Dailyhunt Logo
  • Light mode
    Follow system
    Dark mode
    • Play Story
    • App Story
Hari Paraak Column: ಬೇಕೂ ಅಂತ ಈ ʼಆಡುʼ ಬರೆದಿಲ್ಲ

Hari Paraak Column: ಬೇಕೂ ಅಂತ ಈ ʼಆಡುʼ ಬರೆದಿಲ್ಲ

Vishwavani 3 months ago

ತುಂಟರಗಾಳಿ

ಸಿನಿಗನ್ನಡ

ರ್ಸೆ ಸರ್ಸೆ' ಥರದ ಹಾಡನ್ನ ಪ್ರೇಮ್ ಯಾಕೆ ಬರೆದ್ರು ಅನ್ನೋದು ವಿಚಿತ್ರ. ಅವರು ಈ ಹಾಡು ಬರೆದಾಗ ಅವರ ಸುತ್ತಮುತ್ತ ಇರೋರು ಯಾರೂ 'ಇದು ಅಸಹ್ಯವಾಗಿದೆ' ಅಂತ ಹೇಳಲಿಲ್ಲವಾ? ಹೇಳಿರಬಹುದು. ಆದರೆ, 'ಅ'ಕಾರ, 'ಹ'ಕಾರ ಸರಿ ಇಲ್ಲ ಅಂತ ಹಾಹಾಕಾರ ಎದ್ದಾಗಲೂ ಪ್ರೇಮ್ ಕೇರ್ ಮಾಡಲಿಲ್ಲ.

ಇದು ಸರಿ ಇಲ್ಲ ಅಂತ ಹೇಳಿದ್ರೆ, "ಇರ್ಲಿ ಬಿಡ್ರಿ, ಏನಾಗಲ್ಲ" ಅನ್ನೋ ಮನೋಭಾವನೆ ಪ್ರೇಮ್ ಅವರದ್ದು. ಅವರ ಜತೆ ಕೆಲಸ ಮಾಡಿದ ಅನೇಕರು ಈ ಬಗ್ಗೆ ಹೇಳಿಕೊಂಡಿದ್ದಾರೆ.

"ಸರ್, ಕನ್ನಡ ಪದ ಉಚ್ಚಾರಣೆ ಸರಿ ಇಲ್ಲ" ಅಂದ್ರೆ. "ಅಯ್ಯೋ, ನಾನ್ ಹಾಡೋದೇ ಹಿಂಗೆ ಏನಿವಾಗ?" ಅಂತ ಅವರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸಿ ಇಗ್ನೋರ್ ಮಾಡುತ್ತಿದ್ದರಂತೆ ಪ್ರೇಮ. ಈ ಹಾಡಿನ ವಿಷಯದಲ್ಲೂ ಅದೇ ಆಗಿರಬಹುದು. ಆದರೂ ಇಂಥ ಹೊಲಸು ಹಾಡು ಬರೆಯೋ ಅವಶ್ಯಕತೆ ಏನಿತ್ತು ಪ್ರೇಮ್ ಅವರಿಗೆ? ಅಂತ ಯೋಚನೆ ಮಾಡಿದರೆ ಅದಕ್ಕೆ ಉತ್ತರ ಸಿಗೋದು ಕಷ್ಟ.

ಹಾಗಂತ ಈ ರೀತಿ ಯಾರೂ ಬರೆದಿಲ್ಲ ಅಂತ ಹೇಳೋಕೆ ಆಗಲ್ಲ. ಅನೇಕರು ಇದಕ್ಕಿಂತ ಹೊಲಸು ಹಾಡು, ಸಂಭಾಷಣೆ ಬರೆದಿದ್ದಾರೆ. ಆದರೆ ಅವರೆಲ್ಲ ಯಾರೋ 'ಬಿ ಗ್ರೇಡ್' ಸಿನಿಮಾ ಮಾಡುವವರು. ಆದರೆ, ಕನ್ನಡ ಚಿತ್ರರಂಗದ ನಿರ್ದೇಶಕರ ಹೆಸರುಗಳು ಬಂದಾಗ 'ಎ ಗ್ರೇಡ್'ನಲ್ಲಿ ಇರುವ ಪ್ರೇಮ್ ಅವರಿಗೆ ಇಂಥ ಹಾಡು ಬರೆಯೋ ಅನಿವಾರ್ಯತೆ ಖಂಡಿತ ಇರಲಿಲ್ಲ. ಇನ್ನು ಚಿತ್ರದ ಗಳಿಕೆಯ ವಿಷಯಕ್ಕೆ ಬಂದರೆ, ಒಂದು ಅಶ್ಲೀಲ ಹಾಡಿನಿಂದ ಒಂದು ಸಿನಿಮಾ 500 ಕೋಟಿ ರುಪಾಯಿ ಗಳಿಕೆ ಮಾಡುತ್ತೆ ಅಂತಾಗಿದ್ರೆ, ಹೋಗ್ಲಿ ಬಿಡಪ್ಪ ದುಡ್ಡಿನ ಆಸೆಗೆ ಬರೆದಿದ್ದಾರೆ ಅನ್ನಬಹುದು.

Hari Paraak Column: MOMO ಮತ್ತು MEME

ಆ ಸಾಧ್ಯತೆಯೂ ಇಲ್ಲ. ಹೋಗ್ಲಿ ಅಂದ್ರೆ ರಾಮ್‌ಗೋಪಾಲ್ ವರ್ಮಾ ಅವರ ಥರ ತೀರಾ ಮಾನಸಿಕವಾಗಿ ಗತಿಗೆಟ್ಟ ಅಥವಾ ಎಲ್ಲವನ್ನೂ ಬಿಟ್ಟ ಪರಿಸ್ಥಿತಿ ಪ್ರೇಮ್‌ಗೆ ಬಂದಿದೆಯಾ? ಇಲ್ಲ, ಪ್ರೇಮ್ ಅವರು ಈಗಲೂ ನಮ್ಮ ಸ್ಯಾಂಡಲ್‌ವುಡ್‌ನ ಭರವಸೆಯ, ಬೇಡಿಕೆ ಇರೋ ನಿರ್ದೇಶಕ. ಅವರ ಚಿತ್ರಗಳ ಮೇಲೆ ಅವರ ಪ್ರತಿಭೆಯ ಮೇಲೆ ಜನರಿಗೆ, ಉದ್ಯಮಕ್ಕೆ ಇನ್ನೂ ಸಾಕಷ್ಟು ನಂಬಿಕೆ ಇದೆ. ಅವರು ಹೀಗೆ ಮಾಡಿರೋದು ನಿಜಕ್ಕೂ ನಂಬೋಕೆ ಕಷ್ಟ.

ಲೂಸ್‌ ಟಾಕ್ - ಪ್ರೇಮ್

ಏನ್ ಸರ್, ಎಲ್ಲಿ ನೋಡಿದ್ರೂ ನಿಮ್ಮ ಸೆರಗಿನ ಹಾಡಿನದ್ದೇ ಹವಾ, ಹೆಂಗೋ ಒಟ್ಟು ನಿಮ್ಮ ಹಾಡುಗಳನ್ನ ಹಿಟ್ ಮಾಡಿಬಿಡ್ತೀರಾ ಅಲ್ವಾ?

- ಏನ್ರೀ, ಆಡಿಕೊಳ್ತೀರಾ? ನನ್ನ ಕಷ್ಟ ನಂಗೆ, ಒಳ್ಳೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ಹಾಗೆ ಆಗಿದೆ.‌

ಅದೂ ಸರಿ, ಆದ್ರೆ ಇಂಥ ಹಾಡು ಬರೆಯೋ ಅವಶ್ಯಕತೆ ಏನಿತ್ತು ನಿಮಗೆ?

- ಅದೇನಂದ್ರೆ ನಾನು ಬೇಕು ಅಂತ ಈ 'ಆಡು' ಬರೆದಿಲ್ಲ... ಬರೀವಾಗ..

ಸರ್, ಅದು ಹಾಡು; ಆಡು ಅಲ್ಲ

- ಅಯ್ಯೋ, ಎಲ್ಲಾ ಒಂದೇ ಬಿಡ್ರೀ, ಅದೇನ್ ತಪ್ಪಲ್ಲ

ಇದಕ್ಕೇ ನಿಮಗೆ ಈಗ ಈ ಪರಿಸ್ಥಿತಿ ಬಂದಿರೋದು. ಸರಿ, ಬಿಸಿಬಿಸಿ ಹಾಡಿನ ಬಿಸಿ ತುಂಬಾನೇ ತಟ್ಟಿದೆ ಅನ್ಸುತ್ತೆ?

- ಹೌದ್ರೀ, ಅರಗಿನ ಮನೆಗೆ ಬೇಗ ಬೆಂಕಿ ಬೀಳುತ್ತೆ ಅಂತಾರೆ, ಆದ್ರೆ ಸೆರಗಿನ ಮನೆಗೆ ಇನ್ನೂ ಬೇಗ ಬೀಳುತ್ತೆ.

ಮತ್ತೆ ಈಗ ಹಾಡಿನ ಸಾಹಿತ್ಯ ಬದಲಾಯಿಸ್ತೀನಿ ಅಂತಿದ್ದೀರ?

- ಹೌದು ಮತ್ತೆ, ಸೆರಗು ಮುಳ್ಳಿನ ಮೇಲೆ ಬಿದ್ರೂ, ಮುಳ್ಳು ಸೆರಗಿನ ಮೇಲೆ ಬಿದ್ರೂ ನಿಧಾನಕ್ಕೆ ಉಪಾಯ ವಾಗಿ ಬಿಡಿಸಿಕೊಳ್ಳಬೇಕು, ಇಂದ್ರೆ ಹರಿದು ಹೋಗೋದು ಸೆರಗೇ..‌

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಒಂದು ದಿನ ಆಫೀಸಿಗೆ ಹೋಗುವಾಗ ಬೈಕಿನಿಂದ ಬಿದ್ದು ಕಾಲಿಗೆ ದೊಡ್ಡ ಪೆಟ್ಟಾ ಯಿತು. ಡಾಕ್ಟರ್ ಹತ್ರ ಹೋಗಿ ಕೇಳಿದಾಗ ಮೂಳೆ ಮುರಿದಿರುವುದು ಗೊತ್ತಾಯಿತು. ಎಲ್ಲಾ ಟೆಸ್ಟ್‌ʼಗಳನ್ನೂ ಮಾಡಿದ ನಂತರ ಖೇಮುಗೆ ಡಾಕ್ಟರ್, "ನಿಮಗೆ ಆರು ತಿಂಗಳ ಬೆಡ್ ರೆಸ್ಟ್ ಅವಶ್ಯಕತೆ ಇದೆ. ಅಲ್ಲಿವರೆಗೂ ಹೆಚ್ಚು ಸ್ಟ್ರೈನ್ ಮಾಡಿಕೊಳ್ಳಬೇಡಿ" ಅಂತ ಹೇಳಿದರು. ‌

ಸರಿ ಎಂದು ಆಸ್ಪತ್ರೆಯಿಂದ ಹೊರಡುತ್ತಿದ್ದಂತೇ ಅಲ್ಲಿ ಇನ್ನೊಬ್ಬ ರೋಗಿಯನ್ನು ಟ್ರೀಟ್ ಮಾಡಲಾಗುತ್ತಿತ್ತು. ಅವನಿಗೂ 'ಸೇಮ್-ಟು-ಸೇಮ್' ಖೇಮುಗೆ ಆದಂಥ ಪೆಟ್ಟೇ ಆಗಿತ್ತು. ಅವನಿಗೂ ಡಾಕ್ಟರ್ ಆರು ತಿಂಗಳ ರೆ ಹೇಳಿದ್ದರು.

ಆ ಪೇಷಂಟ್ ಡಾಕ್ಟರ್‌ರನ್ನು ಕೇಳುತ್ತಿದ್ದ "ಡಾಕ್ಟರ್ ಆರು ತಿಂಗಳ ನಂತರ ನಾನು ಸ್ವಿಮ್ಮಿಂಗ್ ಮಾಡಬಹುದೇ?" ಅಂತ. ಡಾಕ್ಟರ್ "ಮಾಡಬಹುದು" ಅಂದ್ರು. ಅದನ್ನು ಖೇಮು ಕೇಳಿಸಿಕೊಂಡ. ನಂತರ ತಾನೂ ಕೇಳಿದ- "ಡಾಕ್ಟರ್, ಆರು ತಿಂಗಳ ನಂತರ ನಾನು ಸ್ವಿಮ್ಮಿಂಗ್ ಮಾಡೋಕೆ ಆಗುತ್ತಾ?".

ಡಾಕ್ಟರ್ "ಅದಕ್ಕೇನಂತೆ, ಧಾರಾಳವಾಗಿ ಮಾಡಬಹುದು. ಈಗ ಹೊರಡಿ. ನಾನು ತಿಂಗಳಿ ಗೊಮ್ಮೆ ನಿಮ್ಮ ಮನೆಗೇ ಬಂದು ನಿಮ್ಮ ಚೆಕಪ್ ಮಾಡುತ್ತೇನೆ" ಎಂದು ಹೇಳಿ ಕಳುಹಿಸಿ ದರು. ಸರಿ, ಖೇಮು ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳಲಾರಂಭಿಸಿದ. ಆದರೆ ಅವನಿಗೆ ಸ್ವಿಮ್ಮಿಂಗ್ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಪ್ರತಿ ಬಾರಿ ಡಾಕ್ಟರ್ ಮನೆಗೆ ಬಂದಾಗಲೂ ಖೇಮು ಕೇಳುತ್ತಿದ್ದ, "ಡಾಕ್ಟರ್ ಆರು ತಿಂಗಳ ನಂತರ ನಾನು ಸ್ವಿಮ್ಮಿಂಗ್ ಮಾಡೋಕೆ ಆಗುತ್ತಾ?". ಡಾಕ್ಟರ್ ಪ್ರತಿಬಾರಿಯೂ "ಅದಕ್ಕೇನಂತೆ, ಧಾರಾಳವಾಗಿ ಮಾಡಬಹುದು" ಎನ್ನುತ್ತಿದ್ದರು. ಸರಿ ಆರು ತಿಂಗಳು ಕಳೆಯಿತು. ಖೇಮು ಕಾಲು ಸರಿ ಹೋಯಿತು. ಒಂದು ದಿನ ಸಂಜೆ ಸೀದಾ ಮನೆಯ ಹತ್ತಿರ ಇದ್ದ ಕೆರೆಗೆ ಹೋಗಿ ಶರ್ಟ್ ಪ್ಯಾಂಟ್ ಬಿಚ್ಚಿ ನೀರಿ ನೊಳಕ್ಕೆ ಖುಷಿಯಿಂದ ಹಾರಿದ. ಆದರೆ ಕೈ ಕಾಲು ಆಡಿಸಲಾಗದೇ ಮುಳುಗಿ ಹೋಗುತ್ತಿದ್ದ ಅವನನ್ನು ಅ ಇದ್ದ ಕೆಲವರು ಹಾಗೋ ಹೀಗೋ ಮೇಲಕ್ಕೆತ್ತಿ ತಂದು ದಡಕ್ಕೆ ಸೇರಿಸಿದರು. ಉಸ್ಸಪ್ಪಾ ಎಂದು ಉಸಿರು ಬಿಟ್ಟ ಖೇಮು ತನ್ನ ಗೊಣಗಿಕೊಂಡ "ಆ ಡಾಕ್ಟರ್ ಬಡ್ಡಿಮಗ, ಕಾಲು ಸರಿಹೋದ ಮೇಲೆ ಸ್ವಿಮ್ಮಿಂಗ್ ಮಾಡಬಹುದು ಅಂತ ಸುಳ್ಳು ಹೇಳಿದ. ಸ್ವಿಮ್ಮಿಂಗ್ ಮಾಡಬೇಕು ಅಂದ್ರೆ ಸ್ವಿಮ್ಮಿಂಗ್ ಕಲೀಲೇಬೇಕು ಅನ್ಸುತ್ತೆ. ಅದನ್ನವನು ಹೇಳಲೇ ಇಲ್ಲ"

ಲೈನ್‌ ಮ್ಯಾನ್

ನಾನೊಂದು ಕಡೆ, ನೀನೊಂದು ಕಡೆ ಅಂತಾಗಿರುವ ಸುದೀಪ್

- ದರ್ಶನ್ ಅವರದ್ದು ಈಗ

- ದೋ 'ಸ್ಥಾನ'

ಕೆಲಸದಾಕೆ ಆಡುವ ಮಾತು

- 'ಬಾಯಿ' ಮಾತು

ಬರದೇ ಇರೋ ವ್ಯವಹಾರ ಮಾಡಿ ಹೊಡೆತ ತಿಂದ ಗುರುತು

- ಟ್ರೇಡ್ 'ಮಾರ್ಕ್'

ದೇಶದಲ್ಲಿ ಕೃಷಿಯನ್ನು ಪ್ರಮೋಟ್ ಮಾಡುವ ಸ್ಲೋಗನ್

- ಗ್ರೋ ಇಂಡಿಯಾ ಗ್ರೋ

ಮನೆ ಮನೆ ಸುತ್ತುವ ಸೇಲ್ಸ್ ಮನ್‌ಗಳಿಗೊಂದು ಹೆಸರು

- ಅಲೆ 'ಮಾರಿ'

ಕ್ರಿಕೆಟಿಗರು ಸಿನಿಮಾರಂಗಕ್ಕೆ ಬಂದರೆ:

ಮಹೇಂದ್ರ ಸಿಂಗ್ ಧೋನಿ

- ಯಾವಾಗಲೂ ಹೆಲಿಕಾಪ್ಟರ್ 'ಶಾಟ್'ನೇ ಇಡ್ತಾರೆ.

ಆಸ್ಟ್ರೇಲಿಯಾದ ಕ್ರಿಕೆಟಿಗರು

- ಟಿಕೆಟ್ ಹರಿಯದೇ ಪ್ರೇಕ್ಷಕರನ್ನು ಹಂಗೇ ಒಳಗೆ ಬಿಟ್ಟು ನಿರ್ಮಾಪಕರಿಗೆ ಮೋಸ ಮಾಡ್ತಾರೆ

ಯುವರಾಜ್ ಸಿಂಗ್

- ಹೀರೋಗೆ ಕ್ಯಾನ್ಸರ್ ಇದ್ರೂ ಕೊನೆಗೆ ಬದುಕುವ ಕ್ಲೈಮ್ಯಾಕ್ಸ್ ಇರುತ್ತೆ

ವಿರಾಟ್ ಕೊಹ್ಲಿ

- ಇನ್ನೊಬ್ಬರು 'ಬೆರಳು ತೋರಿಸೋಕೆ' ಆಗದೇ ಇರೋ ಥರ ಸಿನಿಮಾ ಮಾಡ್ತಾರೆ

ವೀರೇಂದ್ರ ಸೆಹ್ವಾಗ್

- ಅವರ ಸಿನಿಮಾ 94ನೇ ದಿನ ಆದ ಮರುದಿನವೇ 100ನೇ ದಿನ ಪ್ರದರ್ಶನ ಕಾಣುತ್ತದೆ.

ರಾಹುಲ್ ದ್ರಾವಿಡ್

- ಇವರ ಸಿನಿಮಾನ ತೆರೆಯ ಬದಲು 'ವಾಲ' ಮೇಲೆ ತೋರಿಸಲಾಗುತ್ತದೆ.

ಆಲಿಯಾ ಭಟ್

- ಕ್ರಿಕೆಟ್ ಆಡೋಕೆ ಬಂದ್ರೆ ಬ್ಯಾಟಿಂಗಿಗೆ ಬಂದಾಗ, ಅಂಪೈರ್ ಹತ್ರ ಹೋಗಿ 'ಸಿಂಗಲ್ ತೆಗೆಯೋಣ, ನಾನು ಹೊಡೆದ ತಕ್ಷಣ ಬೇಗ ಓಡಿ ಬಾ' ಅಂತ ಹೇಳಿ ಹೋಗ್ತಾಳೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani