Dailyhunt Logo
  • Light mode
    Follow system
    Dark mode
    • Play Story
    • App Story
Toxic Movie: 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್‌? ಏನಿದು ಸುದ್ದಿ?

Toxic Movie: 'ಟಾಕ್ಸಿಕ್' ಮತ್ತೆ ಪೋಸ್ಟ್‌ಪೋನ್‌? ಏನಿದು ಸುದ್ದಿ?

Vishwavani 4 months ago

ತ್ತೀಚೆಗೆ ಯಶ್ (Actor Yash) ಹಾಲಿವುಡ್‌ ಮೀಡಿಯಾಗಳಿಗೆ ಸಂದರ್ಶನಗಳನ್ನು ನೀಡಿದ್ದರು. ಅದರಲ್ಲಿ 'ರಾಮಾಯಣ' ಹಾಗೂ 'ಟಾಕ್ಸಿಕ್' (Toxic Movie) ಸಿನಿಮಾಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಯುಗಾದಿ ಹಬ್ಬಕ್ಕೆ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಬೇಕಿತ್ತು.

ಆದರೆ, ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರಣಗಳಿಂದ ಸಿನಿಮಾ ಜೂನ್‌ಗೆ ರಿಲೀಸ್‌ (June Release) ಆಗೋದಾಗಿ ತಂಡ ಘೋಷಿಸಿತ್ತು. ಆದರೀಗ ಮತ್ತೊಂದು ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. 'ಟಾಕ್ಸಿಕ್' ರಿಲೀಸ್ ಮತ್ತೆ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕೆಲವು ಸೀನ್‌ಗಳನ್ನು ರೀ-ಶೂಟ್

ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಲ್ಪಡುತ್ತಿದೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿವೆ. ಹೊಸ ಸುದ್ದಿಗಳ ಪ್ರಕಾರ, ಜೂನ್ 4 ರಂದು ಚಿತ್ರ ಬಿಡುಗಡೆಯಾಗದಿರಬಹುದು.

Mythological films: ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಚಲನಚಿತ್ರಗಳದ್ದೇ ಹವಾ; ಬಾಕ್ಸ್ ಆಫೀಸ್‌ನಲ್ಲಿ ಹೊಸ ಟ್ರೆಂಡ್!

'ಟಾಕ್ಸಿಕ್' ಸಿನಿಮಾದ ಕೆಲವು ಸೀನ್‌ಗಳನ್ನು ರೀ-ಶೂಟ್ ಮಾಡಲಾಗಿದೆ. ಮುಂಬೈನಲ್ಲಿ ಐದು ದಿನಗಳ ಕಾಲ ಈ ದೃಶ್ಯಗಳ ಚಿತ್ರೀಕರಣ ನಡೆದಿದ್ದು, ಅದರಲ್ಲಿ ಯಶ್ ಹಾಗೂ ಅವರ ತಂಡ ಸೀಕ್ರೆಟ್ ಆಗಿ ಸಿನಿಮಾ ಕೆಲವು ದೃಶ್ಯಗಳನ್ನು ಶೂಟ್ ಮಾಡಿದೆ.

ಸಿನಿಮಾ ಬಿಡುಗಡೆಗೆ ಹೆಚ್ಚು ಕಡಿಮೆ ಇನ್ನೂ ಒಂದು ತಿಂಗಳು ಇದೆ. ಈಗಾಗಲೇ ಸಿನಿಮಾ ಸೆನ್ಸಾರ್‌ಗೆ ಹೋಗಬೇಕಿತ್ತು. ಆದರೆ, ಇನ್ನೂ 'ಟಾಕ್ಸಿಕ್' ಸೆನ್ಸಾರ್ ಪ್ರಕ್ರಿಯೆಯನ್ನೇ ಆರಂಭ ಮಾಡಿಲ್ಲ ಅನ್ನೋ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಆದರೆ ಇವೆಲ್ಲವೂ ಗಾಸಿಪ್‌ ಮಾತ್ರ, ತಂಡ ಯಾವುದೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಚಿತ್ರಗಳಲ್ಲಿ ಟಾಕ್ಸಿಕ್ ಕೂಡ ಒಂದು. ಇದು ಈಗ ಕೇವಲ ವಾಣಿಜ್ಯ ಉದ್ದೇಶವನ್ನು ಮಾತ್ರವಲ್ಲದೆ, ಯಶ್ ತನ್ನ ಪ್ಯಾನ್-ಇಂಡಿಯಾ ಪ್ರಾಬಲ್ಯವನ್ನು ಉಳಿಸಿಕೊಳ್ಳಬಹುದೇ ಎಂಬುದನ್ನು ಸಾಬೀತುಪಡಿಸುವ ಹೊರೆಯನ್ನೂ ಹೊತ್ತಿದೆ.

ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕ ಮನ್ನಣೆಗೆ ಏರಿಸಿದ ಯಶ್, ಈಗ ಪ್ಯಾನ್-ಇಂಡಿಯಾ ತಾರೆಯಾಗಿ ತೀವ್ರ ಒತ್ತಡವನ್ನು ಎದುರಿಸುತ್ತಿದ್ದಾರೆ. ಟಾಕ್ಸಿಕ್ ಚಿತ್ರದ ಬಗ್ಗೆ ನಿರೀಕ್ಷೆಗಳು ತುಂಬಾ ಹೆಚ್ಚಿವೆ. ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರವು ಚಿತ್ರನಿರ್ಮಾಪಕ ಮತ್ತು ಯಶ್ ಇಬ್ಬರಿಗೂ ಒಂದು ನಿರ್ಣಾಯಕ ಪರೀಕ್ಷೆಯಾಗಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕೂಡ ನಟಿಸಿದ್ದಾರೆ.

Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

'ಟಾಕ್ಸಿಕ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದ್ದು, ಈ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಜೆ.ಜೆ. ಪೆರ್ರಿ ಸಾಹಸ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಅವರ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಅವರ ಸಂಕಲನ ಈ ಚಿತ್ರಕ್ಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwavani