Dailyhunt Logo
  • Light mode
    Follow system
    Dark mode
    • Play Story
    • App Story
ಅಯೋಧ್ಯೆ ದೇಣಿಗೆ ಕಳವು: ಆರೋಪಿಗಳ ಪರ ವಾದ ಮಂಡಿಸಿದರೆ ₹5 ಲಕ್ಷ ದಂಡ

ಅಯೋಧ್ಯೆ ದೇಣಿಗೆ ಕಳವು: ಆರೋಪಿಗಳ ಪರ ವಾದ ಮಂಡಿಸಿದರೆ ₹5 ಲಕ್ಷ ದಂಡ

ಯೋಧ್ಯೆ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳ ಪರವಾಗಿ ಯಾವುದೇ ವಕಾಲತ್ತು ನಡೆಸದಿರಲು ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಸೋಮವಾರ ನಿರ್ಧರಿಸಿದೆ.

ಈ ನಿರ್ಧಾರವನ್ನು ಉಲ್ಲಂಘಿಸುವ ವಕೀಲರಿಗೆ ₹5 ಲಕ್ಷ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ಸೋಮವಾರ ನಡೆದ ಬಾರ್ ಅಸೋಸಿಯೇಷನ್ ಸಭೆಯಲ್ಲಿ ದೇಗುಲದ ನಿರ್ವಹಣೆಗೆ ಸಂಬಂಧಿಸಿದಂತೆ ಚಂಪತ್ ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರು ಅಯೋಧ್ಯೆಯನ್ನು ತೊರೆಯಬೇಕು ಎಂದು ಒತ್ತಾಯಿಸಲಾಗಿದೆ. ಇಲ್ಲವಾದ್ದಲ್ಲಿ ಅಯೋಧ್ಯೆ ನಗರದಲ್ಲಿ ಮುತ್ತಿಗೆ ಹಾಕಲಾಗುವುದು ಎಂದೂ ಎಚ್ಚರಿಸಿದೆ.

'ರಾಮಮಂದಿರದ ಕಾಣಿಕೆಯ ಕಳ್ಳತನದಿಂದ ನಮ್ಮೆಲ್ಲರ ಭಾವನೆಗಳಿಗೆ ಧಕ್ಕೆಯಾಗಿದೆ. ಬಂಧಿತ ಆರೋಪಿಗಳ ಪರವಾಗಿ ವಾದ ಮಂಡಿಸದಿರಲು ಫೈಜಾಬಾದ್‌ನ ವಕೀಲರು ನಿರ್ಧರಿಸಿದ್ದಾರೆ' ಎಂದು ಬಾರ್ ಅಸೋಸಿಯೇಷನ್‌ ಕಾರ್ಯದರ್ಶಿ ಶೈಲೇಂದ್ರ ಜೈಸ್ವಾಲ್ ತಿಳಿಸಿದ್ದಾರೆ.

ಬಾರ್ ಅಸೋಸಿಯೇಷನ್ ನಿರ್ಣಯದ ಪ್ರಕಾರ ಆರೋಪಿಗಳ ಪರವಾಗಿ ವಕಾಲತ್ತು ನಡೆಸುವ ವಕೀಲರ ಮೇಲೆ ₹5 ಲಕ್ಷ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ದೇಣಿಗೆ ಕಳವು ಪ್ರಕರಣದಲ್ಲಿ ಆರೋಪಿಗಳಾದ ಅವಿನಾಶ್‌ ಶುಕ್ಲಾ, ಅನುಕಲ್ಪ್‌ ಮಿಶ್ರಾ, ಲವಕುಶ್‌ ಮಿಶ್ರಾ, ಮನೀಶ್‌ ಕುಮಾರ್‌ ಯಾದವ್‌, ಕರುಣೇಶ್‌ ಪಾಂಡೆ, ರಾಮಶಂಕರ್‌ ಮಿಶ್ರಾ, ಸುಭಾಷ್ ಶ್ರೀವಾತ್ಸವ ಹಾಗೂ ರಾಮಶಂಕರ್‌ ಅಲಿಯಾಸ್ ಟಿನ್ನು ಯಾದವ್‌ರನ್ನು ಬಂಧಿಸಲಾಗಿದೆ.

ದುಡ್ಡಿನ ಚೀಲದ ಜೊತೆ ಆರೋಪಿ: ಅಯೋಧ್ಯೆ ಅಕ್ರಮ ಟ್ರಸ್ಟ್‌ಗೆ ಮೊದಲೇ ತಿಳಿದಿತ್ತು..! ಅಯೋಧ್ಯೆ ದೇಣಿಗೆ ಕಳವು: ಎಷ್ಟೇ ಪ್ರಭಾವಿಯಾದರೂ ಕಠಿಣ ಶಿಕ್ಷೆ ನೀಡಲು ಡಿಕೆಶಿ ಆಗ್ರಹ
Dailyhunt
Disclaimer: This content has not been generated, created or edited by Dailyhunt. Publisher: Prajavani