Dailyhunt
'ಇದು ಭಾರತವಲ್ಲ, ನೇಪಾಳ': ಗುಟ್ಕಾ ಉಗುಳಿದ ಭಾರತೀಯ ಯುವಕರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ!

'ಇದು ಭಾರತವಲ್ಲ, ನೇಪಾಳ': ಗುಟ್ಕಾ ಉಗುಳಿದ ಭಾರತೀಯ ಯುವಕರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿ!

Vishwavani 3 weeks ago

ನೇಪಾಳ,ಎ.8: ಇತ್ತೀಚೆಗೆ ಪ್ರವಾಸಿ ಸ್ಥಳದಲ್ಲಿ ಭಾರತೀಯರ ಅಸಹ್ಯಕರ ವರ್ತನೆಯ ಅನೇಕ ಘಟನೆಗಳು ನಡೆದಿವೆ. ಈ ನಡುವೆ ಪ್ರವಾಸಕ್ಕೆ ಹೋಗಿದ್ದ ಇಬ್ಬರು ಭಾರತೀಯರು ನೇಪಾಳಿ ವ್ಯಕ್ತಿಯ ಮೇಲೆ ಗುಟ್ಕಾ ಉಗುಳಿದ ಘಟನೆವೊಂದು ನಡೆದಿದೆ. ಪ್ರಯಾಣ ಮಾಡುವಾಗ ಭಾರತೀಯರ ನಡವಳಿಕೆ ಮತ್ತು ಸ್ವಚ್ಛತೆಯ ಬಗ್ಗೆ ಆನ್‌ಲೈನ್‌ನಲ್ಲಿ (Viral News) ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಪ್ರವಾಸಕ್ಕೆ ತೆರಳಿದ್ದ ಇಬ್ಬರು ಭಾರತೀಯರು ಸಾರ್ವಜನಿಕವಾಗಿ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ಗುಟ್ಕಾ ಉಗುಳಿದ್ದಾರೆ. ಈ ವೇಳೆ ಸ್ಥಳೀಯ ವ್ಯಕ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೀಡಿಯೊದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ದಕ್ಕಾಗಿ ಇಬ್ಬರು ಭಾರತೀಯರನ್ನು ಎದುರಿಸುತ್ತಿರುವುದನ್ನು ತೋರಿಸುತ್ತದೆ.

ವಿಡಿಯೊ ನೋಡಿ:

ಭಾರತೀಯ ಪ್ರವಾಸಿಗರು ನೇಪಾಳಿ ವ್ಯಕ್ತಿಯೊಬ್ಬರ ವಾಹನದ ಮೇಲೆ ಗುಟ್ಕಾ ತಿಂದು ಉಗುಳಿದ್ದರು. ಇದನ್ನು ನೋಡಿದ ವ್ಯಕ್ತಿ ತಕ್ಷಣವೇ ವಾಹನ ನಿಲ್ಲಿಸಿ ಪ್ರಶ್ನೆ ಮಾಡಿದ್ದಾರೆ. ''ಇದು ಭಾರತವಲ್ಲ, ಸಹೋದರ, ಇದು ನೇಪಾಳ. ಕಸ ಹಾಕಬೇಡಿ. ದಯವಿಟ್ಟು ಸ್ವಲ್ಪ ನೀರು ಸುರಿಯಿರಿ" ಎಂದು ಬುದ್ಧಿ ಮಾತು ಹೇಳಿದ್ದಾನೆ.

Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?

ಪ್ರವಾಸಿಗರು ಕೇವಲ ಕ್ಷಮಿಸಿ ಎಂದು ಹೇಳಿ ಅಲ್ಲಿಂದ ಜಾರಿಕೊಳ್ಳಲು ಪ್ರಯತ್ನಿಸಿದರು. ಆದರೆ, ನೇಪಾಳಿ ವ್ಯಕ್ತಿ ಅದನ್ನು ತಿರಸ್ಕರಿಸಿ ನೀರಿನ ಬಾಟಲಿ ನೀಡಿ "ನೀವು ಮಾಡಿದ ಗಲೀಜನ್ನು ನೀವೇ ತೊಳೆಯಿರಿ" ಎಂದು ಬುದ್ದಿ ಹೇಳಿದ್ದಾರೆ. ಈ ಕ್ಲಿಪ್ ಅನ್ನು ಎಕ್ಸ್ ನಲ್ಲಿ ನಿಖಿಲ್ ಸೈನಿ ಎನ್ನುವವರು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ''ಈ ರೀತಿಯ ಜನರು ಭಾರತದ ಪ್ರತಿಷ್ಠೆಯನ್ನು ಸಹ ಮರೆಮಾಡುತ್ತಾರೆ" ಎಂದು ಕಿಡಿಕಾರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani