Dailyhunt Logo
  • Light mode
    Follow system
    Dark mode
    • Play Story
    • App Story
ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...

ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...

ರಾನ್‌ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಶನಿವಾರದಿಂದ ಸೋಮವಾರದವರೆಗೆ (ಜುಲೈ 4 ರಿಂದ ಜುಲೈ 9) ಟೆಹರಾನ್, ಕೋಮ್ ಮತ್ತು ಮಶ್ಹಾದ್ ನಗರಗಳಲ್ಲಿ ನಡೆಸಲು ಇರಾನ್ ಸಜ್ಜಾಗಿದೆ.

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್‌ ಮೇಲೆ ಫೆಬ್ರುವರಿ 28ರಂದು ನಡೆಸಿದ ದಾಳಿಯಲ್ಲಿ ಖಮೇನಿ ಅವರು ಹತ್ಯೆಗೀಡಾಗಿದ್ದರು.

ಬಳಿಕ ಯುದ್ಧ ತಾರಕಕ್ಕೇರಿದ ಕಾರಣ ಖಮೇನಿ ಅವರ ಅಂತ್ಯಸಂಸ್ಕಾರವನ್ನು ಮುಂದೂಡಲಾಗಿತ್ತು.

ಸದ್ಯ ಅಮೆರಿಕ ಮತ್ತು ಇರಾನ್‌ ನಡುವೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿರುವುದರಿಂದ, ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಒಂದೂವರೆಯಿಂದ ಎರಡು ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಐತಿಹಾಸಿಕ ಶೋಕಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತ ಲಕ್ಷಾಂತರ ಜನ ಮತ್ತು ಹಲವು ದೇಶಗಳ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಸುಮಾರು 100 ದೇಶಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯ್ ತಿಳಿಸಿದ್ದಾರೆ.

ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್‌ ಆಹ್ವಾನ

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರು ‌

ಭಾರತ

ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಸಯ್ಯದ್‌ ಅತಾ ಹಸನೈನ್‌, ವಿದೇಶಾಂಗ ಖಾತೆ ರಾಜ್ಯ ಸಚಿವ ಪಬಿತ್ರ ಮಾರ್ಘೆರಿಟಾ ಅವರು ಪಾಲ್ಗೊಳ್ಳಲಿದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ. 'ಜುಲೈ 3ರಂದು ಟೆಹರಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಯ್ಯದ್‌ ಅತಾ ಹಸನೈನ್‌ ಹಾಗೂ ಮಾರ್ಘೆರಿಟಾ ಪಾಲ್ಗೊಳ್ಳುವರು' ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪಾಕಿಸ್ತಾನ

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಅಲ್ಲದೇ ಉನ್ನತ ಮಟ್ಟದ ನಿಯೋಗವು ಅವರೊಂದಿಗೆ ಟೆಹರಾನ್‌ಗೆ ತೆರಳಲಿದೆ ಎಂದು ವರಿಯಾಗಿದೆ.

ರಷ್ಯಾ

ಪುಟಿನ್ ಅವರ ವಿಶೇಷ ರಾಯಭಾರಿಯಾಗಿ ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಭಾಗವಹಿಸಲಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿ ತಿಳಿಸಿದೆ.

ಚೀನಾ

ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯ ಉಪಾಧ್ಯಕ್ಷ ಹಿ ವೀ (He Wei) ಅವರು ಚೀನಾವನ್ನು ಪ್ರತಿನಿಧಿಸಲಿದ್ದಾರೆ.

ಇತರ ದೇಶಗಳು

ಜಾರ್ಜಿಯಾದ ಅಧ್ಯಕ್ಷ ಮಿಖೈಲ್ ಕಾವೇಲಾಶ್ವಿಲಿ, ತಜಿಕಿಸ್ತಾನದ ಅಧ್ಯಕ್ಷ ಎಮೋಮಾಲಿ ರೆಹಮಾನ್ ಭಾಗಿಯಾಗಲಿದ್ದಾರೆ.

ಅಫ್ಗಾನಿಸ್ತಾನ

ಅಫ್ಗಾನಿಸ್ತಾನದ ಉಪಪ್ರಧಾನಿ ಮತ್ತು ಹಂಗಾಮಿ ವಿದೇಶಾಂಗ ಸಚಿವರು ಸೇರಿದಂತೆ ತಾಲಿಬಾನ್‌ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇವರಲ್ಲದೆ 30ಕ್ಕೂ ಹೆಚ್ಚು ದೇಶಗಳ ರಾಜಕೀಯ ಪ್ರತಿನಿಧಿಗಳು ಹಾಗೂ 90ಕ್ಕೂ ಹೆಚ್ಚು ದೇಶಗಳ ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ವರದಿಯಾಗಿದೆ.

ಮೊಜ್ತಬಾ ಖಮೇನಿ ಭಾಗವಹಿಸುವುದು ಅನುಮಾನ

ಇರಾನ್‌ನ ನೂತನ ಪರಮೋಚ್ಚ ನಾಯಕರಾಗಿ ನೇಮಕವಾಗಿರುವ ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಸದ್ಯದ ಕುತೂಹಲ.

ಭದ್ರತಾ ಕಾರಣಗಳಿಂದಾಗಿ ಮೊಜ್ತಬಾ ಖಮೇನಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಫೆ.28 ರಂದು ನಡೆದ ದಾಳಿಯಲ್ಲಿ ಮೊಜ್ತಬಾ ತೀವ್ರವಾಗಿ ಗಾಯಗೊಂಡಿದ್ದರು. ಯುದ್ಧ ಪ್ರಾರಂಭವಾದಾಗಿನಿಂದ ಅವರು ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ತಂದೆ ಖಮೇನಿ ಅಂತ್ಯಕ್ರಿಯೆಗೂ ಹೋಗಲ್ಲ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ!

ಖರ್ಗೆ, ಖೇರಾ, ನಿತಿನ್ ನವೀನ್‌ಗೆ ಆಹ್ವಾನ

ಅಲಿ ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ಮುಖಂಡರಾದ ಸಲ್ಮಾನ್‌ ಖುರ್ಷೀದ್, ಪವನ್‌ ಖೇರಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರಿಗೆ ಇರಾನ್‌ ಆಹ್ವಾನಿಸಿದೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕೂಡ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆಹಬೂಬಾ ಅವರು, ಈ ಕಾರ್ಯಕ್ರಮಕ್ಕೆ ಇರಾನ್‌ ಆಹ್ವಾನಿಸಿರುವ ಜಮ್ಮು-ಕಾಶ್ಮೀರದ ಏಕೈಕ ಶಿಯಾಯೇತರ ರಾಜಕೀಯ ನಾಯಕರಾಗಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರನ್ನೂ ಇರಾನ್‌ ಆಹ್ವಾನಿಸಿದೆ.

ಖಮೇನಿ ಅಂತ್ಯಸಂಸ್ಕಾರ: ಬಿಜೆಪಿಯ ನವೀನ್, ಕಾಂಗ್ರೆಸ್‌ನ ಖರ್ಗೆ ಅವರಿಗೂ ಆಹ್ವಾನ

ಖಮೇನಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನಗಳು ಶನಿವಾರ ಆರಂಭ ವಾಗಲಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳು ವಂತೆ ಇರಾನ್‌ ಜನರನ್ನು ನಾನು ಆಹ್ವಾನಿಸುತ್ತೇನೆ. ನಿಮ್ಮ ಉಪಸ್ಥಿತಿ ಮೂಲಕ ಇಸ್ಲಾಮಿಕ್‌ ಇರಾನ್‌ನ ಇತಿಹಾಸ ದಲ್ಲಿ ಹೊಸ ದಾಖಲೆ ನಿರ್ಮಿಸಬೇಕು ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ದೇಶದ ಜನರಿಗೆ ಗುರುವಾರ ಕರೆ ನೀಡಿದ್ದರು.

ಅಲಿ ಅಬ್ದುಲ್ಲಾಹಿ, ಕಮಾಂಡರ್, ಇರಾನ್‌ ಸೇನೆ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗಾಗಿ ಸಿದ್ಧತೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ದಾಳಿ ನಡೆಸಬಾರದು. ಯಾವುದೇ ದಾಳಿಗೆ ನಮ್ಮ ಸೇನೆ ನೀಡುವ ಪ್ರತ್ಯುತ್ತರ ಘೋರವಾಗಿರಲಿದೆ
Dailyhunt
Disclaimer: This content has not been generated, created or edited by Dailyhunt. Publisher: Prajavani