾಥ್ ಕೂಡ ಇದ್ದಾನೆ. ಜೈದೇವ್ (jaidev) ಸ್ನೇಹ ಬೆಳೆಸಿರುವ ಮಧುರಾ ಆತನೊಂದಿಗೆ ಕ್ಲೋಸ್ ಆಗಿದ್ದಾಳೆ. ಪಬ್‌ನಲ್ಲಿ ಕುಡಿದು ನಶೆಯಲ್ಲಿದ್ದ ಜೈದೇವ್‌ನನ್ನು ಮಧುರಾಳೇ ಮನೆಗೆ ಕರೆದುಕೊಂಡು ಬಂದಿದ್ದಾಳೆ.
ಅಲರ್ಟ್ ಆದ ಜೈದೇವ್
ದೇವ್ ಜೊತೆ ಮಾತನಾಡುತ್ತಾ, ದಿಯಾ ಬೇಬಿ ವಿಷಯ ಬಗ್ಗೆ ಮಧುರಾ ಕೇಳಿದ್ದಾಳೆ. ದಿಯಾ ಹೆಸರು ಕೇಳ್ತಿದ್ದಂತೆ ಅಲರ್ಟ್ ಆದ ಜೈದೇವ್, ಆಕೆ ಬಗ್ಗೆ ನಿನಗೆ ಹೇಗೆ ಗೊತ್ತು ಎಂದು ಪ್ರಶ್ನೆ ಮಾಡಿದ್ದಾನೆ., ನೀವೇ ಅಲ್ಲವಾ ದಿಯಾ ಹೆಸರು ಹೇಳಿದ್ದು ಎಂದು ಮರುಪ್ರಶ್ನೆ ಮಾಡಿದ್ದಾಳೆ.
Toxic Twitter Review: ಯಶ್ ಅಭಿನಯಕ್ಕೆ ಮನಸೋತ ಪ್ರೇಕ್ಷಕರು, ಆದ್ರೆ ನೆಟ್ಟಿಗರ ವಿಮರ್ಶೆಯೇ ಬೇರೆ!
ನನಗೆ ಯಾರ್ ಯಾರು ಮೋಸ ಮಾಡ್ತಾರೋ ಅವರೆಲ್ಲಾ ಹೋಗುವ ಜಾಗ ಅದು ಎಂದು ಹೇಳಿದ್ದಾನೆ. ಜೈದೇವ್ ಮತ್ತು ಮಧುರಾ ನಡುವಿನ ಮಾತುಗಳನ್ನು ದೂರದಿಂದಲೇ ಭೂಮಿಕಾ ಮತ್ತು ಮಲ್ಲಿ ಕೇಳಿಸಿಕೊಳ್ಳುತ್ತಿದ್ದಾರೆ.ಜೈದೇವ್ ಎಲ್ಲ ಸತ್ಯವನ್ನ ಹೇಳ್ತಾನಾ ಅನ್ನೋದೇ ಕುತೂಹಲ.

