Dailyhunt Logo
  • Light mode
    Follow system
    Dark mode
    • Play Story
    • App Story
FIFA: ಎಂಬಾಪೆ, ರೊನಾಲ್ಡೊ ಸೇರಿದಂತೆ ಪ್ರಮುಖರು ಪಿಂಕ್ ಶೂ ಧರಿಸಲು ಕಾರಣ ಏನು?

FIFA: ಎಂಬಾಪೆ, ರೊನಾಲ್ಡೊ ಸೇರಿದಂತೆ ಪ್ರಮುಖರು ಪಿಂಕ್ ಶೂ ಧರಿಸಲು ಕಾರಣ ಏನು?

ಬೆಂಗಳೂರು: 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯು ಹಲವಾರು ವಿಶಿಷ್ಟತೆಗಳಿಗೆ ಸಾಕ್ಷಿಯಾಗಿದೆ. ಈಗಾಗಲೇ ಫಿಫಾ ವಿಶ್ವಕಪ್‌ನ ಜ್ವರ ಕ್ರೀಡಾಭಿಮಾನಿಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದು, ರೋಚಕತೆಗೆ ಸಾಕ್ಷಿಯಾಗಿದೆ.

ನೀವು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವುದಾದರೆ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಸೇರಿದಂತೆ ಪ್ರಮುಖ ಆಟಗಾರರು ಪಿಂಕ್ (ಗುಲಾಬಿ) ಬಣ್ಣದ ಶೂಗಳನ್ನು ಧರಿಸಿ ಮೈದಾನದಲ್ಲಿ ಆಡುತ್ತಿರುವುದನ್ನು ಗಮನಿಸಿರಬಹುದು.

ಇದಕ್ಕೆ ಕಾರಣ ಏನಿರಬಹುದು ಎಂಬ ಕುತೂಹಲ ಕಾಡುತ್ತಿದೆಯೇ?

ಫಿಫಾ 2026: ಇಂಗ್ಲೆಂಡ್ ಆಟಗಾರರಿಗೆ ಸೇರಿದ ₹17 ಲಕ್ಷ ಮೌಲ್ಯದ ವಸ್ತುಗಳು ಕಳವುಫಿಫಾ ವೇದಿಕೆಯಲ್ಲಿ ಶಕೀರಾ 'ದೈ ದೈ': ಈ ಹಾಡು 'ವಾಕಾ ವಾಕಾ' ದಾಖಲೆ ಮುರಿಯುವುದೇ?

ಗರಿಷ್ಠ ಗೋಚರತೆ:

ಮೂಲಗಳ ಪ್ರಕಾರ, ಪಿಂಕ್ ಬಣ್ಣದ ಆಯ್ಕೆಯು ಕೇವಲ ಯಾದೃಚ್ಛಿಕವಲ್ಲ. ಬದಲಾಗಿ ಹೈ-ಟೆಕ್ ವಿಸಿಬಿಲಿಟಿ ಡಿಸೈನ್ (ಹೆಚ್ಚಿನ ದೃಶ್ಯ ಗೋಚರತೆ) ತಂತ್ರಜ್ಞಾನವನ್ನು ಆಧರಿಸಿದೆ. ಈ ಹಠಾತ್ ಗುಲಾಬಿ ಬಣ್ಣದ ಅಲೆಯು ನೈಕ್, ಅಡಿಡಾಸ್, ಪೂಮಾ, ನ್ಯೂ ಬ್ಯಾಲೆನ್ಸ್ ಮತ್ತು ಸ್ಕೆಚರ್ಸ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳು ಬಿಡುಗಡೆ ಮಾಡಿದ ಹೊಸ ಕಲೆಕ್ಷನ್‌ಗಳ ಫಲಿತಾಂಶವಾಗಿದೆ.

ಮೈದಾನದ ಹಸಿರು ಹುಲ್ಲಿನ ಹಾಸಿನ ಮೇಲೆ ಗುಲಾಬಿ ಬಣ್ಣವು ಎದ್ದು ಕಾಣುತ್ತದೆ. ಸ್ಟೇಡಿಯಂನಲ್ಲಿರುವ ಪ್ರೇಕ್ಷಕರಿಗೆ ಮಾತ್ರವಲ್ಲದೆ, ಟಿವಿ ಹಾಗೂ ಮೊಬೈಲ್‌ಗಳಲ್ಲಿ ಪಂದ್ಯ ವೀಕ್ಷಿಸುವವರಿಗೂ ಆಟಗಾರರ ಕಾಲುಗಳ ಚಲನೆ ಮತ್ತು ಶೂಗಳು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ.

ನೈಕ್ ಸಂಸ್ಥೆಯ ಜಾಗತಿಕ ಫುಟ್‌ಬಾಲ್ ಫೂಟ್‌ವೇರ್ ವಿಭಾಗದ ಹಿರಿಯ ಅಧಿಕಾರಿಯಾದ ಓಡಿಂಗಾ ನಿಮಾಕೋ ಅವರು 'ದಿ ಅಥ್ಲೆಟಿಕ್' ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡುತ್ತಾ, 'ಗರಿಷ್ಠ ದೃಶ್ಯ ಇಂಪ್ಯಾಕ್ಟ್' ಬೀರಲು ಗುಲಾಬಿ ಬಣ್ಣವನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗಿದೆ' ಎಂದು ವಿವರಿಸಿದ್ದಾರೆ. ಮೈದಾನದ ಹಸಿರು ಹುಲ್ಲಿನಲ್ಲಿ ಈ ಗಾಢವಾದ ಬಣ್ಣವು ನಿಖರವಾಗಿ ಎದ್ದು ಕಾಣುತ್ತದೆ, ಇದರಿಂದಾಗಿ ಕ್ರೀಡಾಂಗಣದಲ್ಲಿರುವ ಅಭಿಮಾನಿಗಳಿಗೆ ಆಟಗಾರರು ತಕ್ಷಣವೇ ಪ್ರತ್ಯೇಕವಾಗಿ ಎದ್ದು ಕಾಣುತ್ತಾರೆ ಎಂದು ತಿಳಿಸಿದ್ದಾರೆ.

ಕೈಲಿಯನ್ ಎಂಬಾಪೆ

ಕಾಂಟ್ರಾಸ್ಟ್ ಸ್ಟ್ರ್ಯಾಟಜಿ:

ಈ ಬಣ್ಣದ ಆಯ್ಕೆಯ ಹಿಂದೆ ಇರುವ ಮತ್ತೊಂದು ರಣನೀತಿ ಏನೆಂದರೆ, 2026ರ ವಿಶ್ವಕಪ್‌ನಲ್ಲಿ ಸ್ಪರ್ಧಿಸುತ್ತಿರುವ 48 ದೇಶಗಳಲ್ಲಿ ಯಾವುದೇ ದೇಶವೂ ಪ್ರಮುಖವಾಗಿ ಗುಲಾಬಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಿಲ್ಲ.

ತಂಡದ ಜೆರ್ಸಿಗಳು ಮತ್ತು ಸಾಕ್ಸ್‌ಗಳ ಬಣ್ಣಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುವ ಬಣ್ಣವನ್ನು ಆರಿಸಿಕೊಳ್ಳುವುದರಿಂದ, ಶೂಗಳು ಜೆರ್ಸಿಯೊಂದಿಗೆ ಬೆರೆತುಹೋಗದೆ ಪ್ರತ್ಯೇಕವಾಗಿ ಎದ್ದು ಕಾಣುವುದು ಖಚಿತವಾಗುತ್ತದೆ. ಕೇವಲ ಬೆಲ್ಜಿಯಂ ತಂಡದ ಅವೇ ಕಿಟ್ ವಿನ್ಯಾಸದಲ್ಲಿ ಸಣ್ಣ ಪ್ರಮಾಣದ ಗುಲಾಬಿ ಬಣ್ಣದ ಮಿಶ್ರಣವಿದೆ.

ಡಬ್ಲ್ಯುಜಿಎಸ್‌ಎನ್‌ನಂತಹ ಟ್ರೆಂಡ್ ಮುನ್ಸೂಚನೆ ನೀಡುವ ಸಂಸ್ಥೆಯು ಎರಡು ವರ್ಷಗಳ ಹಿಂದೆಯೇ ಈ ಕುರಿತು ಭವಿಷ್ಯ ನುಡಿದಿತ್ತು. 2026ರಲ್ಲಿ 'ಎಲೆಕ್ಟ್ರಿಕ್ ಫ್ಯೂಷಿಯಾ' (ಒಂದು ಬಗೆಯ ಗಾಢ ಗುಲಾಬಿ ಬಣ್ಣ) ಟ್ರೆಂಡ್ ಆಗಲಿದೆ ಎಂದು ಹೆಸರಿಸಿತ್ತು. ಈಗ ಡಬ್ಲ್ಯುಜಿಎಸ್‌ಎನ್‌ ಭವಿಷ್ಯ ನಿಜವಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ

ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವುದು:

ಕ್ರೀಡಾ ಮನೋವಿಜ್ಞಾನ ಮತ್ತು ಬ್ರ್ಯಾಂಡ್‌ಗಳ ಸಂಶೋಧನೆಯ ಪ್ರಕಾರ, ಇಂತಹ ಅತಿ ಒತ್ತಡದ ಟೂರ್ನಿಗಳಲ್ಲಿ ಆಟಗಾರರು ಹೆಚ್ಚು ಪ್ರಕಾಶಮಾನವಾದ ಹಾಗೂ ಧೈರ್ಯದ ಸಂಕೇತವಾಗಿರುವ ಬಣ್ಣಗಳನ್ನು ಧರಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಗುಲಾಬಿ ಬಣ್ಣದಷ್ಟು ಪ್ರಖರವಾದ ಬಣ್ಣವನ್ನು ಧರಿಸಿದಾಗ ಅತ್ಯುತ್ತಮ ಪ್ರದರ್ಶನ ನೀಡುವ ಮನಸ್ಥಿತಿ ಮೂಡಿಬರುತ್ತದೆ.

ಮೆಸ್ಸಿ ಶೂ ಭಿನ್ನ...

ಹೆಚ್ಚಿನ ಆಟಗಾರರು ಈ ಗುಲಾಬಿ ಬಣ್ಣದ ಶೂಗಳನ್ನು ಆರಿಸಿದರೂ ಕೆಲವರು ತಮ್ಮ ಸಾಂಪ್ರದಾಯಿಕ ಶೈಲಿಗೆ ಮೊರೆ ಹೋಗಿದ್ದಾರೆ. ಉದಾಹರಣೆಗೆ, ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಅರ್ಜೆಂಟೀನಾ ದೇಶದ ಧ್ವಜದ ಬಣ್ಣಗಳಿಗೆ ಹೊಂದುವಂತಹ ಬಿಳಿ ಮತ್ತು ನೀಲಿ ಬಣ್ಣದ ಕಸ್ಟಮ್ ಶೂ ಧರಿಸಿದ್ದಾರೆ.

ಲಯೊನೆಲ್ ಮೆಸ್ಸಿ

ಫಿಫಾ ವಿಶ್ವಕಪ್ ಹಿನ್ನೆಲೆಯಲ್ಲಿ ರೊನಾಲ್ಡೊ ಕಟೌಟ್ ಅಳವಡಿಸಿದ ಸುಂಟಿಕೊಪ್ಪ ಯುವ ಪಡೆಫಿಫಾ ವಿಶ್ವಕಪ್ 2026: ಫ್ರಾನ್ಸ್‌ನ ಎಂಬಾಪೆ ಜಾದೂಗೆ ಸೆನೆಗಲ್ ಧೂಳಿಪಟ
Dailyhunt
Disclaimer: This content has not been generated, created or edited by Dailyhunt. Publisher: Prajavani