ನವದೆಹಲಿ: ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ರಘುವಂಶಿಗೆ ಮಂಜೂರಾಗಿರುವ ಜಾಮೀನಿಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರನ್ನೊಳಗೊಂಡ ಪೀಠವು ಹೈಕೋರ್ಟ್ ಆದೇಶದ ಬಗ್ಗೆ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿತಾದರೂ, ತಡೆ ನೀಡಲು ಒಪ್ಪಲಿಲ್ಲ. ಆರೋಪಿ ಸೋನಮ್ ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿದ್ದು, ವಿಚಾರಣಾ ನ್ಯಾಯಾಲಯ ವಿಧಿಸಿರುವ ಷರತ್ತುಗಳ ಅನ್ವಯ ಶಿಲ್ಲಾಂಗ್‌ನಲ್ಲೇ ಇರುವುದರಿಂದ ತಡೆ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆಂಥ್ರೋಪಿಕ್‌ನ ಫೇಬಲ್ 5, ಮಿಥೋಸ್ 5 ಎಐ ಮಾದರಿಗಳ ಮೇಲಿನ ಅಮೆರಿಕ ನಿರ್ಬಂಧ ರದ್ದು ಜನ ನಾಯಗನ್ ಸಿನಿಮಾ ಬಿಡುಗಡೆಗೂ ಮುನ್ನವೇ 1.2 ಕೋಟಿ ವೀಕ್ಷಣೆ: ಆಘಾತಕಾರಿ ಅಂಶ ಬಯಲುರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋನಮ್ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
'ಆರೋಪಿತ ಮಹಿಳೆಯ ಮೇಲಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಕೇವಲ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ' ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.
ಮೆಹ್ತಾ ಅವರು ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿದರಾದರೂ, ಸುಪ್ರೀಂ ಕೋರ್ಟ್ ಪೀಠವು ಈ ಮನವಿಯನ್ನು ನಿರಾಕರಿಸಿತು. ನ್ಯಾಯಾಲಯವು ಪುನರಾರಂಭಗೊಂಡ ನಂತರ ಈ ವಿಷಯದ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...ನಾಯಕನಹಟ್ಟಿ: CCTV ಕಣ್ಗಾವಲು ವ್ಯವಸ್ಥೆ ದುರ್ಬಲ, ನಿರ್ವಹಣೆ ಹೊಣೆ ಯಾರದ್ದು?ಘಟನೆ ವಿವರ
ಪೊಲೀಸರ ಮಾಹಿತಿ ಪ್ರಕಾರ, ರಘುವಂಶಿ ಹಾಗೂ ಸೋನಮ್ 2025ರ ಮೇ 1ರಂದು ವಿವಾಹವಾಗಿದ್ದರು. ಮೇಘಾಲಯದ ಸೋಹ್ರಾಗೆ ಮಧುಚಂದ್ರಕ್ಕಾಗಿ ಮೇ 21ರಂದು ತೆರಳಿದ್ದರು. ದಂಪತಿ ನಾಪತ್ತೆಯಾಗಿದ್ದಾರೆ ಎಂಬುದು ಮೇ 26ರಂದು ವರದಿಯಾಗಿತ್ತು. ಇದರ ಬೆನ್ನಲ್ಲೇ, ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು, ವಿಶೇಷ ಕಾರ್ಯಾಚರಣೆ ತಂಡ, ಸ್ಥಳೀಯರ ಸಹಯೋಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು. ರಘುವಂಶಿ ಅವರ ಶವ ಶಿಲ್ಲಾಂಗ್ ಸಮೀಪದ ಜಲಪಾತದ ಕಮರಿಯಲ್ಲಿ ಜೂನ್ 2ರಂದು ಸಿಕ್ಕಿತ್ತು.
ರಘುವಂಶಿ ಪತ್ನಿ ಸೋನಮ್‌ಗೆ ರಾಜ್ ಕುಶ್ವಾಹ ಎಂಬಾತನೊಂದಿಗೆ ಸಂಬಂಧವಿತ್ತು. ಇದೇ ಕಾರಣಕ್ಕಾಗಿ ಅವರಿಬ್ಬರೂ ಸೇರಿ, ರಘುವಂಶಿ ಅವರನ್ನು ಮಧುಚಂದ್ರದ ವೇಳೆ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬುದು ತನಿಖಾಧಿಕಾರಿಗಳಿಗೆ ಗೊತ್ತಾಗಿತ್ತು.
ರಘುವಂಶಿಯನ್ನು ಕಮರಿಯಲ್ಲಿ ಸೋನಮ್ ಸಮ್ಮುಖದಲ್ಲೇ ಮೂವರು ಹಂತಕರಾದ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

