Dailyhunt Logo
  • Light mode
    Follow system
    Dark mode
    • Play Story
    • App Story
ಐಪಿಎಲ್‌ ಫೈನಲ್‌ ಸೋಲಿನ ಬಳಿಕ ಬಸ್‌ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT

ಐಪಿಎಲ್‌ ಫೈನಲ್‌ ಸೋಲಿನ ಬಳಿಕ ಬಸ್‌ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಐಪಿಎಲ್‌ ಫೈನಲ್‌ ಸೋಲಿನ ಬಳಿಕ ಬಸ್‌ನ ಬೆಂಕಿ ಅವಘಡದಲ್ಲಿ ಸಿಲುಕಿ ಒದ್ದಾಡಿದ GT

ಒಂದು ಸಾಲಿನಲ್ಲಿಐಪಿಎಲ್ ಫೈನಲ್ ಸೋಲಿನ ನಂತರ ಗುಜರಾತ್ ಟೈಟನ್ಸ್ ತಂಡದ ಬಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದರೂ, ಆಟಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಮುಖ ಸಂಗತಿಗಳು• ಬಸ್‌ನಲ್ಲಿ ಬೆಂಕಿ ಅವಘಡಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ಮುಗಿಸಿ ಹೋಟೆಲ್‌ಗೆ ಮರಳುತ್ತಿದ್ದ ಗುಜರಾತ್ ಟೈಟನ್ಸ್ ತಂಡದ ಬಸ್‌ನಲ್ಲಿ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.• ಆಟಗಾರರಯ ಸುರಕ್ಷಿತ ಘಟನೆಯ ನಂತರ ಸುಮಾರು ಒಂದು ಗಂಟೆ ಕಾಲ ಆಟಗಾರರು ಬಸ್ಸಿನಲ್ಲೇ ಸಿಲುಕಿದ್ದರು, ಆದರೆ ನಂತರ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.• ಕಠಿಣ ಪ್ರಯಾಣದ ಸವಾಲುಗಳುಪ್ಲೇಆಫ್‌ ಹಂತದಿಂದ ಫೈನಲ್ ವರೆಗೆ ಗುಜರಾತ್ ಟೈಟನ್ಸ್ ತಂಡ ಬಿಗಿಯಾದ ವೇಳಾಪಟ್ಟಿ ಮತ್ತು ಪ್ರಯಾಣದ ಒತ್ತಡದಿಂದ ಸೂಕ್ತ ವಿಶ್ರಾಂತಿ ಪಡೆಯಲು ಸಾಧ್ಯವಾಗಿರಲಿಲ್ಲ.• ಆರ್‌ಸಿಬಿಯ ಭರ್ಜರಿ ಗೆಲುವುಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವು ಗುಜರಾತ್ ಟೈಟನ್ಸ್ ಅನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.• ವಿರಾಟ್ ಕೊಹ್ಲಿಯ ಅದ್ಭುತ ಆಟನಾಯಕ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 75 ರನ್ ಗಳಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.ಪ್ರಮುಖ ಅಂಕಿಅಂಶಗಳು75ವಿರಾಟ್ ಕೊಹ್ಲಿ ಗಳಿಸಿದ ರನ್155ಗುಜರಾತ್ ಟೈಟನ್ಸ್ ಗಳಿಸಿದ ಒಟ್ಟು ರನ್ಮೇ 2026ಫೈನಲ್ ನಡೆದ ತಿಂಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಹಮದಾಬಾದ್: ಐಪಿಎಲ್ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟನ್ಸ್ ತಂಡ ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಆಘಾತದಿಂದ ಪಾರಾಗಿದೆ. ಹೌದು, ಪಂದ್ಯ ಮುಗಿಸಿ ತೆರಳುತ್ತಿದ್ದ ತಂಡದ ಬಸ್‌ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಿಂದ ಪಂದ್ಯ ಮುಗಿಸಿ ಹೋಟೆಲ್‌ಗೆ ತೆರಳುತ್ತಿದ್ದ ತಂಡದ ಬಸ್‌ನಲ್ಲಿ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಒಂದು ಗಂಟೆ ಕಾಲ ಆಟಗಾರರು ಬಸ್‌ನಲ್ಲೇ ಸಿಲುಕಿ ಒದ್ದಾಡಿದ್ದಾರೆ. ಬಳಿಕ, ಆಟಗಾರರನ್ನು ಸ್ಥಳಾಂತರಿಸಲಾಗಿದ್ದು, ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹಾಗೆ ನೋಡಿದರೆ, ಪ್ಲೇಆಫ್ಸ್ ತಲುಪಿದಾಗಿನಿಂದ ಗುಜರಾತ್ ಟೈಟನ್ಸ್ ಪ್ರಯಾಣ ಅಷ್ಟೇನೂ ಸುಖಕರವಾಗಿರಲಿಲ್ಲ. ಒತ್ತಡದ ಶೆಡ್ಯೂಲ್‌ನಲ್ಲಿ ತಂಡ ಸಂಚರಿಸಿದೆ. ಮೇ 27ರಂದು ಆರ್‌ಸಿಬಿ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯ ಸೋತ ಜಿಟಿ ಮೇ 29ಕ್ಕೆ ಎರಡನೇ ಕ್ವಾಲಿಫೈಯರ್ ಆಡಲು ಮುಲ್ಲನಪುರಕ್ಕೆ ಬಂದಿತ್ತು. ಅಲ್ಲಿ ರಾಜಸ್ಥಾನ ಎಆಯಲ್ಸ್ ತಂಡವನ್ನು ಮಣಿಸಿ ಫೈನಲ್‌ಗೇರಿತ್ತು.

ಫೈನಲ್‌ ಆಡಲು ಅಹಮದಾಬಾದ್‌ಗೆ ಬರಬೇಕಿದ್ದ ಗುಜರಾತ್ ಟೈಟನ್ಸ್‌ಗೆ ಪ್ರತಿಕೂಲ ವಾತಾವರಣ ಅಡ್ಡಿ ಬಂದಿತ್ತು. ಹಾಗಾಗಿ, ಮೇ 30ರ ಸಂಜೆಯಷ್ಟೇ ತಂಡ ಅಹಮದಾಬಾದ್‌ ತಲುಪಿತ್ತು. ಸತತ ಬಿಗ್ ಮ್ಯಾಚ್‌ಗಳನ್ನು ಎದುರಿಸಿದ ಗುಜರಾತ್ ತಂಡಕ್ಕೆ ಸೂಕ್ತ ವಿಶ್ರಾಂತಿ ಮತ್ತು ಅಭ್ಯಾಸಕ್ಕೆ ಸಮಯ ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.

ಭಾನುವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿಯು 5 ವಿಕೆಟ್‌ಗಳಿಂದ ಗುಜರಾತ್ ಟೈಟನ್ಸ್ ಅನ್ನು ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಿತು. 2025ರಲ್ಲಿ ಚೊಚ್ಚಲ ಟ್ರೋಫಿ ಗೆದ್ದಿದ್ದ ಆರ್‌ಸಿಬಿ 2026ರಲ್ಲಿ ಅದನ್ನು ಮರುಳಿಸಿತು. ಈ ಮೂಲಕ ಸತತ ಎರಡು ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸಾಲಿಗೆ ಆರ್‌ಸಿಬಿ ಸೇರಿದೆ.

ಬ್ಯಾಟಿಂಗ್‌ಗೆ ಅಷ್ಟು ಅನುಕೂಲಕರವಾಗಿಲ್ಲದ ಪಿಚ್‌ನಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಎಂದಿನಂತೆ ಅಬ್ಬರಿಸಿದ ಬೌಲರ್‌ಗಳು ಜಿಟಿ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಒಂದು ಹಂತದಲ್ಲಿ 120 ಕಷ್ಟ ಎನ್ನುವಂತಿದ್ದ ತಂಡಕ್ಕೆ ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ 150ರ ಗಡಿ ದಾಟಲು ನೆರವಾಗಿದ್ದರು. ಸಾಯಿ ಸುದರ್ಶನ್(12), ಶುಭಮನ್ ಗಿಲ್(10), ನಿಶಾಂತ್ ಸಿಂಧು(20) ಮತ್ತು ಜೋಸ್ ಬಟ್ಲರ್(20) ಯಾರೊಬ್ಬರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಜಿಟಿ ತಂಡ ಬಹಳಷ್ಟು ತಿಣುಕಾಡಿ 155 ರನ್ ಕಲೆ ಹಾಕಿತು.

ಸಾಧಾರಣ ಗುರಿ ಬೆನ್ನತ್ತಿದ್ದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತಾದರೂ ವೆಂಕಟೇಶ್ ಅಯ್ಯರ್(32) ನಿರ್ಗಮನದ ಬಳಿಕ ಆರ್‌ಸಿಬಿ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್ ಆರಂಭವಾಗಿತ್ತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂಡೆದೆ ಶ್ರೇಷ್ಠ ಆಟವಾಡಿದ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೇವದತ್ತ ಪಡಿಕ್ಕಲ್(1), ರಜತ್ ಪಾಟೀದಾರ್(15), ಕೃಣಾಲ್ ಪಾಂಡ್ಯ(1) ಮತ್ತು ಟಿಮ್ ಡೇವಿಡ್ (20) ವೈಫಲ್ಯದ ಹೊರತಾಗಿಯೂ ಹೋರಾಟ ನಡೆಸಿದ ಚೇಸ್ ಮಾಸ್ಟರ್ ವಿರಾಟ್ ಆರ್‌ಸಿಬಿಗೆ ಎರಡನೇ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. 42 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿ ಸಹಿತ 75 ರನ್ ಸಿಡಿಸಿದರು. ಅಂತ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ರೋಚಕವಾಗಿ ಪಂದ್ಯ ಮುಗಿಸಿದರು.

ಗುಜರಾತ್ ಟೈಟನ್ಸ್ ತವರು ತಂಡವಾದರೂ ಇಲ್ಲಿರುವ ಅಭಿಮಾನಿಗಳು ನಮ್ಮವರು: ಕೊಹ್ಲಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಆರ್ಭಟ; ಈ ಸಲವೂ ಕಪ್ ಆರ್‌ಸಿಬಿಗೇ
Dailyhunt
Disclaimer: This content has not been generated, created or edited by Dailyhunt. Publisher: Prajavani