Dailyhunt Logo
  • Light mode
    Follow system
    Dark mode
    • Play Story
    • App Story
ಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳು

ಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳು

ಒಂದು ಸಾಲಿನಲ್ಲಿಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಮೃತದೇಹವನ್ನು ಹತ್ಯೆ ನಡೆದ ಸ್ಥಳಕ್ಕೆ ಕೊಂಡೊಯ್ಯಲಾಗಿದ್ದು, ಜುಲೈ 4 ರಿಂದ ಅಂತಿಮ ವಿಧಿ-ವಿಧಾನಗಳು ಆರಂಭವಾಗಲಿವೆ.

ಪ್ರಮುಖ ಪ್ರಶ್ನೋತ್ತರ


ಖಮೇನಿ ಅವರ ಮೃತದೇಹವನ್ನು ಎಲ್ಲಿಗೆ ಕೊಂಡೊಯ್ಯಲಾಗಿದೆ?

ಇರಾನ್ ಮಾಧ್ಯಮಗಳ ಪ್ರಕಾರ, ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆಗೀಡಾದ ಸ್ಥಳಕ್ಕೆ ಖಮೇನಿ ಅವರ ಶವಪೆಟ್ಟಿಗೆಯನ್ನು ಕೊಂಡೊಯ್ಯಲಾಗಿದೆ.


ಅಂತ್ಯಕ್ರಿಯೆಯ ಪ್ರಕ್ರಿಯೆ ಯಾವಾಗ ಮತ್ತು ಎಲ್ಲಿ ನಡೆಯಲಿದೆ?

ಖಮೇನಿ ಅವರ ಅಂತಿಮ ವಿಧಿ-ವಿಧಾನಗಳು ಜುಲೈ 4 ರಂದು ಟೆಹರಾನ್‌ನಲ್ಲಿ ಆರಂಭವಾಗಿ, ಜುಲೈ 9 ರಂದು ಅವರ ತವರು ನಗರವಾದ ಮಷಾದ್‌ನಲ್ಲಿ ಕೊನೆಗೊಳ್ಳಲಿದೆ.


ಅಂತಿಮ ವಿದಾಯ ಸಮಾರಂಭದಲ್ಲಿ ಎಷ್ಟು ಮಂದಿ ಭಾಗವಹಿಸುವ ನಿರೀಕ್ಷೆಯಿದೆ?

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪ್ರಕಾರ, ಜುಲೈ 4 ಮತ್ತು 5 ರಂದು ನಡೆಯಲಿರುವ ಸಾರ್ವಜನಿಕ ಅಂತಿಮ ವಿದಾಯ ಸಮಾರಂಭದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ.


ವಿಶ್ವಸಂಸ್ಥೆಯು ಈ ಘಟನೆಗೆ ಹೇಗೆ ಸ್ಪಂದಿಸಿದೆ?

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಇರಾನ್ ವಿದೇಶಾಂಗ ಸಚಿವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದು, ಪ್ರಾದೇಶಿಕ ಯುದ್ಧಗಳನ್ನು ಕೊನೆಗೊಳಿಸುವ ಕುರಿತು ಚರ್ಚಿಸಿದ್ದಾರೆ.

ಪ್ರಮುಖ ಅಂಕಿಅಂಶಗಳು

ಜುಲೈ 4ಅಂತ್ಯಕ್ರಿಯೆ ಆರಂಭದ ದಿನಜುಲೈ 9ಅಂತ್ಯಕ್ರಿಯೆ ಮುಕ್ತಾಯದ ದಿನ2 ಕೋಟಿನಿರೀಕ್ಷಿತ ಪಾಲ್ಗೊಳ್ಳುವವರ ಸಂಖ್ಯೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಟೆಹರಾನ್‌: ಇರಾನ್ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅವರ ಶವವನ್ನು, ಹತ್ಯೆಯಾದ ಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ಇರಾನ್‌ ಮಾಧ್ಯಮಗಳು ವರದಿ ಮಾಡಿವೆ.

'ಹುತಾತ್ಮ ನಾಯಕ ಅಯಾತೊಲ್ಲಾ ಖಮೇನಿ ಅವರ ಮೃತದೇಹ ಇರುವ ಶವಪೆಟ್ಟಿಗೆಯನ್ನು ಅವರು ಹುತಾತ್ಮರಾದ ಸ್ಥಳಕ್ಕೆ ತರಲಾಗಿದೆ' ಎಂದು ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್ ಬ್ರಾಡ್‌ಕಾಸ್ಟಿಂಗ್‌ (ಐಆರ್‌ಐಬಿ) ವರದಿ ಮಾಡಿದೆ.

ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿ ವೇಳೆ ಖಮೇನಿ ಹತ್ಯೆಯಾಗಿದ್ದರು. ಇದೀಗ, ನಾಲ್ಕು ತಿಂಗಳ ನಂತರ ಅಂತ್ಯಕ್ರಿಯೆ ನೆರವೇರುತ್ತಿದೆ. ರಾಜಧಾನಿ ಟೆಹರಾನ್‌ನಲ್ಲಿ ಜುಲೈ 4ರಂದು ವಿಧಿ-ವಿಧಾನಗಳು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್‌ನಲ್ಲಿ ಜುಲೈ 9ರಂದು ಕೊನೆಗೊಳ್ಳಲಿದೆ.

ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆ: ಡೊನಾಲ್ಡ್ ಟ್ರಂಪ್ಅಯಾತೊಲ್ಲಾ ಖಮೇನಿ ಮಗಳು, ಮೊಮ್ಮಗಳು, ಅಳಿಯ ಹತ್ಯೆ: ಇರಾನ್ ಮಾಧ್ಯಮಗಳ ವರದಿ

ಟೆಹರಾನ್‌ನಲ್ಲಿ ಜುಲೈ 4 ಮತ್ತು 5ರಂದು ನಡೆಯುವ ಸಾರ್ವಜನಿಕ ಅಂತಿಮ ವಿದಾಯ ಸಮಾರಂಭದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (ಐಆರ್‌ಜಿಸಿ) ಹೇಳಿದೆ.

ಏತನ್ಮಧ್ಯೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಿಗೆ ಕರೆ ಮಾಡಿ, ಸಂತಾಪ ಸೂಚಿಸಿದ್ದಾರೆ ಎಂದು ಇರಾನ್ ಸರ್ಕಾರ ತಿಳಿಸಿದೆ.

'ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಿಗೆ ಕರೆ ಮಾಡಿ, ಅಯಾತೊಲ್ಲಾ ಅಲಿ ಖಮೇನಿ ಅವರು ಹುತಾತ್ಮರಾಗಿರುವುದಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಾದೇಶಿಕ, ಅಂತರರಾಷ್ಟ್ರೀಯ ಬೆಳವಣಿಗೆಗಳು, ಹೊರ್ಮುಜ್ ಜಲಸಂಧಿ, ಲೆಬನಾನ್ ಕದನ ವಿರಾಮ ಮತ್ತು ಪಶ್ಚಿಮ ಏಷ್ಯಾ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಗಳ ಬಗ್ಗೆಯೂ ಚರ್ಚಿಸಿದ್ದಾರೆ' ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani