Dailyhunt Logo
  • Light mode
    Follow system
    Dark mode
    • Play Story
    • App Story
ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿ

ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿ

ಬಾಸ್ಟನ್: ಫ್ರಾನ್ಸ್ ಫುಟ್‌ಬಾಲ್ ತಂಡದ ತಾರೆ, ನಾಯಕ ಕೈಲಿಯನ್ ಎಂಬಾಪೆ, ಪ್ರಸಕ್ತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದಾರೆ.

ಇಲ್ಲಿ ನಡೆದ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಬಾಪೆ ಹಾಗೂ ಒಸ್ಮಾನ್ ಡೆಂಬೆಲೆ ಗಳಿಸಿದ ಗೋಲಿನ ಬಲದೊಂದಿಗೆ ಫ್ರಾನ್ಸ್ ತಂಡವು ಮೊರಾಕ್ಕೊ ವಿರುದ್ಧ 2-0 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಇದರೊಂದಿಗೆ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸತತ ಮೂರನೇ ಬಾರಿಗೆ ಫ್ರಾನ್ಸ್ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಮೆಸ್ಸಿ ದಾಖಲೆಯ ಸನಿಹದಲ್ಲಿ ಎಂಬಾಪೆ...

ಕೇವಲ ಮೂರು ವಿಶ್ವಕಪ್ ಆವೃತ್ತಿಗಳಲ್ಲಿ (2018, 2022, 2026) ಎಂಬಾಪೆ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಅರ್ಜೆಂಟೀನಾದ ದಿಗ್ಗಜ ಲಯೊನೆಲ್ ಮೆಸ್ಸಿ ಅವರ ಸಾರ್ವಕಾಲಿಕ ದಾಖಲೆಯಾದ 21 ಗೋಲುಗಳನ್ನು ಸರಿಗಟ್ಟಲು ಅವರಿಗೆ ಇನ್ನು ಕೇವಲ ಒಂದು ಗೋಲಿನ ಅಗತ್ಯವಿದೆ.

ಫಿಫಾ ವಿಶ್ವಕಪ್‌ನಲ್ಲಿ 20 ಪಂದ್ಯಗಳಲ್ಲೇ ಎಂಬಾಪೆ ಈ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಇದು ಎಂಬಾಪೆ ಅವರ 8ನೇ ಗೋಲಾಗಿದ್ದು, 'ಗೋಲ್ಡನ್ ಬೂಟ್' ರೇಸ್‌ನಲ್ಲಿ ಎಂಬಾಪೆ ಅವರು ಮೆಸ್ಸಿ ಜೊತೆಗೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮೂರು ಗೋಲುಗಳಿಗೆ ಅಸಿಸ್ಟ್ ಕೂಡ ಮಾಡಿದ್ದಾರೆ.

ಫ್ರಾನ್ಸ್ ಫುಟ್‌ಬಾಲ್ ಇತಿಹಾಸದಲ್ಲೇ ದೇಶದ ಪರ 100 ಅಂತರರಾಷ್ಟ್ರೀಯ ಗೋಲುಗಳಲ್ಲಿ (64 ಗೋಲುಗಳು ಮತ್ತು 36 ಅಸಿಸ್ಟ್‌ಗಳು) ಭಾಗಿಯಾದ ಮೊದಲ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೂ 27 ವರ್ಷದ ಎಂಬಾಪೆ ಪಾತ್ರರಾಗಿದ್ದಾರೆ.

ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವು ಸ್ಪೇನ್ ಹಾಗೂ ಬೆಲ್ಜಿಯಂ ನಡುವಣ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.

ಡ‍‍ೆಂಬೆಲೆ ಐದು ಗೋಲು...

ಗೋಲ್ಡನ್ ಬೂಟ್ ರೇಸ್‌ನಲ್ಲಿ ಫ್ರಾನ್ಸ್‌ನವರೇ ಆದ ಉಸ್ಮಾನ್ ಡೆಂಬೆಲೆ ಐದನೇ ಸ್ಥಾನದಲ್ಲಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಈವರೆಗಿನ ಅತಿ ಹೆಚ್ಚು ಗೋಲು ಸರದಾರರು:

  • ಕೈಲಯನ್ ಎಂಬಾಪೆ: 8

  • ಲಯೊನೆಲ್ ಮೆಸ್ಸಿ: 8

  • ಎರ್ಲಿಂಗ್ ಹಾಲಂಡ್: 7

  • ಹ್ಯಾರಿ ಕೇನ್: 6

  • ಉಸ್ಮಾನ್ ಡೆಂಬೆಲೆ: 5

Dailyhunt
Disclaimer: This content has not been generated, created or edited by Dailyhunt. Publisher: Prajavani