ವಿಶ್ವಸಂಸ್ಥೆ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಪಶ್ಚಿಮ ಏಷ್ಯಾ ಹಾಗೂ ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕವಾಗಿ ನಡೆಯುತ್ತಿರುವ ಸಂಘರ್ಷಗಳಿಂದ 'ಗ್ಲೋಬಲ್ ಸೌತ್' ದೇಶಗಳ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಇಬ್ಬರೂ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಈ ಉನ್ನತ ಮಟ್ಟದ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶಂಕರ್, 'ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಜಾಗತಿಕ ಸಂಘರ್ಷಗಳಿಂದ 'ಗ್ಲೋಬಲ್ ಸೌತ್' ದೇಶಗಳ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಗ್ಗಿಸುವ ಅಗತ್ಯತೆಯ ಕುರಿತು ನಾವು ಚರ್ಚಿಸಿದೆವು' ಎಂದು ಬರೆದುಕೊಂಡಿದ್ದಾರೆ.
ಈ ಭೇಟಿಯ ಕುರಿತು ಯುಎನ್ ಪ್ರಧಾನ ಕಾರ್ಯದರ್ಶಿ ಕಚೇರಿಯೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಭಾರತ-ಯುಎನ್ ಸಹಕಾರ, ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ವಿಶ್ವಸಂಸ್ಥೆಗೆ ಭಾರತ ನೀಡುತ್ತಿರುವ ನಿರಂತರ ಸಹಕಾರಕ್ಕೆ ಗುಟೆರಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಚಂದ್ರಚಕೋರಿ ಹಿಟ್ ಆದರೂ ಸಿನಿಮಾದಿಂದ ದೂರಾಗಿದ್ದೇಕೆ? ಕಾರಣ ತಿಳಿಸಿದ ನಟಿ ಪ್ರಿಯಾ ವಿಶ್ವಸಂಸ್ಥೆಗೆ ಡಾ.ಸ್ಟ್ರೇಂಜ್, ಶೋಲೆ ಚಿತ್ರದ ಠಾಕೂರ್ ಪಂಚ್: ಇರಾನ್ ಮೀಮ್ ವೈರಲ್ಗುಟೆರಸ್ ಸೇವೆಯನ್ನು ಸ್ಮರಿಸಿದ ಸಚಿವ
ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಜೈಶಂಕರ್, ಡಿಸೆಂಬರ್‌ನಲ್ಲಿ ನಿವೃತ್ತರಾಗಲಿರುವ ಆಂಟೋನಿಯೊ ಗುಟೆರಸ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. 'ದಶಕದ ಕಾಲ ಬಹುಪಕ್ಷೀಯತೆಯ ತತ್ವಕ್ಕೆ ಸಲ್ಲಿಸಿದ ಸೇವೆ ಹಾಗೂ ಸಮರ್ಪಣಾಭಾವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಕೊಡುಗೆಗಳನ್ನು, ವಿಶೇಷವಾಗಿ 'ಮಿಷನ್ ಲೈಫ್' ಯೋಜನೆಗೆ ಅವರು ನೀಡಿದ ವೈಯಕ್ತಿಕ ಬೆಂಬಲವನ್ನು ಭಾರತ ಅಪಾರವಾಗಿ ಗೌರವಿಸುತ್ತದೆ ಎಂದು ಸ್ಮರಿಸಿದ್ದಾರೆ.

