Dailyhunt Logo
  • Light mode
    Follow system
    Dark mode
    • Play Story
    • App Story
ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಮೇಲೆ ತೀವ್ರ ದಾಳಿ: ಟ್ರಂಪ್ ಎಚ್ಚರಿಕೆ

ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್ ಮೇಲೆ ತೀವ್ರ ದಾಳಿ: ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: 'ಹೊರ್ಮುಜ್ ಜಲಸಂಧಿಯನ್ನು ಇರಾನ್ ಆದಷ್ಟು ಬೇಗನೇ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಆ ದೇಶದ ಮೇಲೆ ತೀವ್ರ ದಾಳಿ ನಡೆಸಲಾಗುವುದು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಎಚ್ಚರಿಸಿದ್ದಾರೆ.

'ಫಾಕ್ಸ್ ನ್ಯೂಸ್'ಗೆ ಪ್ರತಿಕ್ರಿಯೆ ನೀಡಿರುವ ಅವರು, ಹೊರ್ಮುಜ್‌ ಜಲಸಂಧಿ ತೆರವುಗೊಳಿಸುವ ಕುರಿತು ರಾಜತಾಂತ್ರಿಕ ಮಾತುಕತೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.

'ಹೊರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತಗೊಳ್ಳಲಿದೆ. ಇಲ್ಲದಿದ್ದರೆ ತೀವ್ರ ದಾಳಿ ನಡೆಸಲಿದ್ದೇವೆ. ಅದಾದ ಬಳಿಕವಾದರೂ ಜಲಸಂಧಿ ಮುಕ್ತವಾಗಲಿದೆ' ಎಂದು ಕ್ಯಾಲಿಫೋರ್ನಿಯಾ ಪ್ರವಾಸದಲ್ಲಿದ್ದ ಟ್ರಂಪ್ ಹೇಳಿದ್ದಾರೆ.

'ಮುಂದೆ ಏನಾಗಲಿದೆ ಎಂದು ಕಾದು ನೋಡೋಣ. ನನ್ನ ಬಳಿ ಸಾಕಷ್ಟು ಸಮಯ ಇದೆ' ಎಂದು ಟ್ರಂಪ್ ತಿಳಿಸಿದ್ದಾರೆ.

ಈ ನಡುವೆ ಅಮೆರಿಕ, ಇರಾನ್ ಮತ್ತು ಒಮಾನ್ ನಡುವೆ ಮಧ್ಯಂತರ ಒಪ್ಪಂದವೊಂದು ಅಂತಿಮ ಹಂತ ತಲುಪಿದ್ದು, ಬುಧವಾರ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು 'ಆಕ್ಸಿಯೋಸ್' ವರದಿ ಮಾಡಿದೆ.

ಇತ್ತೀಚೆಗಷ್ಟೇ ಪಶ್ಚಿಮ ಏಷ್ಯಾದಲ್ಲಿನ ತನ್ನ ಮಿತ್ರ ರಾಷ್ಟ್ರಗಳು ಮತ್ತು ಸ್ವತಃ ಇರಾನ್ ಮನವಿಯ ಮೇರೆಗೆ ಇರಾನ್ ಮೇಲಿನ ಬೃಹತ್ ಮಟ್ಟದ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ಟ್ರಂಪ್ ಹೇಳಿದ್ದರು. ಆದರೆ ಅಮೆರಿಕ ಜೊತೆಗಿನ ಮಾತುಕತೆಯನ್ನು ಇರಾನ್ ತಳ್ಳಿ ಹಾಕಿತ್ತು.

ಟ್ರಂಪ್ ಗಾಲ್ಫ್ ಕೋರ್ಸ್ ಹೊರಭಾಗದಲ್ಲಿ ಬಂದೂಕುಧಾರಿ ವ್ಯಕ್ತಿ ಬಂಧನಇರಾನ್ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ: ಟ್ರಂಪ್ ಘೋಷಣೆ
Dailyhunt
Disclaimer: This content has not been generated, created or edited by Dailyhunt. Publisher: Prajavani