ಭಾರತಕ್ಕೆ ಹೋಲಿಸಿದರೆ ದುಬೈನಲ್ಲಿ ವಜ್ರಾಭರಣಗಳ ಬೆಲೆ ಸಾಮಾನ್ಯವಾಗಿ ಶೇ 5ರಿಂದ 20ರಷ್ಟು ಕಡಿಮೆ ಇರಬಹುದು ಎಂದು ಯುಎಇಯ ಆಭರಣ ಉದ್ಯಮದ ಪ್ರಮುಖರ ಅಂದಾಜು. ಆಭರಣದ ಬೆಲೆ ಜಾಸ್ತಿಯಾದಷ್ಟೂ, ದುಬೈನಲ್ಲಿ ಖರೀದಿಸಿದರೆ ಆಗುವ ಉಳಿತಾಯವೂ ಜಾಸ್ತಿಯಾಗಬಹುದು ಎಂದು ವ್ಯಾಪಾರಿಗಳು ಹೇಳಿದ್ದಾರೆ.
ದುಬೈನಲ್ಲಿ ವಜ್ರಾಭರಣ ಅಗ್ಗವಾಗಿರುವುದಕ್ಕೆ ಕಾರಣವೇನು?
ಉದ್ಯಮದ ಪ್ರಮುಖರ ಪ್ರಕಾರ, ತೆರಿಗೆ ವ್ಯವಸ್ಥೆಯೇ ಪ್ರಮುಖ ಕಾರಣ. ಭಾರತದಲ್ಲಿ ಹೊಳಪು ನೀಡಲಾದ ವಜ್ರಗಳ ಮೇಲೆ ಶೇ 5ರಷ್ಟು ಆಮದು ಸುಂಕ ಮತ್ತು ಶೇ 3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ ಯುಎಇಯಲ್ಲಿ ವಜ್ರಗಳ ಮೇಲೆ ಆಮದು ಸುಂಕ ಇಲ್ಲ. ಜೊತೆಗೆ, ಪ್ರವಾಸಿಗರು ಪಾವತಿಸುವ ಶೇ 5ರಷ್ಟು ವ್ಯಾಟ್ ತೆರಿಗೆಯನ್ನು ಮರುಪಾವತಿಯಾಗಿ ಪಡೆಯುವ ಅವಕಾಶವೂ ಇದೆ.
ಈ ಕಾರಣದಿಂದ ಗ್ರಾಹಕರು ಅಂತಿಮ ಬಿಲ್ ಮೊತ್ತವನ್ನು ಹೋಲಿಸಿದಾಗ ದುಬೈನಲ್ಲಿ ಖರೀದಿ ಮಾಡುವುದು ಲಾಭದಾಯಕ ಎನ್ನುತ್ತಾರೆ ವ್ಯಾಪಾರಿಗಳು.
ಭಾರತೀಯರು ದುಬೈನಲ್ಲಿ ವಜ್ರಾಭರಣ ಖರೀದಿಸುವುದು ಏಕೆ?
ಯುಎಇಯಲ್ಲಿ 40 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಪ್ರತಿವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ಕೂಡ ಭೇಟಿ ನೀಡುತ್ತಾರೆ.
ಕಡಿಮೆ ಬೆಲೆ, ಜಿಐಎ ಮತ್ತು ಐಜಿಐ ಪ್ರಮಾಣೀಕೃತ ವಜ್ರಗಳ ಲಭ್ಯತೆ, ಅಂತರರಾಷ್ಟ್ರೀಯ ವಿನ್ಯಾಸಗಳ ಹೆಚ್ಚಿನ ಲಭ್ಯತೆ, ಪಾರದರ್ಶಕ ಬೆಲೆ ಮತ್ತು ಗುಣಮಟ್ಟದ ಭರವಸೆ, ವಿಮಾನ ನಿಲ್ದಾಣದಲ್ಲಿ ವ್ಯಾಟ್ ಮರುಪಾವತಿ ಸೌಲಭ್ಯ ಮುಂತಾದವುಗಳು ಭಾರತೀಯರನ್ನು ಹೆಚ್ಚಾಗಿ ಸೆಳೆಯುತ್ತವೆ ಎನ್ನುತ್ತಾರೆ ವ್ಯಾಪಾರಿಗಳು.
ಅಮೆರಿಕ-ಇರಾನ್ ಒಪ್ಪಂದದ ಹಿಂದಿನ ನಾಟಕೀಯ ಕ್ಷಣಗಳು: ಕೊನೆಯವರೆಗೂ ನಡೆದ ಹಗ್ಗಜಗ್ಗಾಟದುಬೈನಲ್ಲಿ ವಜ್ರಾಭರಣಗಳ ಬೆಲೆ ಕಡಿಮೆ ಇರಲು ಕಾರಣವೇನು?
ದುಬೈ ಜಾಗತಿಕ ಚಿನ್ನ, ವಜ್ರ ಮತ್ತು ಅಮೂಲ್ಯ ರತ್ನಗಳ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ಉದ್ಯಮದ ಪ್ರಮುಖರ ಪ್ರಕಾರ, ಪರಿಣಾಮಕಾರಿ ಪೂರೈಕೆ ವ್ಯವಸ್ಥೆ, ಅಂತರರಾಷ್ಟ್ರೀಯ ವ್ಯಾಪಾರಿಗಳ ಉಪಸ್ಥಿತಿ, ಕಡಿಮೆ ತೆರಿಗೆ ಹೊರೆ ಮತ್ತು ತೀವ್ರ ಸ್ಪರ್ಧೆಯ ಕಾರಣದಿಂದ ಗ್ರಾಹಕರಿಗೆ ಉತ್ತಮ ದರದಲ್ಲಿ ವಜ್ರಾಭರಣಗಳು ಲಭ್ಯವಾಗುತ್ತವೆ.
ಯಾವ ವಜ್ರಾಭರಣಗಳಿಗೆ ಹೆಚ್ಚು ಬೇಡಿಕೆ ಇದೆ?
ಭಾರತೀಯ ಖರೀದಿದಾರರಲ್ಲಿ ಈ ವಿಭಾಗಗಳಿಗೆ ಹೆಚ್ಚಿನ ಬೇಡಿಕೆ ಇದೆ
ಸೊಲಿಟೇರ್ ವಜ್ರಗಳು
ವಧುವಿನ ವಜ್ರಾಭರಣಗಳು
ಟೆನಿಸ್ ಬ್ರೇಸ್‌ಲೆಟ್‌ಗಳು
ದೈನಂದಿನ ಬಳಕೆಯ ಐಷಾರಾಮಿ ವಜ್ರಾಭರಣಗಳು
ಯುವ ಖರೀದಿದಾರರ ಆಯ್ಕೆ ಏನು?
ಯುವ ಗ್ರಾಹಕರು ಈಗ ಮದುವೆ ಅಥವಾ ವಿಶೇಷ ಸಂದರ್ಭಗಳಿಗೆ ಮಾತ್ರ ವಜ್ರಾಭರಣಗಳನ್ನು ಖರೀದಿ ಮಾಡುತ್ತಿಲ್ಲ. ಯುವಕರು ವಜ್ರಾಭರಣಗಳನ್ನು ಫ್ಯಾಷನ್ ಮತ್ತು ಜೀವನಶೈಲಿಯ ಭಾಗವಾಗಿ ಪರಿಗಣಿಸುತ್ತಿದ್ದಾರೆ. ಇದರಿಂದಾಗಿ ದಿನನಿತ್ಯ ಧರಿಸಬಹುದಾದ ವಿನ್ಯಾಸಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ.
ಪ್ರಯೋಗಾಲಯದಲ್ಲಿ ಬೆಳೆದ ಡೈಮಂಡ್ಸ್‌ಗೆ ಬೇಡಿಕೆ ಹೆಚ್ಚಿದೆಯೇ?
ಹೌದು. ಪ್ರಮಾಣೀಕೃತ ಲ್ಯಾಬ್-ಗ್ರೋನ್ ಡೈಮಂಡ್ಸ್‌ಗಳ (LGDs) ಬೇಡಿಕೆಯೂ ಹೆಚ್ಚುತ್ತಿದೆ. ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳು (Lab-grown diamonds) ನೈಸರ್ಗಿಕ ವಜ್ರಗಳಿಗಿಂತ ಅಗ್ಗವಾಗಿರುತ್ತವೆ. ಅದೇ ಮೊತ್ತದಲ್ಲಿ ಗ್ರಾಹಕರು ದೊಡ್ಡ ಗಾತ್ರದ ವಜ್ರವನ್ನು ಖರೀದಿಸಬಹುದು
ಬೆಲೆ ಲಾಭ, ಪ್ರಮಾಣೀಕೃತ ವಜ್ರಗಳು ಮತ್ತು ಹೆಚ್ಚಿನ ವಿನ್ಯಾಸಗಳ ಆಯ್ಕೆಯ ಕಾರಣದಿಂದ ದುಬೈ ವಜ್ರಾಭರಣ ಖರೀದಿಯ ಜನಪ್ರಿಯ ತಾಣವಾಗಿದೆ. ಭಾರತೀಯ ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರೇ ಈ ಬೇಡಿಕೆಗೆ ಪ್ರಮುಖ ಕಾರಣರಾಗಿದ್ದಾರೆ.
ಆಧಾರ: ಬಫ್ಲೆಹ್ ಜ್ಯುವೆಲರ್ಸ್, ಕಾನ್ಸ್ ಜುವೆಲ್ಸ್, ಖಲೀಜ್ ಟೈಮ್ಸ್
ಯುಎಇ ಮೇಲೆ ಎಲ್ ನಿನೊ ಪ್ರಭಾವ: ಅನಿವಾಸಿಗಳು ತಿಳಿಯಬೇಕಾದ ಪ್ರಮುಖ ಸಂಗತಿಗಳು
