ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಟೀಸರ್ ನಿನ್ನೆ ಸಂಜೆ (ಜುಲೈ 3) ಬಿಡುಗಡೆಯಾಗಿದೆ.
ವೈಶಾಕ್ ಜೆ ಫಿಲ್ಮ್ಸ್ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
ರಿಲೀಸ್ ಆಗಿರುವ ಟೀಸರ್‌ನಲ್ಲಿ ನಟ ಶಿವಣ್ಣ ಹಾಗೂ ಡಾಲಿ ಧನಂಜಯ ಸಂಪೂರ್ಣವಾಗಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಬಹುನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಟೀಸರ್ ಬಿಡುಗಡೆಗೆ ದಿನಾಂಕ ನಿಗದಿPeddi Movie Review: 'ಪೆದ್ದಿ'ಯ ಅಸಾಧಾರಣ ಹೋರಾಟ: ರಾಮ್‌ಚರಣ್‌ಗೆ ಶಿವಣ್ಣ ಸಾಥ್70ರ ದಶಕದ ಶೈಲಿಯಲ್ಲಿ ಚಿತ್ರೀಕರಣವಾದ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾವನ್ನು ಹೇಮಂತ್ ಎಂ. ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ನಟ ಶಿವಣ್ಣ ಏಜೆಂಟ್ ಪ್ರಕಾಶ್ ಪಾತ್ರದಲ್ಲಿ ಹಾಗೂ ಡಾಲಿ ಧನಂಜಯ್ ಏಜೆಂಟ್ ಶಂಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ. ಅದಿತಿ ಬಾಲನ್ ಕೂಡ ಈ ಸಿನಿಮಾದ ಪ್ರಮುಖ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಏನೆಂದರೆ ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಂಡ ಶಿವಣ್ಣ, ಸೂಟ್ ಕೇಸ್‌ನಲ್ಲಿ ಗನ್ ಇಟ್ಟು ಖಳನಾಯಕರಿಗೆ ಗುಂಡು ಹಾರಿಸುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಟೀಸರ್ ಹರಿದಾಡುತ್ತಿದೆ.
ಮತ್ತೆ ಒಂದಾದ ಶಿವಣ್ಣ ಹಾಗೂ ಡಾಲಿ
ಈ ಹಿಂದೆ 'ಟಗರು' ಚಿತ್ರದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯಾಗಿ, ಡಾಲಿ ಅವರು ಖಳನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಭರ್ಜರಿ ಯಶ್ವಸಿ ಕಂಡಿತ್ತು. '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದ ಮೂಲಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಂಡಿರುವುದು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಡ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ. ಮಾತ್ರವಲ್ಲದೆ, ಸಿನಿಮಾವು 70ರ ದಶಕದ ಶೈಲಿಯಲ್ಲಿದೆ. ಈ ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

