ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ತಂದೆ ಖಮೇನಿ ಅಂತ್ಯಕ್ರಿಯೆಗೂ ಹೋಗಲ್ಲ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ!
ಒಂದು ಸಾಲಿನಲ್ಲಿಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಭದ್ರತೆಯ ಕಾರಣಗಳಿಂದಾಗಿ ತಮ್ಮ ತಂದೆ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಪ್ರಮುಖ ಪ್ರಶ್ನೋತ್ತರ
ಮೊಜ್ತಬಾ ಖಮೇನಿ ಅಂತ್ಯಕ್ರಿಯೆಗೆ ಏಕೆ ಹೋಗುತ್ತಿಲ್ಲ?
ಇಸ್ರೇಲ್‌ನಿಂದ ಎದುರಾಗಿರುವ ಬೆದರಿಕೆ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ಉಂಟಾಗುವ ಭದ್ರತಾ ಅಪಾಯಗಳ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಲಿ ಖಮೇನಿ ಅವರ ಹತ್ಯೆ ಯಾವಾಗ ನಡೆಯಿತು?
ಇಸ್ರೇಲ್ ಮತ್ತು ಅಮೆರಿಕ ಸೇನಾಪಡೆಗಳು ನಡೆಸಿದ ದಾಳಿಯಲ್ಲಿ ಫೆಬ್ರವರಿ 28ರಂದು ಅಲಿ ಖಮೇನಿ ಮೃತಪಟ್ಟಿದ್ದರು.
ಮೊಜ್ತಬಾ ಅವರ ಆರೋಗ್ಯ ಸ್ಥಿತಿ ಹೇಗಿದೆ?
ದಾಳಿಯಲ್ಲಿ ಮೊಜ್ತಬಾ ಅವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದ್ದರೂ, ಅವರು ಮಾನಸಿಕವಾಗಿ ಸದೃಢವಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.
ಇರಾನ್ ಸರ್ಕಾರದ ಮುಂದಿನ ನಡೆ ಏನು?
ತಮ್ಮ ನಾಯಕತ್ವಕ್ಕೆ ಯಾವುದೇ ಬೆದರಿಕೆ ಬಂದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಅಂಕಿಅಂಶಗಳು
ಫೆಬ್ರುವರಿ 28ಇರಾನ್ ಮೇಲೆ ಅಮೆರಿಕ, ಇಸ್ರೇಲ್ ದಾಳಿ ನಡೆಸಿದ್ದು
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಟೆಹರಾನ್: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆ ಹಾಗೂ ಹಿಂದಿನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ.
ಭಾರತದಲ್ಲಿರುವ ಮೊಜ್ತಬಾ ಅವರ ಪ್ರತಿನಿಧಿ ಅಯಾತೊಲ್ಲಾ ಹಕೀಮ್ ಇಲಾಹಿ ಈ ವಿಚಾರ ತಿಳಿಸಿದ್ದಾರೆ ಎಂದು 'ಎಎನ್‌ಐ' ವರದಿ ಮಾಡಿದೆ.
ಇಸ್ರೇಲ್‌ನಿಂದ ಎದುರಾಗಿರುವ ಬೆದರಿಕೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ತಲೆದೋರಬಹುದಾದ ಕಣ್ಗಾವಲು ಅಪಾಯವನ್ನು ಅರಿತು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಇಲಾಹಿ ಹೇಳಿದ್ದಾರೆ.
ತಂದೆ ಅಯಾತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವರೇ ಮೊಜ್ತಬಾ?ಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳುಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮೊಜ್ತಬಾ
ಇಸ್ರೇಲ್ ಹಾಗೂ ಅಮೆರಿಕ ಸೇನಾ ಪಡೆಗಳು ಫೆಬ್ರುವರಿ 28ರಂದು ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾಗಿದ್ದರು. ಅದೇ ದಾಳಿ ವೇಳೆ ಮೊಜ್ತಬಾ ಗಾಯಗೊಂಡಿದ್ದಾರೆ ಎನ್ನಲಾದ ಆಡಿಯೊವನ್ನು 'The Telegraph' ಹಂಚಿಕೊಂಡಿತ್ತು.
ಅಂದು ಇಸ್ರೇಲ್ ಕ್ಷಿಪಣಿಗಳು ದಾಳಿ ನಡೆದ ಸ್ವಲ್ಪ ಸಮಯಕ್ಕೂ ಮುನ್ನ ಮೊಜ್ತಬಾ ಅವರು, ಅಲಿ ಖಮೇನಿ ನಿವಾಸದ ಆವರಣದಲ್ಲಿರುವ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದ್ದರು. ಇದೇ ಕಾರಣಕ್ಕೆ ಅವರ ಜೀವ ಉಳಿದಿದೆಯಾದರೂ, ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿತ್ತು. ನಂತರ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು.
ಅಲಿ ಖಮೇನಿ ಹತ್ಯೆ ಬಳಿಕ ಮೊಜ್ತಬಾ ಅವರನ್ನೇ ನೂತನ ಸರ್ವೋಚ್ಚ ನಾಯಕನನ್ನಾಗಿ ಆರಿಸಲಾಗಿದೆ. ಆದರೆ, ಸಂಘರ್ಷ ತೀವ್ರಗೊಂಡಾಗಲೂ ಅವರು ಸಾರ್ವಜನಿಕರೆದುರು ಬಂದಿಲ್ಲ. ಟಿವಿಯಲ್ಲಾಗಲೀ, ಚಿತ್ರೀಕರಿಸಿದ ಯಾವುದೇ ವಿಡಿಯೊದಲ್ಲಾಗಲೀ ಕಾಣಿಸಿಕೊಂಡಿಲ್ಲ.
ಆಯಾತೊಲ್ಲಾ ಖಮೇನಿ ಅಂತ್ಯ ಸಂಸ್ಕಾರದ ಬಳಿಕ ಇರಾನ್-ಅಮೆರಿಕ ನಡುವೆ ಮುಂದಿನ ಮಾತುಕತೆಖಮೇನಿ ಅಂತ್ಯಸಂಸ್ಕಾರ: ಬಿಜೆಪಿಯ ನವೀನ್, ಕಾಂಗ್ರೆಸ್‌ನ ಖರ್ಗೆ ಅವರಿಗೂ ಆಹ್ವಾನಮೊಜ್ತಬಾ ಅವರು ಮಾನಸಿಕವಾಗಿ ಸದೃಢವಾಗಿದ್ದಾರೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತೊಡಗಿದ್ದಾರೆ ಎಂಬುದಾಗಿ ಪದೇ ಪದೇ ಅಧಿಕೃತ ಹೇಳಿಕೆಗಳು ಪ್ರಕಟವಾಗುತ್ತಿವೆಯಾದರೂ, ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯ ಬಗ್ಗೆ ಕಳವಳ ಇದ್ದೇ ಇದೆ. ದೀರ್ಘಾವಧಿಯಿಂದ ಅವರು ಎಲ್ಲೂ ಕಾಣಿಸಿಕೊಳ್ಳದಿರುವುದೇ ಇದಕ್ಕೆ ಕಾರಣ.
ಭದ್ರತೆಯ ಕಾರಣದಿಂದಾಗಿ ಗೋಪ್ಯವಾಗಿ ಉಳಿದಿದ್ದಾರೆ ಎಂದು ಕೆಲವರು ವಾದಿಸಿದರೆ, ಇನ್ನೂ ಹಲವರು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ದೇಶದ ಜನರಲ್ಲಿ ಭರವಸೆ ಮೂಡಿಸಲು ಮತ್ತು ಆಡಳಿತದಲ್ಲಿ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ. ಆದರೆ, ಈ ಬಾರಿಯೂ ಕಾಣಿಸಿಕೊಳ್ಳದಿದ್ದರೆ ಪ್ರಶ್ನೆಗಳು ಮುಂದುವರಿಯಲಿವೆ.
ಅಮೆರಿಕಕ್ಕೆ ಎಚ್ಚರಿಸಿದ್ದ ಇರಾನ್
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಬುಧವಾರವಷ್ಟೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು. ಇರಾನ್ ನಾಯಕತ್ವಕ್ಕೆ ಯಾವುದೇ ರೀತಿಯಲ್ಲಿ ಬೆದರಿಕೆ ಉಂಟಾದರೂ, ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದರು.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅವರು, 'ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಹಾಗೂ ಇಸ್ರೇಲ್ ಅತಿಕ್ರಮಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 14 ಅಂಶಗಳ ಪ್ರಸ್ತಾವಕ್ಕೆ ಅಮೆರಿಕ ಬದ್ಧವಾಗಿರುವುದಾಗಿ ಹೇಳಿದೆ. ಒಂದುವೇಳೆ, ಇರಾನ್ ನಾಯಕತ್ವಕ್ಕೆ ಯಾವುದೇ ರೀರಿಯಲ್ಲಿ ಬೆದರಿಕೆ ಎದುರಾದರೆ, ತಕ್ಷಣವೇ ಪ್ರತಿಕ್ರಿಯೆ ನೀಡಲಾಗುವುದು' ಎಂದು ಎಚ್ಚರಿಸಿದ್ದರು.
ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿಯುದ್ಧದ ಆರಂಭದಿಂದಲೂ ಕಣ್ಮರೆಯಾಗಿರುವ ಇರಾನ್ ಸರ್ವೋಚ್ಚ ನಾಯಕ ಖಮೇನಿ ಹೇಗಿದ್ದಾರೆ?ಖಮೇನಿ ಹತ್ಯೆಗೆ ತಿಂಗಳು ಪೂರ್ಣ: ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಶೋಕಾಚರಣೆಇರಾನ್ ವಿರುದ್ಧ ಅಮೆರಿಕ ಅವಮಾನಕರ ಸೋಲು ಅನುಭವಿಸಿದೆ: ಮೊಜ್ತಬಾ ಖಮೇನಿಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: ಸಾವಿನ ವದಂತಿ ತಳ್ಳಿ ಹಾಕಿದ ಪ್ರತಿನಿಧಿ
