ರಷ್ಯಾ- ಉಕ್ರೇನ್ ನಡುವಿನ ಯುದ್ಧದಲ್ಲಿ ನಡೆಯುತ್ತಿರುವ ಪರಸ್ಪರ ದಾಳಿಗಳು, ಭಾರಿ ಪ್ರಮಾಣದ ಮಾನವ ಜೀವಹಾನಿಯ ಕಾರಣದಿಂದಾಗಿ, ಇದನ್ನು ಮೊದಲ ವಿಶ್ವಯುದ್ಧಕ್ಕೆ ಹೋಲಿಸಲಾಗುತ್ತಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
1,569 ದಿನಗಳ ರಕ್ತಪಾತ: ಮೊದಲ ವಿಶ್ವಯುದ್ಧವನ್ನೂ ಮೀರಿಸಿದ ಉಕ್ರೇನ್-ರಷ್ಯಾ ಸಂಘರ್ಷ
ಒಂದು ಸಾಲಿನಲ್ಲಿರಷ್ಯಾ-ಉಕ್ರೇನ್ ಸಂಘರ್ಷವು 1,569 ದಿನಗಳನ್ನು ಪೂರೈಸಿದ್ದು, ಇದರ ಭೀಕರತೆ ಮತ್ತು ದೀರ್ಘಕಾಲಿಕ ಪರಿಣಾಮಗಳು ಮೊದಲ ವಿಶ್ವಯುದ್ಧದ ಹೋಲಿಕೆಯನ್ನು ಹುಟ್ಟುಹಾಕಿವೆ.
ಪ್ರಮುಖ ಪ್ರಶ್ನೋತ್ತರ
ಉಕ್ರೇನ್-ರಷ್ಯಾ ಯುದ್ಧದ ಅವಧಿ ಎಷ್ಟು?
ಜೂನ್ 11ರ ವೇಳೆಗೆ ಈ ಯುದ್ಧವು 1,569 ದಿನಗಳನ್ನು ಅಂದರೆ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಪೂರೈಸಿದೆ, ಇದು ಮೊದಲ ಮಹಾಯುದ್ಧದ ಅವಧಿಯನ್ನು ಮೀರಿದೆ.
ಈ ಯುದ್ಧವನ್ನು ಮೊದಲ ವಿಶ್ವಯುದ್ಧಕ್ಕೆ ಹೋಲಿಸಬಹುದೇ?
ಹೌದು, ಯುದ್ಧತಂತ್ರಗಳು, ಕಂದಕಗಳಲ್ಲಿನ ಹೋರಾಟ ಮತ್ತು ಭೌಗೋಳಿಕ ರಾಜಕೀಯದ ಮೇಲಿನ ಪ್ರಭಾವದಿಂದಾಗಿ ಮಿಲಿಟರಿ ವಿಶ್ಲೇಷಕರು ಇದನ್ನು ಮೊದಲ ವಿಶ್ವಯುದ್ಧಕ್ಕೆ ಹೋಲಿಸುತ್ತಾರೆ.
ತಂತ್ರಜ್ಞಾನವು ಯುದ್ಧದ ಸ್ವರೂಪವನ್ನು ಹೇಗೆ ಬದಲಾಯಿಸಿದೆ?
ನೂರು ವರ್ಷಗಳ ಹಿಂದೆ ವಿಮಾನ ಮತ್ತು ಟ್ಯಾಂಕುಗಳು ಮಹತ್ವ ಪಡೆದಂತೆ, ಈಗ ಡ್ರೋನ್‌ಗಳು, ವಾಯು ಮತ್ತು ನೌಕಾ ಸೇನೆಯು ಯುದ್ಧದ ಚಿತ್ರಣವನ್ನು ಬದಲಿಸಿವೆ.
ಈ ಸಂಘರ್ಷವು ಯುರೋಪ್ ಮೇಲೆ ಬೀರಿದ ಪರಿಣಾಮವೇನು?
ಈ ಯುದ್ಧವು ಯುರೋಪಿನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದು, ಖಂಡದ ಭೌಗೋಳಿಕ ರಾಜಕೀಯ ಮೈತ್ರಿಗಳನ್ನು ಸಂಪೂರ್ಣವಾಗಿ ಮರುರೂಪಿಸುತ್ತಿದೆ.
ಯುದ್ಧದ ಅಂತ್ಯದ ಬಗ್ಗೆ ಜನರ ನಿರೀಕ್ಷೆಗಳೇನು?
ಶಾಂತಿ ಮಾತುಕತೆಗಳು ಸ್ಥಗಿತಗೊಂಡಿರುವುದರಿಂದ, ದೀರ್ಘಕಾಲದವರೆಗೆ ಯುದ್ಧ ಮುಂದುವರಿಯಲಿದೆ ಮತ್ತು ಇದು ಎರಡನೇ ಮಹಾಯುದ್ಧದ ಅವಧಿಯನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.
ಪ್ರಮುಖ ಅಂಕಿಅಂಶಗಳು
1,569 ದಿನಗಳುಯುದ್ಧ ಮುಂದುವರಿದ ದಿನಗಳು50 ಲಕ್ಷಅಂದಾಜು ಸಾವು-ನೋವುಗಳು90 ಲಕ್ಷದಿಂದ 1.1 ಕೋಟಿಮೊದಲ ಮಹಾಯುದ್ಧದ ಸಾವು-ನೋವುಗಳು2022ಯುದ್ಧ ಆರಂಭಗೊಂಡ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್ ಜಾಂಗ್ ಉನ್‌ರ 'ನವ ಉತ್ತರ ಕೊರಿಯಾ'ಮೊದಲನೇ ವಿಶ್ವಯುದ್ಧ ಎಷ್ಟು ರಕ್ತಸಿಕ್ತವಾಗಿತ್ತೆಂದರೆ, 'ಇದೇ ಕೊನೆಯ ಯುದ್ಧವಾಗಲಿ' ಎಂದು ಅಂದಿನ ಫ್ರೆಂಚ್ ಸೈನಿಕರು ಆಶಿಸಿದ್ದರಂತೆ. ಆದರೆ ಈಗಿನ ಯುದ್ಧವು ಅವೆಲ್ಲವನ್ನೂ ಮೀರಿಸಿದೆ. 21ನೇ ಶತಮಾನದಲ್ಲಿ ಇಂತಹದ್ದೊಂದು ದೀರ್ಘ ಹಾಗೂ ಕ್ರೂರ ಯುದ್ಧ ನಡೆಯಲಿದೆ ಎನ್ನುವ ಕಲ್ಪನೆಯೂ ಜಗತ್ತಿಗೆ ಇರಲಿಲ್ಲ.
ಇಂದಿಗೆ (ಗುರುವಾರ- ಜೂನ್ 11) ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧವು 1,569 ದಿನಗಳನ್ನು ತಲುಪಿದೆ. ಅಂದರೆ ನಾಲ್ಕು ವರ್ಷ ಹಾಗೂ ಮೂರು ತಿಂಗಳಿಗಿಂತಲೂ ಹೆಚ್ಚು ಈ ಯುದ್ಧ ನಡೆಯುತ್ತಾ ಬಂದಿದೆ. ಇದು ಅಧಿಕೃತವಾಗಿ ಮೊದಲ ಮಹಾಯುದ್ಧದ ಅವಧಿಗಿಂತಲೂ ದೀರ್ಘ.
ಇದನ್ನು ಮೈಲಿಗಲ್ಲು ಎನ್ನಲಾದಿದ್ದರೂ, ಇದು ವಾಸ್ತವ ಹಾಗೂ ನಿರೀಕ್ಷೆಗಳನ್ನು ಹೇಗೆ ಹುಸಿಗೊಳಿಸಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.
2022 ರ ಫೆಬ್ರುವರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ಗೆ ನುಗ್ಗಿ ಎಂದು ತಮ್ಮ ಸೈನಿಕರಿಗೆ ಆದೇಶಿಸಿದಾಗ, ಅವರು ಕ್ಷಿಪ್ರ ವಿಜಯದ ನಿರೀಕ್ಷೆಯಲ್ಲಿದ್ದರು. ಕೆಲವೇ ದಿನಗಳಲ್ಲಿ ಉಕ್ರೇನ್ ಪತನಗೊಳ್ಳಬಹುದು ಎಂದು ನಿರೀಕ್ಷಿಸಿ ರಷ್ಯಾದ ಪಡೆಗಳು ಕೀವ್‌ಗೆ ಮುನ್ನುಗ್ಗಿದವು. ಆದರೆ ರಷ್ಯಾ ಪಡೆಗಳನ್ನು ತಡೆದ ಉಕ್ರೇನ್ ಸೈನಿಕರು ಪ್ರತಿರೋಧ ಒಡ್ಡಿದರು. ಅದು ಭೀಕರ ಹೋರಾಟವಾಗಿ ಪರಿವರ್ತನೆಯಾದರೂ, ಅಲ್ಲಿ ಹೋರಾಡುತ್ತಿದ್ದ ಅನೇಕರಿಗೆ ಇದು ಇಷ್ಟು ದೀರ್ಘಕಾಲ ಮುಂದುವರಿಯಬಹುದು ಎಂದು ಊಹಿಸಿಯೂ ಇರಲಿಲ್ಲ.
ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?'ಬಹುಶಃ ಇದು ಎರಡು ಅಥವಾ ಮೂರು ವರ್ಷಗಳು ನಡೆಯಬಹುದು. ಆಮೇಲೆ ರಾಜಕಾರಣಿಗಳು ಯಾವುದಾದರೂ ಒಂದು ಒಮ್ಮತಕ್ಕೆ ಬರಬಹುದು ಎಂದು ನಾನು ಭಾವಿಸಿದ್ದೆ' ಎಂದು ಭದ್ರತಾ ಕಾರಣಗಳಿಗಾಗಿ ತನ್ನ ಹೆಸರನ್ನು ಬಹಿರಂಗಪಡಿಸದ ಉಕ್ರೇನ್‌ನ ಸೈನಿಕನೊಬ್ಬರು ಹೇಳಿದ್ದಾರೆ. ಆದರೆ ಈ ಯುದ್ಧ ಈಗ ಆಧುನಿಕ ಯುರೋಪ್‌ನ ನಿರ್ಣಾಯಕ ಸಂಘರ್ಷಗಳಲ್ಲಿ ಒಂದಾಗಿ ಮಾರ್ಪಟ್ಟಿದೆ.
ಶಾಂತಿ ಮಾತುಕತೆಗಳು ಸ್ಥಗಿತಗೊಂಡಿವೆ. ಮುಂದಿನ ವರ್ಷಕ್ಕಿಂತ ಮುಂಚೆ ಯುದ್ಧವು ಕೊನೆಗೊಳ್ಳುತ್ತದೆ ಎನ್ನುವ ನಿರೀಕ್ಷೆ ಇಲ್ಲ ಎಂದು ಸುಮಾರು ಅರ್ಧದಷ್ಟು ಉಕ್ರೇನಿಯನ್ನರು ನಂಬಿದ್ದಾರೆಎಂದು ಸಮೀಕ್ಷೆಗಳು ಹೇಳಿವೆ. ಅದು ಒಂದು ವೇಳೆ ಹಾಗೆ ನಡೆದರೆ, ಸಂಘರ್ಷವು ಮತ್ತೊಂದು ಐತಿಹಾಸಿಕ ಮೈಲಿಗಲ್ಲಿನ ಕಡೆಗೆ ದಾಪುಗಾಲಿಡಲು ಪ್ರಾರಂಭಿಸುತ್ತದೆ. ಎರಡನೇ ಮಹಾಯುದ್ಧವನ್ನು ಮೀರಿಸುವ ಅವಧಿ. ಎರಡನೇ ವಿಶ್ವಯುದ್ಧ ಆರು ವರ್ಷಗಳು ನಡೆದಿತ್ತು.
ಆದರೆ ಈ ಯುದ್ಧದ ಅವಧಿಯ ಲೆಕ್ಕಾಚಾರ ತಪ್ಪು ಎನ್ನುವುದು ಅನೇಕ ಉಕ್ರೇನಿಯನ್ನರು ವಾದಿಸುತ್ತಾರೆ. ಅವರ ಪ್ರಕಾರ, ಸಂಘರ್ಷವು 2022ರಲ್ಲಿ ಪ್ರಾರಂಭವಾಗಲಿಲ್ಲ, 2014ರಲ್ಲಿ ರಷ್ಯಾ ಪಡೆಗಳು ಕ್ರಿಮಿಯಾವನ್ನು ವಶಪಡಿಸಿಕೊಂಡು, ಪೂರ್ವ ಉಕ್ರೇನ್‌ನಲ್ಲಿ ಮಾಸ್ಕೋ ಬೆಂಬಲಿತ ಪ್ರತ್ಯೇಕತಾವಾದಿಗಳು ಸಶಸ್ತ್ರ ದಂಗೆಗಳನ್ನು ಪ್ರಾರಂಭಿಸಿದಾಗಲೇ ಆರಂಭವಾಗಿತ್ತು.
ಆದರೆ ವಿಶ್ವಯುದ್ಧಕ್ಕೂ ಈ ಯುದ್ಧಕ್ಕೂ ಅಷ್ಟು ಸುಲಭದಲ್ಲಿ ಹೋಲಿಕೆ ಮಾಡಲಾಗದು ಎಂದು ಇತಿಹಾಸಕಾರರು ಹೇಳುತ್ತಾರೆ. ಮೊದಲ ಹಾಗೂ ಎರಡನೇ ವಿಶ್ವಯುದ್ಧಗಳು ಲಕ್ಷಾಂತರ ಸೈನಿಕರು ಹಲವು ರಣರಂಗಗಳಲ್ಲಿ ಹೋರಾಡಿದ ಜಾಗತಿಕ ಸಂಘರ್ಷಗಳಾಗಿದ್ದವು. ಮೊದಲ ಮಹಾಯುದ್ಧದ ಸಮಯದಲ್ಲಿ ಉಕ್ರೇನ್ ಒಂದು ಸ್ವತಂತ್ರ ದೇಶವಾಗಿ ಅಸ್ತಿತ್ವದಲ್ಲಿರಲಿಲ್ಲ. ಆದ್ದರಿಂದ ಸಾವುನೋವುಗಳು, ಶಸ್ತ್ರಾಸ್ತ್ರಗಳ ಬಲ ಮತ್ತು ಮಿಲಿಟರಿ ಪ್ರಮಾಣವನ್ನು ಒಳಗೊಂಡ ನೇರ ಹೋಲಿಕೆ ತಪ್ಪು ಎನ್ನುತ್ತಾರೆ ಅವರು.
ಫಿಫಾ ವಿಶ್ವಕಪ್‌ಗೆ ಟ್ರಂಪ್ 'ರೆಡ್ ಕಾರ್ಡ್': ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆಆದಾಗ್ಯೂ, ಇತಿಹಾಸಕಾರರು ಮತ್ತು ಮಿಲಿಟರಿ ವಿಶ್ಲೇಷಕರು ಈ ಯುದ್ಧಕ್ಕೂ ಮೊದಲ ವಿಶ್ವ ಮಹಾಯುದ್ದಕ್ಕೂ ಸಾಮ್ಯತೆಗಳಿವೆ ಎಂದು ವಾದಿಸುತ್ತಾರೆ.
ಮೊದಲ ಮಹಾಯುದ್ಧದಂತೆ, ಉಕ್ರೇನ್‌ನ ಮೇಲಿನ ಈಗಿನ ಯುದ್ಧವು ಯುರೋಪ್ ಅನ್ನು ಮರುರೂಪಿಸುತ್ತಿದೆ. ಉಕ್ರೇನ್ ಇತಿಹಾಸಕಾರ ಯಾರೋಸ್ಲಾವ್ ಹ್ರಿತಾಕ್ ಪ್ರಕಾರ, ಎರಡೂ ಯುದ್ಧಗಳು ಸೇನಾ ಮೈತ್ರಿಗಳನ್ನು ಮರುರೂಪಿಸಿವೆ. ದಶಕಗಳಲ್ಲೇ ಕಾಣದ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುವ ಕೆಲಸ ಯುರೋಪ್‌ನ ಭೌಗೋಳಿಕ ರಾಜಕೀಯವನ್ನು ಬದಲಾಯಿಸಿವೆ.
ಎರಡೂ ಸಂಘರ್ಷಗಳು ತಂತ್ರಜ್ಞಾನದ ಮೂಲಕ ಯುದ್ಧದ ಸ್ವರೂಪವನ್ನು ಬದಲಾಯಿಸಿರುವ ಮತ್ತೊಂದು ಸಾಮ್ಯತೆ ಎಂದು ಮಿಲಿಟರಿ ವಿಶ್ಲೇಷಕರು ಹೇಳುತ್ತಾರೆ. ಒಂದು ಶತಮಾನದ ಹಿಂದೆ, ವಿಮಾನಗಳು ಮತ್ತು ಯುದ್ಧ ಟ್ಯಾಂಕರ್‌ಗಳು ರಣರಂಗದ ಚಿತ್ರಣವನ್ನು ಬದಲಿಸಿತ್ತು. ಈಗ ವಾಯು, ನೌಕಾ ಸೇನೆ ಹಾಗೂ ಡ್ರೋನ್‌ಗಳು ಭಾರಿ ಪ್ರಭಾವ ಬೀರುತ್ತಿವೆ.
'ಅನೇಕ ವಿಷಯಗಳಲ್ಲಿ, ಉಕ್ರೇನ್‌ನಲ್ಲಿನ ಈ ಯುದ್ಧವು ಮೊದಲ ವಿಶ್ವಯುದ್ಧಕ್ಕೆ ಅತ್ಯಂತ ನಿಕಟವಾಗಿ ಹೋಲುತ್ತದೆ' ಎಂದು ಮಾಜಿ ಫ್ರೆಂಚ್ ಕರ್ನಲ್ ಮತ್ತು ಮಿಲಿಟರಿ ಇತಿಹಾಸಕಾರ ಮೈಕೆಲ್ ಗೋಯಾ ಹೇಳಿದ್ದಾರೆ. ಯುದ್ಧಾರಂಭದ ಕಾರ್ಯಾಚರಣೆಯು ಮೊದಲ ವಿಶ್ವಯುದ್ಧವನ್ನೇ ಹೋಲುತ್ತದೆ.
1914ರಲ್ಲಿ, ತ್ವರಿತ ವಿಜಯವನ್ನು ಸಾಧಿಸುವ ಆಶಯದೊಂದಿಗೆ ಜರ್ಮನ್ ಪಡೆಗಳು ಪ್ಯಾರಿಸ್ ಕಡೆಗೆ ಕ್ಷಿಪ್ರ ಆಕ್ರಮಣವನ್ನು ಪ್ರಾರಂಭಿಸಿದವು. 2022ರಲ್ಲಿ, ರಷ್ಯಾದ ಸೈನಿಕರು ಇದೇ ಉದ್ದೇಶದೊಂದಿಗೆ ಕೀವ್ ಕಡೆಗೆ ಮುನ್ನುಗ್ಗಿದ್ದರು.
ಕ್ಷಿಪ್ರ ಗೆಲುವಿನ ನಿರೀಕ್ಷೆಯಿಂದ ಬಂದಿದ್ದ ಜರ್ಮನ್ ಸೈನಿಕರು ಅಂದುಕೊಂಡ ಗೆಲುವು ಸಾಧಿಸಲು ವಿಫಲರಾದರು. ಅದು ದೀರ್ಘಯುದ್ಧಕ್ಕೆ ಮುನ್ನುಡಿ ಬರೆಯಿತು. ಈ ಯುದ್ಧದಲ್ಲೂ ರಷ್ಯಾ ಪಡೆಗಳಿಗೆ ಅದೇ ಅನುಭವವಾಯಿತು.
ಮೊದಲನೇ ವಿಶ್ವಯುದ್ಧದಲ್ಲಿ ಮೊದಲು ಫಿರಂಗಿ ದಾಳಿಗಳು ನಡೆಯುತ್ತಿದ್ದವು. ಪದಾತಿ ದಳದ ಘಟಕಗಳು ಶತ್ರುಗಳು ಅಡಗಿರುವ ಕಂದಕಗಳ ಮೇಲೆ ಮುಗಿಬೀಳುತ್ತಿದ್ದವು. ವಾರಗಳು ಅಥವಾ ತಿಂಗಳುಗಳ ಹೋರಾಟದ ನಂತರ ಸಣ್ಣ ಪ್ರಮಾಣದಲ್ಲಿ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿತ್ತು. ಈಗಲೂ ಎದುರಾಳಿ ಸೈನಿಕರ ಅತಿಯಾದ ಶಸ್ತ್ರಾಸ್ತ್ರಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಭೂಗtರಾಗುತ್ತಾರೆ. ಸೈನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಮಣ್ಣಿನಲ್ಲಿ ಹೂತುಕೊಳ್ಳುತ್ತಾರೆ ಎನ್ನುತ್ತಾರೆ ಮೈಕೆಲ್ ಗೋಯಾ.
ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿಂದೆ ಇದ್ದ ಈ 'ಅದೃಶ್ಯ ಆಟಗಾರ'ಸಾವು-ನೋವು
ಎರಡೂ ಯುದ್ಧಗಳ ಸಾವುನೋವುಗಳನ್ನು ಹೋಲಿಕೆ ಮಾಡುವುದು ಕಷ್ಟ. ಮೊದಲ ವಿಶ್ವಯುದ್ಧದಲ್ಲಿ ಅಂದಾಜು 90 ಲಕ್ಷದಿಂದ 1.1 ಕೋಟಿ ಸೈನಿಕರು ಸಾವಿಗೀಡಾಗಿದ್ದರು. ಈಗಿನ ಉಕ್ರೇನ್ ಮೇಲಿನ ಯುದ್ಧದಲ್ಲಿ ಸುಮಾರು 50 ಲಕ್ಷದಷ್ಟು ಸಾವುನೋವುಗಳು ಸಂಭವಿಸಿವೆ ಎನ್ನಲಗುತ್ತಿದ್ದರೂ, ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. ಡ್ರೋನ್‌ಗಳಿಂದ ರಣರಂಗದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿವೆ ಎಂದು ಮಿಲಿಟರಿ ವಿಶ್ಲೇಷಕರು ಮತ್ತು ಅಧಿಕಾರಿಗಳು ವಾದಿಸುತ್ತಾರೆ.
ಮೊದಲ ಮಹಾಯುದ್ಧದಲ್ಲಿ, ಮಿತ್ರರಾಷ್ಟ್ರಗಳು ಅಂತಿಮವಾಗಿ ಮಿಲಿಟರಿ ಒತ್ತಡವನ್ನು ಆರ್ಥಿಕ ಒತ್ತಡದೊಂದಿಗೆ ಸಂಯೋಜಿಸಿದವು. ನೌಕಾ ದಿಗ್ಬಂಧನ ವಿಧಿಸಿ, ಜರ್ಮನಿಯನ್ನು ದುರ್ಬಲಗೊಳಿಸಲಾಯಿತು. ಇದು ಜರ್ಮನಿಯ ಆದಾಯದ ಮೇಲೆ ಪರಿಣಾಮ ಬೀರಿತು. ಈಗ ಉಕ್ರೇನ್ ಕೂಡ ಅದೇ ವಿಧಾನ ಅನುಸರಿಸುತ್ತಿದೆ. ರಷ್ಯಾದ ಆರ್ಥಿಕತೆಯ ಬೆನ್ನೆಲುಬಾಗಿರುವ ರಷ್ಯಾದ ತೈಲ ಸೌಲಭ್ಯಗಳ ಮೇಲೆ ಡ್ರೋನ್ ದಾಳಿ ನಡೆಸಿ, ಅದರ ಹಣಕಾಸಿನ ಹರಿವಿನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾ ಸಣ್ಣ ಡ್ರೋನ್‌ಗಳನ್ನು ಪ್ರವಾಹದಂತೆ ಬಳಸುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದು ಕಾದು ನೋಡಬೇಕಿದೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್, ನ್ಯಾಟೋ ವರದಿಗಳು
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
