Dailyhunt Logo
  • Light mode
    Follow system
    Dark mode
    • Play Story
    • App Story
Hari Paraak Column: ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ

Hari Paraak Column: ಮೂಗು ತೂರಿಸೋ ಕೆಲ್ಸ ಮತ್ತು ಮೂಗು ತುರಿಸೋ ಕೆಲ್ಸ

Vishwavani 3 weeks ago

ತುಂಟರಗಾಳಿ

ಸಿನಿಗನ್ನಡ

ಟಾಕ್ಸಿಕ್ ಸಿನಿಮಾದ ಬಗ್ಗೆ ಬಹುತೇಕ ನೆಗೆಟಿವ್ ಕಾಮೆಂಟ್‌ಗಳು ಬರ್ತಾ ಇರೋದು ನೋಡಿ ಹಲವರಿಗೆ ಸಮಾಧಾನ ಆಗ್ತಿದೆ. ಕೆಲವರು ಮುಲಾಜಿಲ್ಲದೆ ಡಬ್ಬಾ ಸಿನಿಮಾ ಅಂದ್ರೆ ಇನ್ನು ಕೆಲವರು ಇಷ್ಟು ದಿನ ನಾವೇ ಹಾಡಿ ಹೊಗಳಿದ ಸಿನಿಮಾವನ್ನು ಹೇಗೆ ಬಯ್ಯೋದು ಅಂತ ಪರವಾಗಿಲ್ಲ ಒಂದ್ಸಲ ನೋಡಬಹುದು ಅಂತಿದ್ದಾರೆ.

ಆದರೆ ಸಂಪೂರ್ಣ ತೃಪ್ತನಾದ ಒಬ್ಬನೇ ಒಬ್ಬ ಪ್ರೇಕ್ಷಕ ನಂತೂ ಸಿಗುತ್ತಿಲ್ಲ.

ಸಿನಿಮಾ ತಂಡ ದವರೇನೋ ಕೋರ್ಟಿಗೆ ಹೋಗಿ ಯಾರೂ ಚಿತ್ರದ ಬಗ್ಗೆ ನೆಗೆಟಿವ್ ಮಾತಾಡು ವಂತಿಲ್ಲ ಅಂತ ಆದೇಶ ತಂದರೂ ನೆಗೆಟಿವ್ ಕಾಮೆಂಟ್‌ಗಳ ಹಾವಳಿ ನಿಂತಿಲ್ಲ. ಅದರಲ್ಲೂ ಮೊದಲಿನಿಂದಲೂ ಟಾಕ್ಸಿಕ್ ಬಗ್ಗೆ ಐ ವಿಲ್ ಟಾಕ್-ಸಿಕ್ ಓನ್ಲೀ ಅಂತಿದ್ದ ನಟಿ ರಿಶಿಕಾ ಸಿಂಗ್ ಅವರಂಥವರು ಈಗ ತೋಳ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಎನ್ನುವಂತೆ ತಮ್ಮ ವರಸೆ ಮುಂದುವರಿಸುತ್ತಿದ್ದಾರೆ. ಈಗ ಗೊತ್ತಾಯ್ತಾ ಅಂತ ಯಶ್ ಅವರನ್ನು ಗೇಲಿ ಮಾಡು ತ್ತಿದ್ದಾರೆ.

ಸಿನಿಮಾದಲ್ಲಿ ಸೆಕ್ಸ್, ಹಿಂಸೆ, ಆಕ್ಷನ್ ಜಾಸ್ತಿ ಆಯ್ತು ಅನ್ನೋದು ಕೆಲವರ ಮಾತು. ಆದರೆ ಇದೆಲ್ಲ ಇದ್ದ ಅನಿಮಲ್‌ನಂತಹ ಅನೇಕ ಸಿನಿಮಾಗಳು ಗೆದ್ದ ಉದಾಹರಣೆ ಇದೆ. ಅದೇನೋ ಟಾಕ್ಸಿಕ್ ಗೆ ಆ ಯೋಗ ಇಲ್ಲ ಅಷ್ಟೇ.

ಬಾಕ್ಸ್ ಆಫೀಸ್ ವಿಷಯದಲ್ಲಿ ಮೊದಲ ದಿನ ವಿಶ್ವದಾದ್ಯಂತ 150 ಕೋಟಿ ರುಪಾಯಿ ಮಾಡಿರೋ ಟಾಕ್ಸಿಕ್ ಗಳಿಕೆ ವಿಷಯದಲ್ಲಿ ಹಿಂದೆ ಬಿದ್ದಿಲ್ಲವಾದರೂ ಪ್ರೇಕ್ಷಕರ ಹೊಗಳಿಕೆ ವಿಷಯದಲ್ಲಿ ತೀರ ಹಿಂದೆ ಬಿದ್ದಿರೋದು ಚಿತ್ರದ ತೆರೆಯ ಮೇಲಿನ ದೃಶ್ಯಗಳಿಗಿಂತ ಸ್ಪಷ್ಟವಾಗಿ ಕಾಣ್ತಾ ಇದೆ. ಹಾಗಾಗಿ ಈಗ ಯಶ್ ಅಭಿಮಾನಿಗಳು ಟಾಕ್ಸಿಕ್ ಅನ್ನು ಹಿಂದೆ ಹಾಕಿ ರಾಮಾಯಣದಲ್ಲಿ ರಾವಣನ ಪಾತ್ರ ದಲ್ಲಿ ಅಬ್ಬರಿಸಲಿರುವ ಯಶ್‌ಗಾಗಿ ಕಾಯುತ್ತಿದ್ದಾರೆ.‌

Hari Paraak Column: ದರ್ಶನ್ ಕೇಳ್ತಾ ಇರೋ ಸುದ್ದಿ- 'ಪ್ರದೋಷ' ಸಮಾಚಾರ

ಲೂಸ್‌ ಟಾಕ್‌ -ಟ್ರಾಫಿಕ್‌ ಪೊಲೀಸ್

ಏನ್ ಸಾರ್, ಎಷ್ಟೋ ವರ್ಷದಿಂದ ಟ್ರಾಫಿಕ್ಕಲ್ಲಿ ಸಿಕ್ಕಾಕ್ಕೊಂಡಿದೀರಲ್ಲ?

- ಅಯ್ಯೋ ಸಾಕಾಗಿ ಹೋಗಿದೆ ಬಿಡ್ರಿ, ಪ್ರಮೋಷನ್ ತಗೊಂಡು ಮುಂದಕ್ಕೋಗೋಣ ಅಂದ್ರೆ ಏನ್ಮಾಡಿದ್ರೂ ಗ್ರೀನ್ ಸಿಗ್ನಲ್ ಬೀಳ್ತಿಲ್ಲ.

ಎಲ್ಲೋ ಹೋಗಿ ಒದ್ದಾಡೋಕಿಂತ ಸದ್ಯಕ್ಕೆ 'ಎ' ಲೈಟ್ ಇದೆ ಅಂದ್ಕೊಂಡ್ ವೆಯ್ಟ್ ಮಾಡಿ. ಅದ್ ಬಿಡಿ ನೀವು ಯಾವಾಗ್ಲೂ ಇನ್ನೊಬ್ಬರ ಕಡೆ ಕೈತೋರಿಸೋ ಕೆಲ್ಸ ಮಾಡ್ತೀರಲ್ಲ, ಸರೀನಾ?

- ಇಲ್ಲ ರೀ, ನಮ್ಮ ಕೆಲಸ ಬರೀ ದಾರಿ ತೋರಿಸೋದು. ನಾನು ಕೈ ತೋರಿಸೋ ಕೆಲ್ಸ, ಮೂಗು ತೂರಿಸೋ ಕೆಲ್ಸ ಮಾಡೋವ್ನಲ್ಲ. ಏನೋ ಆಗಾಗ ಇಲ್ಲಿ ನಿಂತು ಮೂಗು ತುರಿಸೋ ಕೆಲ್ಸ ಮಾಡ್ತೀನಿ ಅಷ್ಟೇ.

ಸರಿ, ಸಿಗ್ನಲ್‌ನಲ್ಲಿ ನಿಂತು ನಿಂತು ಸಾಕಾಗಿಲ್ವಾ?

- ಹಂಗಂತ ಇನ್ನೇನು, ನಿಂತ್ಕೊಂಡ್ ನಿಂತ್ಕೊಂಡ್ ತುಂಬಾ ಅನುಭವ ಇದೆ ಅಂತ ಎಲೆಕ್ಷನ್ನಿಗೆ ನಿಂತ್ಕೊಳ್ಳೋಕಾಗುತ್ತ?

ಆದ್ರೂ ಈ ಟ್ರಾಫಿಕ್‌ನಲ್ಲಿ...

- ಅಯ್ಯೋ, ಬಿಡಿ ಸಾರ್, ಅದೇ ಟ್ರಾಫಿಕ್ ಅಂತ ಎಷ್ಟು ಸಲ ಹೇಳ್ತೀರ, ಸದ್ಯಕ್ಕೆ ಟ್ರಾಫಿಕ್ ಅಲ್ಲ ಟಾಕ್ಸಿಕ್ ಹವಾ ಇದೆ ಅದರ ಬಗ್ಗೆ ಕೇಳಿ

ಸರಿನಪ್ಪಾ, ಟಾಕ್ಸಿಕ್ ನೋಡಿದ್ರಾ, ಹೆಂಗಿದೆ?

- ಅದೊಂದ್ ಗೋಳು, ಇಲ್ಲಿ ಟ್ರಾಫಿಕ್‌ನಲ್ಲಿ ಹೊಗೆ ಜಾಸ್ತಿ ಅಂತ ಸಿನಿಮಾ ನೋಡೋಕೆ ಹೋದ್ರೆ ಅಲ್ಲೂ ಸ್ಕ್ರೀನ್ ತುಂಬಾ ಹೊಗೆ, ಇನ್ನು ಸಿನಿಮಾ ನೋಡಿದ ಪ್ರೇಕ್ಷಕರು ಕೂಡಾ ಸಿನಿಮಾ ಹೊಗೆ ಅಂತಿದ್ದಾರೆ. (ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್ ‌

ಗಂಡ ಹೆಂಡ್ತಿ ಎರಡೂವರೆ ವರ್ಷದ ಮಗಳು ಮಾತ್ರ ಇದ್ದ ಮನೆ ಅದು. ಒಮ್ಮೆ ಹೆಂಡತಿ ಶಾಪಿಂಗ್‌ಗೆ ಅಂತ ಹೊರಗೆ ಹೋದ್ರು, ಗಂಡ ತನ್ನ ಡ್ರಾಯಿಂಗ್ ರೂಮ್‌ನಲ್ಲಿ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾ ಕೂತಿದ್ದ. ಅಷ್ಟರಲ್ಲಿ ಪುಟ್ಟ ಮಗಳು ಅಪ್ಪನ ಬಳಿ ಬಂದಳು. ಅವಳ ಕೈಯಲ್ಲಿ ಅವಳ ಹುಟ್ಟುಹಬ್ಬಕ್ಕೆಂದು ಯಾರೋ ಕೊಡಿಸಿದ ಟೀ ಸೆಟ್ ಇತ್ತು. ಅದು ಅವಳ ಅಚ್ಚುಮೆಚ್ಚಿನ ಆಟಿಕೆ. ಅಪ್ಪನ ಬಳಿ ಬಂದವಳೇ ಮುದ್ದು ಮುದ್ದಾಗಿ 'ಪಪ್ಪಾ, ಪಪ್ಪಾ ನಿಂಗೆ ಟೀ ಬೇಕಾ?' ಅಂದ್ಳು, ಅಪ್ಪ ಮಗಳು ಕೇಳಿದ್ದು ನೋಡಿ ಖುಷಿಯಾಗಿ 'ಹೂ' ಅಂದ.

ಮಗಳು ಒಳಗೆ ಓಡಿ ಹೋಗಿ, ಒಂದು ನಿಮಿಷದ ನಂತರ ಬಂದು 'ಪಪ್ಪ ಟೀ' ಅಂತ ಕಪ್ ಕೊಟ್ಟಳು. ಅದರಲ್ಲಿ ಬರೀ ನೀರಿತ್ತು. ಆದ್ರೂ, ಮಗಳು ಖುಷಿಯಾಗಲಿ ಅಂತ ಅಪ್ಪ ಅದನ್ನು ಕುಡಿದು 'ಟೀ ಸೂಪರ್ ಪುಟ್ಟಿ' ಅಂದ. ಮಗು ಫುಲ್ ಖುಷ್. ಮತ್ತೆ 5 ನಿಮಿಷದ ನಂತರ ಅಪ್ಪನ ಬಳಿ ಬಂದ ಮಗಳು ಮತ್ತೆ 'ಪಪ್ಪ ಟೀ ಬೇಕಾ?' ಅಂದ್ಳು. ಇವನು ಕೊಡು ಅಂದ. ಮತ್ತೆ ನೀರು ತಂದು ಕೊಟ್ಟಳು. ಇವನು ಕುಡಿದ. ಇದು ಮತ್ತೆ ಮತ್ತೆ ಹೆಂಡತಿ ಮನೆಗೆ ಬರೋವರೆಗೂ ನಡೆದೇ ಇತ್ತು.

ಹೆಂಡತಿ ಬಂದ ಕೂಡಲೇ ಗಂಡ ಉತ್ಸಾಹದಿಂದ ಹೇಳಿದ 'ಈಗ ನೋಡು ನನ್ನ ಮಗಳು ಏನ್ ಮಾಡ್ತಾಳೆ' ಅಂತ ಹೆಂಡತಿಗೆ ಹೇಳುತ್ತಿದ್ದಂತೆ ಮಗು ಮತ್ತೆ ಡ್ರಾಯಿಂಗ್ ರೂಮ್‌ಗೆ ಬಂತು. 'ಪಪ್ಪಾ ಪಪ್ಪಾ ಟೀ ಬೇಕಾ?' ಅಂತ ಕೇಳ್ತು. ಇವನು 'ಬೇಕು' ಅಂದ. ಮಗಳು ಒಳಗೆ ಹೋಗಿ ನೀರು ತಂದು ಕೊಟ್ಟಳು. ಇವನು ಅದನ್ನು ಕುಡಿದು 'ಟೀ ಸೂಪರ್ ಆಗಿದೆ ಪುಟ್ಟಿ' ಅಂದ. ಇದನ್ನೆ ನೋಡುತ್ತಿದ್ದ ಹೆಂಡತಿ ಮೆತ್ತಗೆ ಹೇಳಿದಳು 'ಸರಿ, ಮುದ್ದಿನ ಮಗಳು ತಂದ್ಕೊಂಡ್ತಿದಾಳೆ ಅಂತ ಖುಷಿಲೀ ಕುಡೀತಿದೀರಿ. ಎಂಜಾಯ್ ಮಾಡಿ. ಆದ್ರೆ ನಿಮಗೆ ಒಂದ್ ವಿಷ್ಯ ಗೊತ್ತಿರ್ಲಿ, ನಮ್ ಮಗಳು ಇರೋ ಹೈಟ್‌ಗೆ ಇಡೀ ಮನೇಲಿ ಅವಳಿಗೆ ಎಟುಕೋದು ಅಂದ್ರೆ ಟಾಯ್ಲೆಟ್ ಕಮೋಡ್‌ನಲ್ಲಿರೋ ನೀರು ಮಾತ್ರ'

ಲೈನ್‌ ಮ್ಯಾನ್

ಅಕ್ಕತಂಗಿಯರನ್ನು ಪ್ರೀತಿಸುವ ಎಲ್ಲ ಅಣ್ಣ ತಮ್ಮಂದಿರಿಗೂ ಹೇಳೋ ಮಾತು

- ಬೆಹನಾ ಹೈ ತೇರೇ ದಿಲ್ ಮೇ

ಹನಿ ಟ್ರ್ಯಾಪ್‌ಗೆ ಬಲಿ ಆದವರ ಮಾತು

- ಹನಿ ಹನಿ ಕೂಡಿದ್ರೆ 'ಹಳ್ಳ'

ಇಂದಿರಾ ಕ್ಯಾಂಟೀನ್ ಥರ ಬಿಜೆಪಿಯೋರು ಕ್ಯಾಂಟೀನ್ ಶುರು ಮಾಡಿದ್ರೆ

- ಅಲ್ಲಿ ಸಿಗೋದು ಬರೀ ಕೇಸರಿ ಬಾತ್

ಇಂದಿರಾ ಕ್ಯಾಂಟೀನ್ ಮಾಡಿದ ಸಿದ್ರಾಮಯ್ಯ ಮೋದಿಗೆ ಹೇಳಿದ ಮಾತು

- ಸಾರ್, ನಂ ಜನಕ್ಕೆ ಮನ್ ಕೀ ಬಾತ್‌ಗಿಂತ ಅವಶ್ಯಕವಾಗಿ ಬೇಕಿರೋದು ರೈಸ್ ಬಾತ್ ನೆಮ್ಮದಿ

- ಲೋಕದಾ ಡೊಂಕು ನೀವೇಕೆ ತಿದ್ದುವಿರಿ, ಲೋಕಲ್ಲು ಡ್ರಿಂಕನ್ನು ಕುಡಿದು ನಿಮ್ಮ ನಿಮ್ಮ ತನುಮನವ ಸಂತೈಸಿಕೊಳ್ಳಿ

ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಿ ಎಲ್ಲರಿಂದಲೂ ಹೊಗಳಿಸಿಕೊಳ್ಳುವವ - ತಲೈವ ಎಲ್ಲರಿಗೂ ಕೆಟ್ಟದ್ದು ಮಾಡಿ, ಎಲ್ಲರಿಂದ 'ಉಗಿಸಿಕೊಳ್ಳುವವ' - 'ಸಲೈವ'

ನೀವುಆಲ್ಕೊಹಾಲಿಕ್ಆಗಿದ್ದರೆತಕ್ಷಣಕರೆಮಾಡಿ, ನಾವುನಿಮಗೆಸಹಾಯಮಾಡುತ್ತೇವೆಅನ್ನೋಆಡ್ನೋಡಿಕಾಲ್ಮಾಡಿದಾಗಕಡೆಯಿಂದಬಂದಉತ್ತರ

- 'ಎರಡು ಪುಲ್ ಬಾಟಲ್ ತಗೊಂಡ್ರೆ ಒಂದ್ ಕ್ವಾರ್ಟರ್ ಫ್ರೀ'

ಹೆಂಡ್ತಿ ಮಾತು

- ಹೆಂಡ್ತಿ ಮಾತು ಅಂದ್ರೆ ವೆಬ್ ಸೈಟ್‌ಗಳಲ್ಲಿರೋ 'ಟರ್ಮ್ಸ್ ಆಂಡ್ ಕಂಡೀಷನ್ಸ್' ಓದಿದ ಹಾಗೆ ಏನೂ ಅರ್ಥ ಆಗದಿದ್ರೂ ಸುಮ್ಮೆ 'ಐ ಅಗ್ರೀ' ಅಂತೀವಿ.

ಕಾರ್ಪೊರೇಟ್ ಸತ್ಯ

- ಬಾಸ್ ಹೊಸಾ ಕಾರಿಂದ ಇಳಿದ. ಅವನ ಆಫೀಸ್ ಉದ್ಯೋಗಿ ಅದನ್ನು ನೋಡಿ 'ಸೂಪರ್ ಕಾರ್ ಸರ್' ಎಂದ. ಅದಕ್ಕೆ ಬಾಸ್ ಹೇಳಲಾರಂಭಿಸಿದ 'ನೋಡು ಇಂಥ ಕಾರ್ ತಗೊಳ್ಳೋದು ಏನೂ ಕಷ್ಟ ಅಲ್ಲ. ನಾಳೆಯಿಂದಲೇ ನೀನು ಶ್ರzಯಿಂದ ಕೆಲಸ ಮಾಡು, ಸಮಯಕ್ಕೆ ಸರಿಯಾಗಿ ಆಫೀಸ್ ಗೆ ಬಾ. ನಿಗದಿತ ಸಮಯದಲ್ಲಿ ನಿನ್ನ ಟಾರ್ಗೆಟ್ ಕಂಪ್ಲೀಟ್ ಮಾಡು. ಜಾಸ್ತಿ ರಜಾ ತಗೊಳ್ಬೇಡ. ಆಮೇಲ್ ನೋಡ್ತಾ ಇರು. ಮುಂದಿನ ವರ್ಷ ಇಷ್ಟೊತ್ತಿಗೆ..... ನಾನು ಇದಕ್ಕಿಂತ ಒಳ್ಳೆ ಕಾರ್ ತಗೊತೀನಿ.

Dailyhunt
Disclaimer: This content has not been generated, created or edited by Dailyhunt. Publisher: Vishwavani