Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ, ಕೆನಡಾಕ್ಕೂ ಬಿಸಿಗಾಳಿ ಭೀತಿ: ಫಿಫಾ ವಿಶ್ವಕಪ್‌ ಮೇಲೆ ಪರಿಣಾಮ?

ಅಮೆರಿಕ, ಕೆನಡಾಕ್ಕೂ ಬಿಸಿಗಾಳಿ ಭೀತಿ: ಫಿಫಾ ವಿಶ್ವಕಪ್‌ ಮೇಲೆ ಪರಿಣಾಮ?

ವಾಷಿಂಗ್ಟನ್: ಯುರೋಪ್‌ನಲ್ಲಿ ದಾಖಲೆ ಮಟ್ಟದ ಬಿಸಿಗಾಳಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಅಮೆರಿಕ ಮತ್ತು ಕೆನಡಾದಲ್ಲೂ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಅಮೆರಿಕದಲ್ಲಿ ಸುಮಾರು 12 ಕೋಟಿ ಮಂದಿಗೆ ಬಿಸಿ ಗಾಳಿಯ ಪರಿಣಾಮ ತಟ್ಟಲಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಮುನ್ನೆಚ್ಚರಿಕೆ ನೀಡಿದೆ.

ಅಮೆರಿಕ ಪೌರತ್ವ: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರತೀಯರಿಗೆ ನಿರಾಳ ಯಾಕೆ?

ಅಮೆರಿಕದ ಪೂರ್ವ ಕರಾವಳಿಯಿಂದ ದೇಶದ ಮಧ್ಯ ಭಾಗದವರೆಗೆ ವ್ಯಾಪಕ ಪ್ರದೇಶದಲ್ಲಿ ಬಿಸಿಗಾಳಿ ತೀವ್ರಗೊಳ್ಳಲಿದೆ. 'ಹೀಟ್ ಡೋಮ್‌' ಪರಿಣಾಮದಿಂದ ಉಂಟಾಗಿರುವ ಈ ಬಿಸಿಗಾಳಿಯು ಗುರುವಾರದ ವೇಳೆಗೆ ಮಿಡ್‌ವೆಸ್ಟ್ ಹಾಗೂ ಮಿಸಿಸಿಪ್ಪಿ ಕಣಿವೆ ಪ್ರದೇಶದಲ್ಲಿ ತೀವ್ರವಾಗಲಿದ್ದು, ನಂತರ ಓಹಿಯೊ ಕಣಿವೆ ಮತ್ತು ಪೂರ್ವ ಕರಾವಳಿಯತ್ತ ವಿಸ್ತರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಲವು ಪ್ರದೇಶಗಳಲ್ಲಿ 35ರಿಂದ 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಹೆಚ್ಚಿನ ತೇವಾಂಶದಿಂದ ಜನರು ಅನುಭವಿಸುವ ಉಷ್ಣಾಂಶ (ಹೀಟ್ ಇಂಡೆಕ್ಸ್) 46 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಗುರುವಾರ ಮತ್ತು ಶುಕ್ರವಾರ ಹಲವು ನಗರಗಳಲ್ಲಿ ದೈನಂದಿನ ತಾಪಮಾನ ದಾಖಲೆಗಳು ಮುರಿಯುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಮಾಸಿಕ ಹಾಗೂ ಸಾರ್ವಕಾಲಿಕ ದಾಖಲೆಗಳೂ ನಿರ್ಮಾಣವಾಗುವ ನಿರೀಕ್ಷೆ ಇದೆ.

ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ₹1.89 ಲಕ್ಷ ಕೋಟಿ ಆದಾಯ ಗಳಿಸಿದ ಡೊನಾಲ್ಡ್ ಟ್ರಂಪ್

ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಹೋಗದಂತೆ, ಸಾಕಷ್ಟು ನೀರು ಕುಡಿಯುವಂತೆ ಹಾಗೂ ಹವಾನಿಯಂತ್ರಿತ ಅಥವಾ ತಂಪಾದ ಸ್ಥಳಗಳಲ್ಲಿ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ನ್ಯೂಯಾರ್ಕ್ ನಗರದಲ್ಲಿ ಮೇಯರ್ ಝೋಹ್ರಾನ್ ಮಮ್ದಾನಿ ತುರ್ತು ಬಿಸಿಗಾಳಿ ಕಾರ್ಯಯೋಜನೆ ಜಾರಿಗೊಳಿಸಿದ್ದು, ಬುಧವಾರದಿಂದ ನೂರಾರು 'ಕೂಲಿಂಗ್ ಸೆಂಟರ್‌'ಗಳನ್ನು ತೆರೆಯಲಾಗುತ್ತಿದೆ.

ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲೂ ಸಾರ್ವಜನಿಕರಿಗಾಗಿ ಹವಾನಿಯಂತ್ರಿತ ಮನರಂಜನಾ ಕೇಂದ್ರಗಳನ್ನು ತೆರೆಯಲಾಗಿದೆ.

ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ವಿಶ್ವಕಪ್ ಪಂದ್ಯಗಳ ಮೇಲೂ ಪರಿಣಾಮ

ತೀವ್ರ ಬಿಸಿಲಿನ ಪರಿಣಾಮ ಫಿಫಾ ವಿಶ್ವಕಪ್ ಪಂದ್ಯಗಳ ಮೇಲೂ ಬೀಳುವ ಸಾಧ್ಯತೆ ಇದೆ. ಕೆಲವು ಪಂದ್ಯಗಳ ವೇಳೆ ಉಷ್ಣಾಂಶ ಆಟಗಾರರ ಸುರಕ್ಷತೆಯ ಮಿತಿಯನ್ನು ಮೀರಬಹುದು ಎಂದು ಜಾಗತಿಕ ಆಟಗಾರರ ಸಂಘ ಫಿಫ್‌ಪ್ರೊ ಎಚ್ಚರಿಕೆ ನೀಡಿದೆ.

ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಅಭಿಮಾನಿಗಳ ಉತ್ಸವದ ಕೆಲವು ಕಾರ್ಯಕ್ರಮಗಳನ್ನು ತಂಪು ಟೆಂಟ್‌ಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಯುರೋಪ್‌ನಲ್ಲಿ ಉರಿ ಬಿಸಿಲು, ಸಾವಿರಾರು ಮಂದಿ ಸಾವು: ಏನಿದು 'ಹೀಟ್ ಡೋಮ್'?

ಕೆನಡಾದಲ್ಲೂ ಬಿಸಿಗಾಳಿ

ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲೂ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ 'ಆರೆಂಜ್ ಹೀಟ್ ವಾರ್ನಿಂಗ್ ಘೋಷಿಸಲಾಗಿದೆ.

ಟೊರಂಟೊ ಸೇರಿದಂತೆ ಹಲವು ನಗರಗಳಲ್ಲಿ 35 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಮಾಂಟ್ರಿಯಲ್ ಸೇರಿದಂತೆ ಪೂರ್ವ ಕೆನಡಾದ ಕೆಲವು ಪ್ರದೇಶಗಳಿಗೂ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ತಜ್ಞರ ಪ್ರಕಾರ, ಹೀಟ್ ಡೋಮ್‌ ಹವಾಮಾನ ಬದಲಾವಣೆ ಹಾಗೂ ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದ ಯುರೋಪ್, ಅಮೆರಿಕ ಮತ್ತು ಕೆನಡಾದಲ್ಲಿ ಬಿಸಿಗಾಳಿ ಹೆಚ್ಚುತ್ತಿದೆ.

ಆಧಾರ: ಬಿಬಿಸಿ, ರಾಯಿಟರ್ಸ್

ಅಮೆರಿಕ ಅಧ್ಯಕ್ಷರ ಪ್ರಯಾಣಕ್ಕೆ ದುಬಾರಿ ವಿಮಾನ ನೀಡಿದ ಕತಾರ್‌: ವಿಶೇಷಗಳೇನು?
Dailyhunt
Disclaimer: This content has not been generated, created or edited by Dailyhunt. Publisher: Prajavani