Dailyhunt
ಒಂದೇ ವೇದಿಕೆಯಲ್ಲಿ "ನಿನಗಾಗಿ-2" ಮೇಕಿಂಗ್ ಹಾಗೂ "ಸ್ವಯಂಭೂ" ಟ್ರೈಲರ್ ಬಿಡುಗಡೆ.

ಒಂದೇ ವೇದಿಕೆಯಲ್ಲಿ "ನಿನಗಾಗಿ-2" ಮೇಕಿಂಗ್ ಹಾಗೂ "ಸ್ವಯಂಭೂ" ಟ್ರೈಲರ್ ಬಿಡುಗಡೆ.

Cinisuddi 1 week ago

ಡಿ.ಎಸ್ .ಕೆ. ಸಿನಿಮಾಸ್ ಮೂಲಕ ಸುನಿಲ್ ಕಂಬಾರ್ ನಿರ್ಮಾಣದ ನಿನಗಾಗಿ -2 ಚಿತ್ರದ ಮೇಕಿಂಗ್ ವಿಡಿಯೋವನ್ನು ಡಾ.ಶರಣಪ್ಪ ಗುರೂಜಿ ಅವರು ಬಿಡುಗಡೆ ಮಾಡಿದರು. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಪ್ರಕಾಶ್ ಧಾರೇಶ್ವರ್ ಮಾತನಾಡುತ್ತ ಇದು ನನ್ನ ಮೊದಲ ಚಿತ್ರ, ಹೊಸಬರ ತಂಡ, ಚಿಕ್ಕ ಹೆಜ್ಜೆ ಇಟ್ಟಿದ್ದೇವೆ.

ಜನರಿಗೆ ಬೇಗ ತಲುಪಬಹುದು ಎಂದು ಈ ಟೈಟಲ್ ಇಟ್ಟಿದ್ದೇವೆ.

ಆ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಅವರ ಹಳೇ ಲವ್ ನೆನಪಾಗುತ್ತೆ. ಕನಕಪುರ, ಬನ್ನೇರುಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಸದ್ಯದಲ್ಲೇ ರಿಲೀಸ್ ಮಾಡುವ ಪ್ಲಾನಿದೆ ಎಂದರು.ನಾಯಕ ಮಾತನಾಡುತ್ತ ಪ್ರಕಾಶ್ ಅವರು ನನಗೆ ಮೊದಲಿಂದ ಪರಿಚಯ. ನಮ್ಮನ್ನು ಗುರುತಿಸಿ ಅವಕಾಶ ಕೊಟ್ಟಿದ್ದಾರೆ. ನಮ್ಮೆಲ್ಲರ ಲೈಫಲ್ಲಿ ಎಂದೋ ಆಗಿರುವ ಅನುಭವವೇ ಈ ಚಿತ್ರದ ಕಥೆ ಎಂದರು.

ಪ್ರಾಧ್ಯಾಪಕರ ಪಾತ್ರ ಮಾಡಿರುವ ಶೈಲೇಶ್ ಮಾತನಾಡಿ ನಿರ್ಮಾಪಕ ಸುನಿಲ್ ಅವರು ನನಗೆ ವಿಭಿನ್ನವಾದ ಪಾತ್ರ ಕೊಟ್ಟಿದ್ದಾರೆ. ಅವರ ಚಾರ್ಜ್ ಶೀಟ್ ಚಿತ್ರದಲ್ಲೂ ಅಭಿನಯಿಸಿದ್ದೆ ಎಂದರು. ನಿರ್ಮಾಪಕ ಸುನಿಲ್ ಕುಂಬಾರ್ ಮಾತನಾಡಿ ಇವತ್ತು ೨ ಸಿನಿಮಾ ಅನೌನ್ಸ್ ಮಾಡ್ತಿದ್ದೇವೆ. ಈ ಚಿತ್ರದ ಜತೆ ಸ್ವಯಂಭೂ ಕೂಡ ರೆಡಿ ಇದೆ. ಮುಂದಿನ ತಿಂಗಳು ರಿಲೀಸ್ ಮಾಡುವ ಪ್ಲಾನಿದೆ. ನಮ್ಮ ಸಂಸ್ಥೆಯಿಂತ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎಂದು ಬಂದಿದ್ದೇವೆ.

ಚಿತ್ರದ ೯೦% ಕೆಲಸಗಳನ್ನು ಇವರಿಬ್ಬರೇ ಮಾಡಿಕೊಂಡಿದ್ದಾರೆ. ನಾನು ಒಂದೇ ದಿನ ಶೂಟಿಂಗ್ ಹೋಗಿದ್ದು. ಇವರು ಕೇಳದಿದ್ದರೂ ಡ್ರಾಗನ್ ಕ್ಯಾಮೆರಾ ಒದಗಿಸಿಕೊಟ್ಟೆ. ಅಂದುಕೊಂಡದ್ದಕ್ಕಿಂತ ಕಮ್ಮಿ ಬಜೆಟ್ ನಲ್ಲೇ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿವೆ. ಹೊಸಬರಿಗೆ ಅವಕಾಶ ಕೊಟ್ಟಿದ್ದೆ. ಚೆನ್ನಾಗಿ ಮಾಡಿದ್ದಾರೆ. ಸದ್ಯ ನಮ್ಮ 6 ಪ್ರಾಜೆಕ್ಟ್ ಲೈನಪ್ ನಲ್ಲಿದ್ದು ಸಧ್ಯ ಚಾರ್ಜ್ ಶೀಟ್ ರೆಡಿ ಇದೆ. ಈವರೆಗೆ 15-20 ಸಿನಿಮಾ ವಿತರಣೆ ಮಾಡಿದ್ದೇನೆ ಎಂದರು.

ಸ್ವಯಂಭೂ ಟ್ರೈಲರ್ ಬಿಡುಗಡೆ.
ಕಾರ್ತೀಕ್ ರಾಮ್ ನಿರ್ದೇಶನದ ಸ್ವಯಂಭೂ ಚಿತ್ರದ ಟ್ರೈಲರ್ ಹಾಗೂ 3 ಹಾಡುಗಳ ಬಿಡುಗಡೆ ಕಾರ್ಯಕ್ರಮ ಇದೇ ವೇದಿಕೆಯಲ್ಲಿ ನಡೆಯಿತು. ಆರ್.ಆರ್. ನಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಜಯಂತ್ ಅವರು ಸ್ವಯಂಭೂ ಚಿತ್ರದ ಟ್ರೈಲರ್ ಲಾಂಚ್ ಮಾಡಿದರು. ನಂತರ ಮಾತನಾಡಿದ ಅವರು ಪ್ರಯತ್ನ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸೋಲು, ಗೆಲುವು ಮುಖ್ಯವಲ್ಲ ಎಂದರು.

ನಿರ್ದೇಶಕ ಕಾರ್ತೀಕ್ ರಾಮ್ ಮಾತನಾಡಿ ಈಗಾಗಲೇ ನನ್ನ ನಿರ್ದೇಶನದ 3 ಸಿನಿಮಾ ರಿಲೀಸಾಗಿದೆ. ಇದು 4 ನೇ ಚಿತ್ರ. ಸ್ವಯಂ ಅಂದ್ರೆ ನಾನೇ, ಭೋ ಎಂದರೆ ಆಕ್ರೋಶ. ಚಿತ್ರದಲ್ಲಿ ತಂದೆ ಮಗಳ ಪ್ರೀತಿ, ಲವ್ ಸ್ಟೋರಿ ಜತೆಗೊಂದು ರಿವೆಂಜ್ ಕಥೆಯೂ ಇದೆ. ಮಂಡ್ಯ, ಚನ್ನಪಟ್ಟಣ ಸುತ್ತ ಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೇ ಎಂಡ್ ರಿಲೀಸ್ ಮಾಡುವ ಪ್ಲಾನಿದೆ ಎಂದರು.

ಚಿತ್ರದ ನಾಯಕ ಸೂರ್ಯ ಮಾತನಾಡಿ , ಇದೇ ನಿರ್ದೇಶಕರ ನುಡಿಮುತ್ತ ಚಿತ್ರದಲ್ಲಿ ಅಭಿನಯಿಸಿದ್ದೆ. ಯಾವ ಥರ ಒಬ್ಬ ಒಳ್ಳೆಯ ಮನುಷ್ಯ ಕೆಟ್ಟವನಾಗ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ‌. ಇದೊಂದು ರಿವೆಂಜ್ ಸ್ಟೋರಿ. 24ರಲ್ಲಿಯೇ ಪ್ರಿಪ್ರೊಡಕ್ಷನ್ ಆಗಿತ್ತು, ಚಿತ್ರದ 3 ಹಾಡುಗಳೂ ವಿಭಿನ್ನವಾಗಿದೆ ಎಂದರು. ಸಂಗೀತ ನಿರ್ದೇಶಕ ಸಾತ್ವಿಕ್ ಮಾತನಾಡುತ್ತ ಈಗಾಗಲೇ ಕೊಂಕಣಿಯಲ್ಲಿ ಆಲ್ಬಂ ಮಾಡಿದ್ದೆ. ಚೆನ್ನೈನಲ್ಲಿ ಮ್ಯೂಸಿಕ್ ಕಲಿತಿದ್ದೆ. ಈ ಚಿತ್ರದಲ್ಲಿ 3 ವಿಭಿನ್ನ ಜಾನರ್ ಹಾಡುಗಳಿವೆ ಎಂದರು.

ವಿತರಕ ಸುನಿಲ್ ಕಂಬಾರ್ ಮಾತನಾಡಿ ಚಿತ್ರ ರಿಲೀಸಿಗೆ ರೆಡಿ ಇದೆ. dubbing, ott ಭದ್ರ ಮಾಡಿಕೊಂಡು ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.ಮೂಗ್ ಸುರೇಶ್ ಮಾತನಾಡುತ್ತ ಚಿತ್ರದಲ್ಲಿ ನಾನೂ ಒಂದು ಪಾತ್ರ ಮಾಡಿದ್ದೇನೆ. ಸಾಂದರ್ಭಿಕ ಸನ್ನಿವೇಶಗಳನ್ನು ತೆಗೆದುಕೊಂಡು ಒಂದು ಮರ್ಡರ್ ಮಿಸ್ಟ್ರಿ ಮಾಡಿದ್ದಾರೆ. ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಚಿತ್ರಕ್ಕೆ ಪ್ರಚಾರ ಮಾಡಿದರೆ ಜನ ಖಂಡಿತ ಬರುತ್ತಾರೆ‌. ಕನ್ನಡ ಸಿನಿಮಾ ಕನ್ನಡ ಭಾಷೆಯ ಮೆಟ್ಟಿಲು ಅಂತ ನಾನು ಭಾವಿಸುತ್ತೇನೆ. ಇಡೀ ಭಾರತದಲ್ಲಿ ಕನ್ನಡ ಚಿತ್ರರಂಗ ಕುಂಠಿತವಾಗಿದೆ. ಚಿತ್ರವನ್ನು ಜನರಿಗೆ ತಲುಪಿಸುವಲ್ಲಿ ಪ್ರಚಾರ ತುಂಬಾ ಮುಖ್ಯ ಎಂದರು.

The post ಒಂದೇ ವೇದಿಕೆಯಲ್ಲಿ "ನಿನಗಾಗಿ-2" ಮೇಕಿಂಗ್ ಹಾಗೂ "ಸ್ವಯಂಭೂ" ಟ್ರೈಲರ್ ಬಿಡುಗಡೆ. appeared first on Cini Suddi.

Dailyhunt
Disclaimer: This content has not been generated, created or edited by Dailyhunt. Publisher: Cinisuddi