ಇರಾನ್ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಪವಿತ್ರ ನಗರ ಮಷಾದ್‌ನಲ್ಲಿ ಜುಲೈ 9ರಂದು ನಡೆಯಲಿದೆ.
ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿ ವೇಳೆ ಖಮೇನಿ ಹತ್ಯೆಯಾಗಿದ್ದರು. ಇದೀಗ, ನಾಲ್ಕು ತಿಂಗಳ ನಂತರ ಅಂತ್ಯಕ್ರಿಯೆ ನೆರವೇರುತ್ತಿದೆ.
ರಾಜಧಾನಿ ಟೆಹರಾನ್‌ನಲ್ಲಿ ಜುಲೈ 4ರಂದು ವಿಧಿ-ವಿಧಾನಗಳು ಆರಂಭವಾಗಲಿದ್ದು, ಅವರ ತವರು ನಗರ ಮಷಾದ್‌ನಲ್ಲಿ ಕೊನೆಗೊಳ್ಳಲಿದೆ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವರೇ ಮೊಜ್ತಬಾ?
ಅಲಿ ಖಮೇನಿ ಅವರಿಗೆ ಅಂತಿಮ ವಿದಾಯ ಹೇಳುವುದು ಮಾತ್ರವಲ್ಲ; ಅವರ ಮಗ ಮೊಜ್ತಬಾ ಖಮೇನಿ ಅವರು ನೂತನ ಸರ್ವೋಚ್ಚ ನಾಯಕರಾದ ನಂತರ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವರೇ ಎಂಬದೂ ಸಾಕಷ್ಟು ಕುತೂಹಲ ಮೂಡಿಸಿದೆ.
ಅಮೆರಿಕ, ಇಸ್ರೇಲ್ ಜಂಟಿ ದಾಳಿ ವೇಳೆ 56 ವರ್ಷದ ಮೊಜ್ತಬಾ ಅವರೂ ಗಾಯಗೊಂಡಿದ್ದಾರೆ. ಅವರ ಕಾಲು, ಮುಖಕ್ಕೆ ಗಂಭೀರ ಗಾಯಗಳಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ ಅವರನ್ನು ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಪಶ್ಚಿಮ ಏಷ್ಯಾದಾದ್ಯಂತ ಸಂಘರ್ಷ ತೀವ್ರಗೊಂಡಾಗಲೂ ಮೊಜ್ತಬಾ ಸಾರ್ವಜನಿಕರೆದುರು ಬಂದಿಲ್ಲ. ಟಿವಿಯಲ್ಲಾಗಲೀ, ಚಿತ್ರೀಕರಿಸಿದ ಯಾವುದೇ ವಿಡಿಯೊದಲ್ಲಾಗಲೀ ಕಾಣಿಸಿಕೊಂಡಿಲ್ಲ.
ಅವರ ಸಂದೇಶಗಳನ್ನು ಟಿವಿ ನಿರೂಪಕರೇ ಓದಿದ್ದಾರೆ ಅಥವಾ ಅಧಿಕೃತ ಮಾಧ್ಯಮಗಳ ಮೂಲಕ ಪ್ರಕಟಿಸಲಾಗಿದೆ.
ಇರಾನ್ ಸರ್ವೋಚ್ಚ ನಾಯಕ ಖಮೇನಿ ಎಲ್ಲಿದ್ದಾರೆ? ದಾಳಿಯಿಂದ ಪಾರಾದದ್ದು ಹೇಗೆ?ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿಆರೋಗ್ಯ ಕುರಿತ ಕಳವಳ ಇದ್ದೇ ಇದೆ!
ಮೊಜ್ತಬಾ ಅವರು ಮಾನಸಿಕವಾಗಿ ಸದೃಢವಾಗಿದ್ದಾರೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತೊಡಗಿದ್ದಾರೆ ಎಂಬುದಾಗಿ ಪದೇ ಪದೇ ಅಧಿಕೃತ ಹೇಳಿಕೆಗಳು ಪ್ರಕಟವಾಗುತ್ತಿವೆಯಾದರೂ, ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯ ಬಗ್ಗೆ ಕಳವಳ ಇದ್ದೇ ಇದೆ. ದೀರ್ಘಾವಧಿಯಿಂದ ಅವರು ಎಲ್ಲೂ ಕಾಣಿಸಿಕೊಳ್ಳದಿರುವುದೇ ಇದಕ್ಕೆ ಕಾರಣ.
ಭದ್ರತೆಯ ಕಾರಣದಿಂದಾಗಿ ಗೋಪ್ಯವಾಗಿ ಉಳಿದಿದ್ದಾರೆ ಎಂದು ಕೆಲವರು ವಾದಿಸಿದರೆ, ಇನ್ನೂ ಹಲವರು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮೊಜ್ತಬಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ದೇಶದ ಜನರಲ್ಲಿ ಭರವಸೆ ಮೂಡಿಸಲು ಮತ್ತು ಆಡಳಿತದಲ್ಲಿ ಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ ಅತ್ಯಗತ್ಯವಾಗಿದೆ. ಒಂದುವೇಳೆ ಅವರು ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲೂ ಕಾಣಿಸಿಕೊಳ್ಳದಿದ್ದರೆ ಪ್ರಶ್ನೆಗಳು ಹಾಗೆಯೇ ಮುಂದುವರಿಯಲಿವೆ.
ಈ ಎಲ್ಲ ಕಾರಣಗಳಿಂದಾಗಿ ಅಲಿ ಖಮೇನಿ ಅಂತ್ಯಕ್ರಿಯೆಯತ್ತ ದೇಶ ಹಾಗೂ ಅಂತರರಾಷ್ಟ್ರೀಯ ಸಮುದಾಯದ ಚಿತ್ತ ನೆಟ್ಟಿದೆ.
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?
