Dailyhunt Logo
  • Light mode
    Follow system
    Dark mode
    • Play Story
    • App Story
ಹಳ್ಳಿ ಪವರ್‌ ರಿಯಾಲಿಟಿ ಶೋ: ಪ್ಯಾಟೆ ಹುಡುಗಿಯರ ಆಡಿಷನ್ಸ್‌ ಇದೇ ಜೂನ್‌ 27ಕ್ಕೆ

ಹಳ್ಳಿ ಪವರ್‌ ರಿಯಾಲಿಟಿ ಶೋ: ಪ್ಯಾಟೆ ಹುಡುಗಿಯರ ಆಡಿಷನ್ಸ್‌ ಇದೇ ಜೂನ್‌ 27ಕ್ಕೆ

ಜೀ ಪವರ್‌ ವಾಹಿನಿಯಲ್ಲಿ ಹಳ್ಳಿ ಪವರ್‌ ಎಂಬ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಇದಕ್ಕೆ ಇದೀಗ ಆಡಿಷನ್ಸ್‌ ಶುರುವಾಗುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಜೋಡಿ-1, ಸರಿಗಮಪ ಕಾರ್ಯಕ್ರಮಗಳು ಮೂಡಿಬರುತ್ತಿವೆ. ಜೀ ಪವರ್‌ ವಾಹಿನಿಯಲ್ಲಿ ಇದೀಗ ಹಳ್ಳಿ ಪವರ್‌ ಕಾರ್ಯಕ್ರಮ ಮೂಡಿಬರಲಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವ ಪ್ಯಾಟೆ ಹುಡುಗಿಯರು ಆಡಿಷನ್ಸ್‌ ನೀಡಬಹುದು. ಆಡಿಷನ್ಸ್‌ನಲ್ಲಿ ಆಯ್ಕೆ ಆಗುವವರು ಶೋನಲ್ಲಿ ಭಾಗವಹಿಸಲಿದ್ದಾರೆ.

ಬನ್ಸಾಲಿ ನಿರ್ದೇಶನದ ಲವ್ & ವಾರ್ ಸೆಟ್‌ನಲ್ಲಿ ವಿದ್ಯುತ್ ಅವಘಡ; ಸಿಬ್ಬಂದಿ ಸಾವುಕಲಬುರಗಿ: ಮೊಹರಂ ವೀಕ್ಷಿಸಲು ತೆರಳಿದ್ದ ಬಾಲಕನ ಮೃತದೇಹ ತೆರೆದ ಬಾವಿಯಲ್ಲಿ ಪತ್ತೆ

'ಹಳ್ಳಿ ಹೈದ ಪ್ಯಾಟೇಗ್‌ ಬಂದ', 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು', 'ಪ್ಯಾಟೆ ಮಂದಿ ಕಾಡಿಗ್‌ ಬಂದ್ರು', ಸೇರಿದಂತೆ 'ಹಳ್ಳಿ ಪವರ್ ಸೀಸನ್‌-1' ನಿರೂಪಣೆ ಮಾಡಿದ್ದ ನಟ, ನಿರೂಪಕ ಅಕುಲ್ ಬಾಲಾಜಿ ಅವರೇ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

'ಹಳ್ಳಿ ಪವರ್ ರೀಲೋಡೆಡ್‌'ಗೆ ಆಡಿಷನ್‌ ಪ್ರಾರಂಭವಾಗುತ್ತಿದೆ. ಇದೇ ಜೂನ್ 27ರ ಶನಿವಾರ ಬೆಳಿಗ್ಗೆ 9ಗಂಟೆಯಿಂದ ಪ್ರತಿಭಾವಂತ ಹೆಣ್ಣು ಮಕ್ಕಳಿಗಾಗಿ ಆಡಿಷನ್‌ ನಡೆಯಲಿದೆ. 'ಕಾಮಿಡಿ ಕಿಲಾಡಿಗಳು', 'ಜೋಡಿ ನಂ-1', 'ಡ್ರಾಮಾ ಜ್ಯೂನಿಯರ್ಸ್‌' ಸೇರಿದಂತೆ ಅನೇಕ ರಿಯಾಲಿಟಿ ಶೋಗಳಿಗೆ ವೇದಿಕೆ ಆಗಿರುವ ಬೆಂಗಳೂರಿನ ಚಿಕ್ಕಲಸಂದ್ರದ ಅಬ್ಬಯ್ಯ 'ನಾಯ್ಡು ಸ್ಟುಡಿಯೋ'ದಲ್ಲಿ ಆಡಿಷನ್‌ ನಡೆಯಲಿದೆ.

ಚೀನಾದಿಂದ ಯುದ್ಧ ವಿಮಾನ ಖರೀದಿಸಲಿರುವ ಬಾಂಗ್ಲಾದೇಶ: ವರದಿಒಂಟಿಯಾಗಿಯೇ ಸವಾಲು ಎದುರಿಸಿದ: CM ವಿಜಯ್ ರಾಜಕೀಯ ಪಯಣದ ಬಗ್ಗೆ ತಾಯಿ ಶೋಭಾ ಭಾವುಕ

18ರಿಂದ 28ರ ವಯಸ್ಸಿನ ಮಾಡ್ರನ್‌ ಯುವತಿಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಆಡಿಷನ್‌ನಲ್ಲಿ ಭಾಗವಹಿಸುವ ಮುನ್ನ ಭಾವ ಚಿತ್ರ ಮತ್ತು ಸಂಪೂರ್ಣ ವಿವರಗಳನ್ನ 9513134434 ಈ ಮೋಬೈಲ್‌ ಸಂಖ್ಯೆಗೆ ವಾಟ್ಸಾಪ್‌ ಮೂಲಕ ಕಳುಹಿಸಬೇಕು ಎಂದು ವಾಹಿನಿ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani