Dailyhunt Logo
  • Light mode
    Follow system
    Dark mode
    • Play Story
    • App Story
Shashidhara Halady Column: ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

Shashidhara Halady Column: ಇಲ್ಲಿ ಶಾಸ್ತ್ರ ಹೇಳಲಾಗುವುದು ! ಶುಲ್ಕ 25 ಡಾಲರ್‌ !

Vishwavani 1 week ago

ಲ್ಲರಿಗೂ ತಮ್ಮ ತಮ್ಮ ಭವಿಷ್ಯ ತಿಳಿದುಕೊಳ್ಳುವ ಕಾತುರ ಇದ್ದೇ ಇರುತ್ತದೆ! ಮುಂದು ವರಿದ ದೇಶ ಎಂದೇ ಪ್ರಸಿದ್ಧ ವಾಗಿರುವ ಅಮೆರಿಕದಲ್ಲೂ ಇಂತಹ ಫಲಕಗಳಿವೆ!

ಅಮೆರಿಕದ ಶಿಕಾಗೋ ನಗರದ ಬೀದಿಗಳಲ್ಲಿ ಎರಡು ದಿನ ಸಂತಸದಿಂದ ಅಲೆದಾಡುತ್ತಾ, ಆ ಚಂದದ ಊರಿನ ವಿಶೇಷಗಳನ್ನು ನೋಡುತ್ತಾ ಕಳೆದೆವು.

ಜೂನ್ ತಿಂಗಳಿನ ಅಲ್ಲಿನ ಬೇಸಗೆಯ ದಿನಗಳು ಥೇಟ್ ಬೆಂಗಳೂರಿನ ವಾತಾವರಣದ ಅನುಭವ ನೀಡುತ್ತಿತ್ತು. ಚಳಿಗಾಲದಲ್ಲಿ ವಿಂಡಿ ಸಿಟಿ ಅಂದರೆ ಕುಳಿರ್ಗಾಳಿಯ ನಗರ ಎಂಬ ವಿಶೇಷಣವನ್ನು ಹೊರುವ ಶಿಕಾಗೋ ನಗರಕ್ಕೆ, ಥಂಡಿ ಯನ್ನು ತರುವುದು ಆ ನಗರದ ಒಂದು ದಿಕ್ಕಿನಲ್ಲಿ ಉದ್ದಕ್ಕೂ ಹರಡಿರುವ ಮಿಶಿಗನ್ ಮಹಾಸರೋವರ.

ಹಿಂದಿನ ಶತಮಾನಗಳಲ್ಲಿ ಶಿಕಾಗೋ ನಗರ ಬೆಳೆಯಲು, ಅಲ್ಲಿನ ವ್ಯಾಪಾರ ಅಭಿವೃದ್ಧಿ ಹೊಂದಲು ಈ ಮಿಶಿಗನ್ ಮಹಾಸರೋವರವು ನೀಡಿದ ಜಲಸಂಪರ್ಕವೂ ಒಂದು ಕಾರಣ. ಮಿಶಿಗನ್ ಸೇರಿದಂತೆ ಒಟ್ಟು ಐದು ಮಹಾ ಸರೋವರಗಳನ್ನು ಅಮೆರಿಕದ ಜನರು ಅದಾವ ಪರಿಯಲ್ಲಿ ತಮ್ಮ ಅಭಿವೃದ್ಧಿಗೆ ದುಡಿಸಿಕೊಂಡಿದ್ದಾರೆಂದರೆ, ಸಾಕಷ್ಟು ಒಳನಾಡಿನಲ್ಲಿರುವ ಶಿಕಾಗೋದಿಂದ ಸಮುದ್ರಕ್ಕೆ ಹಡಗುಗಳನ್ನು, ಜಲಾಂತರ್ಗಾಮಿಗಳನ್ನು ಸಾಗಿಸುವ ಜಲಮಾರ್ಗಗಳನ್ನು ಮಾಡಿಕೊಂಡಿದ್ದಾರೆ.

ವೈವಿಧ್ಯಮಯ ಶಿಕಾಗೋ ನಗರವನ್ನು ಪ್ರವಾಸಿಯಾಗಿ ನೋಡಲು ಹಲವು ದಿನಗಳು ಬೇಕು; ನಮ್ಮ ಸೀಮಿತ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುತ್ತಿದೆವು. ವಿವಿಧ ದೇಶಗಳಿಂದ ಬಂದಿದ್ದ ಪ್ರವಾಸಿಗರಿಂದ ಅಲ್ಲಿನ ಬೀದಿಗಳು ಗಿಜಿಗುಟ್ಟುತ್ತಿದ್ದವು!

Shashidhara Halady Column: ಅಲ್ಲೂ ಇದೆ ಮೂಢನಂಬಿಕೆ !

ಬೆಂಗಳೂರಿನ ಬೀದಿಗಳಲ್ಲಿ ಜನರೊಂದಿಗೆ ನುಗ್ಗಾಡಿಕೊಂಡು ಓಡಾಡುವ ಅನುಭವ-ಮುಖ್ಯ ವ್ಯತ್ಯಾಸವೆಂದರೆ ಶಿಕಾಗೋದ ಪ್ರವಾಸಿಗರಲ್ಲಿ ಯುರೋಪಿಯನ್ನರು, ಶ್ವೇತ ವರ್ಣೀಯರು ಅಧಿಕ; ಜತೆಗೆ ಆಫ್ರಿಕನ್ ಅಮೆರಿಕನ್ನರು, ಮೆಕ್ಸಿಕನ್ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ಅಡ್ಡಾಡು ತ್ತಿದ್ದರು!

ಕೆಟ್ಟದಾಗಿ ಹಾರ್ನ್ ಮಾಡುತ್ತಾ, ಹಳೆಯ ಮಾದರಿಯ ಕಾರು ಧಾವಿಸಿ ಬಂದು ಒಂದು ತಿರುವಿನಲ್ಲಿ ವೇಗವಾಗಿ ಸಾಗಿತು ಎಂದರೆ, ಆ ಕಾರಿನ ಸವಾರನು ಬಹುಪಾಲು ಆಫ್ರಿಕನ್ ಮೂಲದವನೇ ಆಗಿರುತ್ತಾನೆ. ಆ ನಗರದಲ್ಲಿ ಅವರಿಗೆ ಆತ್ಮವಿಶ್ವಾಸ ಅಧಿಕ ಎನಿಸುತ್ತದೆ. ಅದಕ್ಕೆ ಒಂದು ಕಾರಣ ವೆಂದರೆ ಆ ಮಹಾನಗರಕ್ಕೆ ತಳಪಾಯ ಹಾಕಿದವನು ಆಫ್ರಿಕಾ ಮೂಲದ ವ್ಯಕ್ತಿ, 1780ನೆಯ ಇಸವಿ ಯಲ್ಲಿ!

ನಂತರದ ವರ್ಷಗಳಲ್ಲಿ, ಅಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ; ಒಮ್ಮೆ ಬೆಂಕಿಯಿಂದ ಇಡೀ ನಗರ ಸುಟ್ಟುಹೋಗಿತ್ತು; ಆದರೂ ಪುನಃ ಕಟ್ಟಿದರು, ಚಂದವಾಗಿ ಕಟ್ಟಿದರು. ಶಿಕಾಗೋದ ಬೀದಿಗಳಲ್ಲಿ ಓಡಾಡುವುದು ಎಂದರೆ ಒಂದು ಉಲ್ಲಾಸದ ಅನುಭವ.

ಶಿಕಾಗೋ ನಗರದ ಬೀದಿಯಲ್ಲಿ ನಾನು ಕಂಡ ಒಂದು ವಿಸ್ಮಯ ಎಂದರೆ "ಇಲ್ಲಿ ಜ್ಯೋತಿಷ್ಯ ಹೇಳಲಾಗುತ್ತದೆ" ಎಂಬ ಫಲಕ (ಇಂಗ್ಲಿಷ್‌ನಲ್ಲಿ). ನಮ್ಮ ಊರುಗಳಲ್ಲಿ ಮಾರ್ಗಕ್ಕೆ ಅಡ್ಡಲಾಗಿ, ಇದೇ ರೀತಿ ಫಲಕ ಹಾಕಿಕೊಂಡು ಶಾಸ್ತ್ರ ಹೇಳುವವರನ್ನು ನೋಡಿದ್ದೆ - ನೀವೂ ನೋಡಿರುತ್ತೀರಿ. ಅದನ್ನೇ ಹೋಲುವಂತಹ ಒಂದು ಫಲಕವು, ಅಮೆರಿಕದಂತಹ ದೊಡ್ಡ ದೇಶದಲ್ಲಿ, ಶಿಕಾಗೋ ನಗರದ ಪಾದಚಾರಿ ಮಾರ್ಗದಲ್ಲಿ ರಾರಾಜಿಸುತ್ತಿರುವುದನ್ನು ಕಂಡು ಅಚ್ಚರಿಗೊಂಡೆ. ಅಲ್ಲಿ ಶಾಸ್ತ್ರ ಕೇಳಿದರೆ ಶುಲ್ಕ 25 ಡಾಲರ್; ಅಂದರೆ ಸುಮಾರು 2100 ರುಪಾಯಿ. ಅಪಾಯಿಂಟ್‌ಮೆಂಟ್ ಇಲ್ಲದೇ ಇದ್ದರೂ, ಬಂದು ಜ್ಯೋತಿಷ್ಯ ಕೇಳಬಹುದು ಎಂದು ಆ ಫಲಕದಲ್ಲಿ ಬರೆದಿದ್ದರು.

ಇಂತಹದ್ದೇ ಫಲಕಗಳನ್ನು, ಅಂದರೆ ಸೈಕಿಕ್ ರೀಡಿಂಗ್, ಅಸ್ಟ್ರಾಲಜಿಯ, ಜ್ಯೋತಿಷಿಗಳ ಜಾಹೀರಾತು ಗಳನ್ನು ವಾಷಿಂಗ್ಟನ್ ನಗರ, ನ್ಯೂಯಾರ್ಕ್‌ಗಳ ರಸ್ತೆಬದಿಯಲ್ಲೂ, ಹಲವು ಕಡೆ ನೋಡಿದೆ; ಎಲ್ಲ ಕಡೆಯೂ, 'ಬನ್ನಿ, ನಿಮ್ಮ ಭವಿಷ್ಯ ತಿಳಿದುಕೊಳ್ಳಿ.. ಅಪಾಯಿಂಟ್‌ಮೆಂಟ್‌ಗಾಗಿ ಈ ನಂಬರ್ ಸಂಪರ್ಕಿಸಿ' ಎಂಬ ಸೂಚನೆ ಗಳಿದ್ದವು. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ಗೆ ಸಾಕಷ್ಟು ಹತ್ತಿರದಲ್ಲೇ, ಅಸ್ಟ್ರಾಲಜಿ ಎಂಬ ಫಲಕ ನೋಡಿ, ಬೆರಗಾದೆ! ಜಗತ್ತಿನ ಎಲ್ಲ ಜನಾಂಗದವರಿಗೂ ತಮ್ಮ ಭವಿಷ್ಯ ವನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇದೆ! ಅಲ್ಲವೇ?

Dailyhunt
Disclaimer: This content has not been generated, created or edited by Dailyhunt. Publisher: Vishwavani