Dailyhunt
ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭೆಯಲ್ಲಿ ದಾಖಲೆಯ ಮತದಾನ

ಅಸ್ಸಾಂ, ಪುದುಚೇರಿ, ಕೇರಳ ವಿಧಾನಸಭೆಯಲ್ಲಿ ದಾಖಲೆಯ ಮತದಾನ

ವದೆಹಲಿ: ಅಸ್ಸಾಂ, ಪುದುಚೇರಿ ವಿಧಾನಸಭೆಗೆ ಗುರುವಾರ ಬಿರುಸಿನ ಮತದಾನ ನಡೆದಿದ್ದು, 2021ರ ಮತದಾನಕ್ಕೆ ಹೋಲಿಸಿದರೆ ದಾಖಲೆಯ ಮತದಾನವಾಗಿದೆ ಎಂದು ವರದಿಯಾಗಿದೆ.

ಎಸ್‌ಐಆರ್‌ ಪ್ರಕ್ರಿಯೆ ನಡೆಸಿದ ಬಳಿಕ ಶೇಕಡವಾರು ಮತದಾನದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.

ಅಸ್ಸಾಂನಲ್ಲಿ ಶೇ 85.49, ಕೇರಳದಲ್ಲಿ 78.13,ಪುದುಚೇರಿ ಯಲ್ಲಿ ಶೇ 89.87ರಷ್ಟು ಮತದಾನ ಗುರುವಾರ ದಾಖಲಾಗಿದೆ.

ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇದುವರೆಗಿನ ಅತಿ ಹೆಚ್ಚು ಅಂದರೆ ಶೇ 85.64ರಷ್ಟು ಮತದಾನವಾಗಿದೆ. 2016ರಲ್ಲಿನ ಶೇ 84.67ರಷ್ಟು ಮತದಾನವಾಗಿದ್ದಾರೆ. 2021ರಲ್ಲಿ ರಾಜ್ಯವು ಶೇ 82.04ರಷ್ಟು ಮತದಾನವಾಗಿತ್ತು ಎಂದು ವರದಿಯಾಗಿದೆ.

ಪಿಯುಸಿ ಮುಗೀತು, ಮುಂದೇನು ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರಮೈಸೂರಿನ ಚಾಮುಂಡೇಶ್ವರಿ ‌ದೇವಸ್ಥಾನದಲ್ಲಿ ಎಚ್‌ಡಿಕೆ‌ ವಿಶೇಷ ಪೂಜೆ

ಕೇರಳದಲ್ಲಿ ಶೇ 78.25 ರಷ್ಟು ಮತದಾನವಾಗಿದ್ದು, 2021ರಲ್ಲಿ ದಾಖಲಾಗಿದ್ದ ಶೇ 76 ಕ್ಕಿಂತ ಹೆಚ್ಚಾಗಿದೆ. ಪುದುಚೇರಿಯಲ್ಲಿ ಶೇ 89.87ರಷ್ಟು ಮತದಾನವಾಗಿದ್ದು, ಇದು 2011ರಲ್ಲಿ ದಾಖಲಾಗಿದ್ದ ಶೇ 86.19 ರಷ್ಟು ಮತದಾನಕ್ಕಿಂತ ಹೆಚ್ಚಿನದಾಗಿದೆ.

ಕೆಲವೆಡೆ ಸಣ್ಣಪುಟ್ಟ ಘರ್ಷಣೆ, ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.

ಅಸ್ಸಾಂನ 126, ಕೇರಳದ 140 ಮತ್ತು ಪುದುಚೆರಿಯ 30 ಕ್ಷೇತ್ರಗಳಿಗೆ ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಬಂದು ಮತಚಲಾಯಿಸಿದರು. ಮಧ್ಯಾಹ್ನ ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani