Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ- ಇರಾನ್‌ ಉದ್ವಿಗ್ನತೆ: ಮಗನ ಮದುವೆಗೇ ಹಾಜರಾಗದ ಟ್ರಂಪ್

ಅಮೆರಿಕ- ಇರಾನ್‌ ಉದ್ವಿಗ್ನತೆ: ಮಗನ ಮದುವೆಗೇ ಹಾಜರಾಗದ ಟ್ರಂಪ್

ವಾಷಿಂಗ್ಟನ್: ಅಮೆರಿಕ- ಇರಾನ್‌ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಈ ನಡುವೆ ಅಮೆರಿಕ ಅಧ್ಯಕ್ಷ ತಮ್ಮ ಮಗನ ಮದುವೆಗೆ ಹೋಗದೆ ಶ್ವೇತಭವನದಲ್ಲಿ ಉಳಿದುಕೊಂಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಶಾಂತಿ ಮಾತುಕತೆಗಳಿಗೆ ಅಮೆರಿಕದ ಅತಿಯಾದ ಬೇಡಿಕೆಗಳೇ ಪ್ರಮುಖ ಅಡ್ಡಿಯಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಆರೋಪಿಸಿದ್ದಾರೆ.

ಸಿನಿ ಸಿಪ್‌ ಪಾಡ್‌ಕಾಸ್ಟ್‌: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಅಮೆರಿಕದ ಅತಿಯಾದ ಬೇಡಿಕೆಗಳಿಂದಲೇ ಶಾಂತಿ ಮಾತುಕತೆಗೆ ಅಡ್ಡಿ: ಇರಾನ್

ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ದಿಢೀರ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್ ಪ್ರವಾಸವನ್ನು ರದ್ದುಗೊಳಿಸಿ, ವಾಷಿಂಗ್ಟನ್‌ನ ಶ್ವೇತಭವನದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದಾಗಿ ಅವರು ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಪಾಮ್ ಬೀಚ್‌ನ ಖ್ಯಾತ ಮಹಿಳೆ ಬೆಟಿನಾ ಆಂಡರ್ಸನ್ ಅವರ ವಿವಾಹ ಮಹೋತ್ಸವದಲ್ಲೂ ಭಾಗಿಯಾಗುತ್ತಿಲ್ಲ. ಈ ಕುರಿತು ತಮ್ಮ ʼಟ್ರುತ್ ಸೋಶಿಯಲ್ʼನಲ್ಲಿ ಟ್ರಂಪ್‌ ಬರೆದುಕೊಂಡಿದ್ದಾರೆ.

ʼನನ್ನ ಮಗ ಡಾನ್ ಜೂನಿಯರ್ ಮತ್ತು ಬೆಟಿನಾ ಮದುವೆಯಲ್ಲಿ ಭಾಗವಹಿಸಲು ನನಗೆ ತುಂಬಾ ಇಷ್ಟವಿತ್ತು. ಆದರೆ ಸರ್ಕಾರದ ತುರ್ತು ಪರಿಸ್ಥಿತಿಗಳು ಮತ್ತು ದೇಶದ ಮೇಲಿನ ಜವಾಬ್ದಾರಿಯಿಂದಾಗಿ ನನಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ನಿರ್ಣಾಯಕ ಸಮಯದಲ್ಲಿ ನಾನು ಶ್ವೇತಭವನದಲ್ಲೇ ಇರುವುದು ದೇಶದ ದೃಷ್ಟಿಯಿಂದ ಮುಖ್ಯವಾಗಿದೆ. ನವದಂಪತಿಗಳಿಗೆ ನನ್ನ ಶುಭ ಹಾರೈಕೆಗಳುʼ ಎಂದೂ ಟ್ರಂಪ್ ಬರೆದುಕೊಂಡಿದ್ದಾರೆ.

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಚಿತ್ತಾಪುರದಲ್ಲಿ ಟ್ಯಾಂಕರ್ - ಕ್ರೂಸರ್ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು

Dailyhunt
Disclaimer: This content has not been generated, created or edited by Dailyhunt. Publisher: Prajavani