Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್‌: ಎಂಬಾಪೆ ಗೋಲು ಬಲದಿಂದ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌

ಫಿಫಾ ವಿಶ್ವಕಪ್‌: ಎಂಬಾಪೆ ಗೋಲು ಬಲದಿಂದ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಫ್ರಾನ್ಸ್‌

ಪೆನ್ಸಿಲ್ವೇನಿಯಾ: 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪರಗ್ವೆ ವಿರುದ್ಧ 1-0 ಗೋಲುಗಳ ಅಂತರದ ಗೆಲುವು ಸಾಧಿಸಿರುವ ಫ್ರಾನ್ಸ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪೆನ್ಸಿಲ್ವೇನಿಯಾದಲ್ಲಿ ಶನಿವಾರ ತಡರಾತ್ರಿ ನಡೆದ ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಕೈಲಿಯನ್ ಎಂಬಾಪೆ ಗಳಿಸಿದ ಏಕೈಕ ಗೋಲು ನೆರವಿನಿಂದ ಫ್ರಾನ್ಸ್ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯವು ಹಲವು ರೋಚಕ ನಿಮಿಷಗಳಿಗೆ ಸಾಕ್ಷಿಯಾಗಿತ್ತು. ಪಂದ್ಯದ 70ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅನ್ನು ಗೋಲು ಆಗಿ ಪರಿವರ್ತಿಸಿದ ಎಂಬಾಪೆ, ಮಗದೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಮೊರಕ್ಕೊಗೆ ಭರ್ಜರಿ ಗೆಲುವು, ಕೆನಡಾ ಕನಸು ಭಗ್ನ...

ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ತಂಡಕ್ಕೆ ಮೊರಕ್ಕೊ ಸವಾಲು ಎದುರಾಗಲಿದೆ. ಮಗದೊಂದು ಪಂದ್ಯದಲ್ಲಿ ಆತಿಥೇಯ ಕೆನಡಾ ವಿರುದ್ಧ ಮೊರಕ್ಕೊ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು.

ಫ್ರಾನ್ಸ್ ಹಾಗೂ ಮೊರಕ್ಕೊ ನಡುವಣ ಕ್ವಾರ್ಟರ್ ಪಂದ್ಯವು ಭಾರತೀಯ ಕಾಲಮಾನ ಶುಕ್ರವಾರ ತಡರಾತ್ರಿ 1.30ಕ್ಕೆ ನಡೆಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani