Dailyhunt Logo
  • Light mode
    Follow system
    Dark mode
    • Play Story
    • App Story
'ಅಮೆರಿಕದ ರಕ್ಷಕ ನಾನೇ': ಎಐ ಚಿತ್ರ ಹಂಚಿಕೊಂಡು ಸೇನಾ ಸಾಮರ್ಥ್ಯ ಸಾರಿದ ಟ್ರಂಪ್!

'ಅಮೆರಿಕದ ರಕ್ಷಕ ನಾನೇ': ಎಐ ಚಿತ್ರ ಹಂಚಿಕೊಂಡು ಸೇನಾ ಸಾಮರ್ಥ್ಯ ಸಾರಿದ ಟ್ರಂಪ್!

ರಾನ್‌ ವಿರುದ್ಧ ಅಮೆರಿಕದ ಸೇನೆ ಪ್ರಾಬಲ್ಯ ಸಾಧಿಸಿದೆ ಎಂಬುದನ್ನು ಸಾರಲು ಹಾಗೂ 2028ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನು ಮುನ್ನಡೆಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೃತಕ ಬುದ್ಧಿಮತ್ತೆ (ಎಐ) ಬಳಸಿ ರೂಪಿಸಲಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಸೇನಾ ಸಂಘರ್ಷ, ಹಡಗುಗಳ ಮೇಲೆ ದಾಳಿ, ಸಮುದ್ರದಲ್ಲಿ ಗಸ್ತು, ಭವಿಷ್ಯದ ರಕ್ಷಣಾ ತಂತ್ರ, ಅಮೆರಿಕದ ಹಿಂದಿನ ನಾಯಕರೊಂದಿಗಿನ ಐತಿಹಾಸಿಕ ಹೋಲಿಕೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು 'ಟ್ರುಥ್‌ ಸೋಶಿಯಲ್‌' ವೇದಿಕೆಯಲ್ಲಿರುವ ತಮ್ಮ ಖಾತೆಯಲ್ಲಿ ಟ್ರಂಪ್‌ ಹಂಚಿಕೊಂಡಿದ್ದಾರೆ.

'ಅಮೆರಿಕವನ್ನು ರಕ್ಷಿಸಿದ ವ್ಯಕ್ತಿ' ಎಂದು ಬರೆಯಲಾದ ಪೋಸ್ಟ್‌ನಲ್ಲಿ ತಮ್ಮ ಬಾಲ್ಯ, ಯೌವ್ವನ ಹಾಗೂ ಸದ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

'ಜಗತ್ತಿನ ರಕ್ಷಕರು' ಎಂದು ಬರೆಯಲಾದ ಇನ್ನೊಂದು ಪೋಸ್ಟ್‌ನಲ್ಲಿ ಅಮೆರಿಕದ ಯುದ್ಧ ವಿಮಾನಗಳು ಇರಾನ್‌ ಮೇಲೆ ದಾಳಿ ನಡೆಸಿ, ಬೃಹತ್‌ ಸ್ಫೋಟ ಉಂಟುಮಾಡುತ್ತಿವೆ ಎಂಬಂತೆ ಚಿತ್ರಿಸಲಾಗಿದೆ. ಯುದ್ಧ ವಿಮಾನಗಳ ಹಿನ್ನೆಲೆಯಲ್ಲಿ ಟ್ರಂಪ್‌ ಚಿತ್ರವಿದೆ.

ಅಗತ್ಯಕ್ಕಿಂತ ಹೆಚ್ಚೇ ಇವೆ: ಯುದ್ಧ ಸಾಮಗ್ರಿ ಕೊರತೆ ವರದಿ ತಳ್ಳಿ ಹಾಕಿದ ಟ್ರಂಪ್ಮಾತುಕತೆ ನಡೆಯುತ್ತಿದೆ, ಒಪ್ಪಂದಕ್ಕೆ ಇರಾನ್ ಸಿದ್ಧವಿಲ್ಲ: ಡೊನಾಲ್ಡ್ ಟ್ರಂಪ್

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪವನ್ನು ಗುರಿಯಾಗಿಸಿ, 'ಖಾರ್ಗ್ ಮೇಲೆ ದಾಳಿ' ಎಂದು ಬರೆಯಲಾದ ಮತ್ತೊಂದು ಚಿತ್ರ ಹಂಚಿಕೊಂಡಿದ್ದಾರೆ.

ಇರಾನ್‌ ಟ್ಯಾಂಕರ್‌ ಅನ್ನು ವಶಪಡಿಸಿಕೊಳ್ಳುತ್ತಿರುವಂತೆ ತೋರುವ ಮಗದೊಂದು ಚಿತ್ರದಲ್ಲಿ 'ಇದು ನಮ್ಮ ಟ್ಯಾಂಕರ್‌' ಎಂದು ಬರೆಯಲಾಗಿದೆ. ಟ್ರಂಪ್‌ ಅವರು ಅಮೆರಿಕ ಸೈನಿಕರ ಬಲದೊಂದಿಗೆ ಆ ಟ್ಯಾಂಕರ್‌ನಲ್ಲಿ ಅಮೆರಿಕದ ಧ್ವಜ ಹಾರಿಸುತ್ತಿರುವಂತೆ, ಇರಾನ್‌ ಸಿಬ್ಬಂದಿ ಸಮುದ್ರಕ್ಕೆ ಜಿಗಿಯುತ್ತಿರುವಂತೆ ಬಿಂಬಿಸಲಾಗಿದೆ.

'ಟ್ರಂಪ್‌ 2028' ಎಂದು ಬರೆಯಲಾದ ಹಲವು ಚಿತ್ರಗಳನ್ನೂ ಹಂಚಿಕೊಂಡಿರುವ ಅಧ್ಯಕ್ಷ, ಅಮೆರಿಕವನ್ನು ರಕ್ಷಿಸಿದ್ದು ತಾವೇ ಎಂದು ಬೆನ್ನುತಟ್ಟಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಶಸ್ತ್ರಾಸ್ತ್ರ ಕೊರತೆ
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಸೇನೆಯ ಬಳಿ 'ಪೇಟ್ರಿಯಾಟ್' ಕ್ಷಿಪಣಿಗಳ ದಾಸ್ತಾನು ಖಾಲಿಯಾಗಬಹುದು ಎಂದು ಅಮೆರಿಕದ ಸೇನಾ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆ ನಡೆಸುವುದನ್ನು ಟ್ರಂಪ್‌ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್‌ ಸೇನಾಪಡೆಗಳು ಫೆಬ್ರುವರಿ 28ರಂದು ಇರಾನ್ ಮೇಲೆ ಜಂಟಿ ದಾಳಿ ಮಾಡಿದಾಗಿನಿಂದಲೂ, ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ನಡೆಯುತ್ತಿದೆ.

ಜೆನೆರಿಕ್ ಔಷಧಗಳ ಮೇಲೆ ಹಂತ ಹಂತವಾಗಿ ಟ್ರಂಪ್ ಸುಂಕ: ಭಾರತದ ಮೇಲೆ ಪರಿಣಾಮ ಏನು?ಇರಾನ್ ಮೇಲಿನ ನಮ್ಮ ಯುದ್ಧ ಇನ್ನೂ ಮುಗಿದಿಲ್ಲ: ಡೊನಾಲ್ಡ್ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani