ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿ
ಒಂದು ಸಾಲಿನಲ್ಲಿಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಳಿಕ, ಅವರ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ.
ಪ್ರಮುಖ ಸಂಗತಿಗಳು• ಶವಸಂಸ್ಕಾರದ ದಿನಾಂಕ ಮತ್ತು ಸ್ಥಳಗಳುಅಯಾತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರ ಜುಲೈ 4 ರಿಂದ ಟೆಹರಾನ್‌ನಲ್ಲಿ ಆರಂಭವಾಗಿ, ಜುಲೈ 9 ರಂದು ಮಷಾದ್‌ನಲ್ಲಿ ಮುಕ್ತಾಯಗೊಳ್ಳಲಿದೆ.• ಹತ್ಯೆಯ ಹಿನ್ನೆಲೆಫೆಬ್ರುವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 86 ವರ್ಷದ ಸರ್ವೋಚ್ಚ ನಾಯಕ ಖಮೇನಿ ಸೇರಿದಂತೆ ಹಲವು ನಾಯಕರು ಸಾವನ್ನಪ್ಪಿದ್ದರು.• ಉತ್ತರಾಧಿಕಾರಿ ಮತ್ತು ಭದ್ರತೆನಿಧನದ ನಂತರ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದ್ದು, ಅವರು ದಾಳಿಯಲ್ಲಿ ಗಾಯಗೊಂಡಿರುವ ಕಾರಣ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.• ಶಾಂತಿ ಮಾತುಕತೆಬೆಳೆಯುತ್ತಿರುವ ಯುದ್ಧದ ಉದ್ವಿಗ್ನತೆಯನ್ನು ತಗ್ಗಿಸಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಅಂತಿಮ ಹಂತ ತಲುಪಿದೆ.• ಇರಾನ್‌ನ ರಾಜಕೀಯ ಪ್ರಭಾವಖಮೇನಿ ಅವರು ಅಮೆರಿಕದ ಪ್ರಬಲ ವಿರೋಧಿಯಾಗಿದ್ದಲ್ಲದೆ, ಹೆಜ್ಬೊಲ್ಲಾ ಸಂಘಟನೆಯಂತಹ ಬಂಡುಕೋರ ಪಡೆಗಳ ಮೂಲಕ ಅಂತರಾಷ್ಟ್ರೀಯ ಮಿಲಿಟರಿ ಪ್ರಭಾವ ವಿಸ್ತರಿಸಿದ್ದರು.ಪ್ರಮುಖ ಅಂಕಿಅಂಶಗಳುಫೆಬ್ರುವರಿ 28ದಾಳಿ ನಡೆದ ದಿನಾಂಕಜುಲೈ 4 - 9ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ನಡೆಯುವ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ದುಬೈ: ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ರಾಜಧಾನಿ ಟೆಹರಾನ್‌ನಲ್ಲಿ ಜುಲೈ 4ರಂದು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್‌ನಲ್ಲಿ ಜುಲೈ 9ರಂದು ಕೊನೆಗೊಳ್ಳಲಿದೆ.
ಈ ಸಂಬಂಧ ಇರಾನ್ ಮಾಧ್ಯಮಗಳು ಶನಿವಾರ ಸುದ್ದಿ ಪ್ರಕಟಿಸಿವೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಫೆಬ್ರುವರಿ 28ರಂದು ಇರಾನ್ ಮೇಲೆ ದಾಳಿ ನಡೆಸಿದ್ದವು. 36 ವರ್ಷಗಳಿಂದ ಇಸ್ಲಾಮಿಕ್ ರಾಷ್ಟ್ರದ ಪರಮೋಚ್ಚ ನಾಯಕನಾಗಿದ್ದ 86 ವರ್ಷದ ಖಮೇನಿ ಸೇರಿದಂತೆ ಹಲವು ನಾಯಕರು ದಾಳಿ ವೇಳೆ ಹತ್ಯೆಯಾಗಿದ್ದರು.
ಅಂತಿಮ ಸಂಸ್ಕಾರದ ವ್ಯವಸ್ಥೆಯ ಪಟ್ಟಿಯಲ್ಲಿ, ಟೆಹರಾನ್ ದಕ್ಷಿಣ ಭಾಗದಲ್ಲಿರುವ ಪವಿತ್ರ ನಗರ ಕೋಮ್‌ನಲ್ಲಿ ಜುಲೈ 7ರಂದು ನಡೆಯುವ ಕಾರ್ಯಕ್ರಮಗಳೂ ಸೇರಿವೆ.
ವ್ಯಕ್ತಿಯು ಮೃತಪಟ್ಟ 24 ಗಂಟೆಗಳಲ್ಲಿ ಅಥವಾ ಸಾಧ್ಯವಾದಷ್ಟು ಬೇಗನೆ ಶವಸಂಸ್ಕಾರ ಮಾಡಬೇಕು ಎಂದು ಇಸ್ಲಾಮಿಕ್ ಕಾನೂನುಗಳು ಹೇಳುತ್ತವೆಯಾದರೂ, ಯುದ್ಧದಂತಹ ಸಂದರ್ಭಗಳಲ್ಲಿ ವಿನಾಯಿತಿ ಇದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ: ನೆತನ್ಯಾಹುತಮ್ಮ ಅವಧಿಯಲ್ಲಿ ಇರಾನ್ ಅನ್ನು ಅಮೆರಿಕದ ಪ್ರಬಲ ವಿರೋಧಿಯಾಗಿ ರೂಪಿಸಿದ ಖ್ಯಾತಿ ಅಯಾತೊಲ್ಲಾ ಖಮೇನಿಯದ್ದು. ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ಸಂಘಟನೆಯಂತಹ ಬಂಡುಕೋರ ಪಡೆಗಳ ಮೂಲಕ ಪಶ್ಚಿಮ ಏಷ್ಯಾದಾದ್ಯಂತ ಮಿಲಿಟರಿ ಪ್ರಭಾವ ವಿಸ್ತರಿಸಿದ್ದೂ ಅವರೇ.
ಇರಾನ್ ಪರಮಾಣು ಕಾರ್ಯತಂತ್ರವನ್ನು ವಿಫಲಗೊಳಿಸುವ ಪ್ರಯತ್ನ ಮುಂದುವರಿಸಿರುವ ಅಮೆರಿಕದ ಕಟು ವಿರೋಧಿಯಾಗಿದ್ದರು.
ಒಪ್ಪಂದದ ಸನಿಹ ಪಾಕ್, ಅಮೆರಿಕ-ಇರಾನ್
ತನ್ನ ಮೇಲಿನ ದಾಳಿಯಿಂದ ಕೆರಳಿದ್ದ ಇರಾನ್, ಪ್ರತೀಕಾರವಾಗಿ ಇಸ್ರೇಲ್ ಹಾಗೂ ಅಮೆರಿಕ ಮಾತ್ರವಲ್ಲದೆ, ಅವುಗಳ ಮಿತ್ರ ರಾಷ್ಟ್ರಗಳ ವಿರುದ್ಧವೂ ದಾಳಿ ನಡೆಸಿತ್ತು. ಇದರಿಂದಾಗಿ ಇಡೀ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನ ಪರಿಸ್ಥಿತಿ ಇದೆ.
ಸದ್ಯ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್ ಹಾಗೂ ಅಮೆರಿಕ ಶಾಂತಿ ಮಾತುಕತೆ ನಡೆಸುತ್ತಿವೆ.
ಮಾತುಕತೆಯು ಅಂತಿಮ ಹಂತಕ್ಕೆ ತಲುಪಿದೆ. 24 ಗಂಟೆಯೊಳಗೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಹೇಳಿದ್ದಾರೆ. ಇದರ ಬೆನ್ನಲ್ಲೇ, ಅಂತಿಮ ಸಂಸ್ಕಾರದ ಸುದ್ದಿ ಹೊರಬಿದ್ದಿದೆ.
ಮೊಜ್ತಬಾಗೆ ಹೊಣೆ
ಅಯಾತೊಲ್ಲಾ ನಿಧನದ ಬಳಿಕ ಅವರ ಮಗ ಮೊಜ್ತಬಾ ಅವರನ್ನು ನೂತನ ಸರ್ವೋಚ್ಚ ನಾಯಕನನ್ನಾಗಿ ನೇಮಿಸಲಾಗಿದೆ. ಫೆಬ್ರುವರಿ 28ರಂದು ನಡೆದ ದಾಳಿ ವೇಳೆ ಮೊಜ್ತಬಾ ಅವರ ಪತ್ನಿಯೂ ಮೃತಪಟ್ಟಿದ್ದಾರೆ. ಮೊಜ್ತಬಾ ಅವರೂ ಗಂಭೀರವಾಗಿ ಗಾಯಗೊಂಡಿದ್ದು ಗೋಪ್ಯ ಸ್ಥಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ದಾಳಿ ಬಳಿಕ ಅವರು ಸಾರ್ವಜನಿಕವಾಗಿ ಒಮ್ಮೆಯೂ ಕಾಣಿಸಿಕೊಂಡಿಲ್ಲ. ಹೀಗಾಗಿ, ಅವರು ಹೇಗಿದ್ದಾರೆ ಎಂಬುದೂ ಇನ್ನಷ್ಟೇ ಗೊತ್ತಾಗಬೇಕಿದೆ.

