ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಹೊರ್ಮುಜ್ ಮುಕ್ತ, ಯುರೇನಿಯಂ ಒಪ್ಪಿಸುವುದು: ಇರಾನ್-ಅಮೆರಿಕ 60 ದಿನಗಳ ಕದನ ವಿರಾಮ?
ಒಂದು ಸಾಲಿನಲ್ಲಿಅಮೆರಿಕ ಮತ್ತು ಇರಾನ್ ನಡುವೆ 60 ದಿನಗಳ ಕದನ ವಿರಾಮಕ್ಕಾಗಿ ಒಪ್ಪಂದದ ಮಾತುಕತೆ ನಡೆಯುತ್ತಿದ್ದು, ಇದು ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವ ಮತ್ತು ಯುರೇನಿಯಂ ಹಸ್ತಾಂತರದ ಗುರಿ ಹೊಂದಿದೆ.
ಪ್ರಮುಖ ಸಂಗತಿಗಳು• ಕದನ ವಿರಾಮದ ಮಾತುಕತೆ ಪ್ರಗತಿಅಮೆರಿಕ ಮತ್ತು ಇರಾನ್ ನಡುವೆ 60 ದಿನಗಳ ಕದನ ವಿರಾಮ ಜಾರಿಗೆ ತರಲು ಒಪ್ಪಂದದ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಅಮೆರಿಕದ ಮೂಲಗಳು ತಿಳಿಸಿವೆ.• ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವಿಕೆಈ ಹೊಸ ಒಪ್ಪಂದದ ಭಾಗವಾಗಿ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗುವುದು, ಇದರಿಂದ ಇರಾನ್ ತನ್ನ ತೈಲವನ್ನು ಅಡೆತಡೆಯಿಲ್ಲದೆ ಮಾರಾಟ ಮಾಡಲು ಅನುಕೂಲವಾಗಲಿದೆ.• ಪರಮಾಣು ಕಾರ್ಯಕ್ರಮ ಮತ್ತು ಯುರೇನಿಯಂಇರಾನ್ ತನ್ನ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಅಮೆರಿಕಕ್ಕೆ ಒಪ್ಪಿಸುವುದು ಮತ್ತು ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವುದು ಒಪ್ಪಂದದ ಪ್ರಮುಖ ಅಂಶಗಳಲ್ಲಿ ಸೇರಿವೆ.• ಅಧಿಕೃತ ಹೇಳಿಕೆಗಳಲ್ಲಿನ ಭಿನ್ನತೆಒಪ್ಪಂದದ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಸಕಾರಾತ್ಮಕವಾಗಿ ಮಾತನಾಡಿದ್ದರೆ, ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಈ ವರದಿಗಳನ್ನು ಅಲ್ಲಗಳೆದು ಒಪ್ಪಂದದ ಅಂಶಗಳನ್ನು ಪ್ರಶ್ನಿಸಿದೆ.• ಮುಂದಿನ ಹಂತದ ಚರ್ಚೆಗಳುಒಪ್ಪಂದದ ಅಂತಿಮ ವಿವರಗಳು ಮತ್ತು ಯುರೇನಿಯಂ ದಾಸ್ತಾನು ಹಸ್ತಾಂತರದ ಕಾರ್ಯವಿಧಾನವನ್ನು ಮುಂದಿನ ಸುತ್ತಿನ ಮಾತುಕತೆಯಲ್ಲಿ ನಿರ್ಧರಿಸಲಾಗುವುದು.ಪ್ರಮುಖ ಅಂಕಿಅಂಶಗಳು60 ದಿನಗಳುಕದನ ವಿರಾಮ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮ 60 ದಿನಗಳು ವಿಸ್ತರಿಸಲು ಒಪ್ಪಂದ ನಡೆಯುತ್ತಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ 'ಆಕ್ಸಿಯೋಸ್' ಶನಿವಾರ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷರ ನಿವಾಸದ ಬಳಿ ಶೂಟೌಟ್: ದಾಳಿಕೋರನ ಹತ್ಯೆ, ಏನಿದು ಘಟನೆ?ಈ ಅವಧಿಯಲ್ಲಿ ಹೊರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸಲಾಗುತ್ತದೆ, ಇರಾನ್ ಮುಕ್ತವಾಗಿ ತೈಲ ಮಾರಾಟ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಕುರಿತು ಮಾತುಕತೆಗಳು ನಡೆಯಲಿವೆ ಎಂದು ವರದಿ ಹೇಳಿದೆ.
ಇರಾನ್ ಜೊತೆಗಿನ ಮಾತುಕತೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ಹೊರ್ಮುಜ್ ಜಲಸಂಧಿ ಮುಕ್ತವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದರು. ಆದರೆ ಇದನ್ನು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಅಲ್ಲಗಳೆದಿತ್ತು.
ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಏರುಪೇರು ಮಾಡಿದ್ದ ಹೊರ್ಮುಜ್ ಜಲಸಂಧಿಯನ್ನು, ಈ ಹೊಸ ಒಪ್ಪಂದವು ಪುನಃ ಮುಕ್ತಗೊಳಿಸಲಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಒಪ್ಪಂದದಲ್ಲಿ ಬೇರೆ ಏನೆಲ್ಲಾ ಸೇರಿದೆ ಎಂಬುದನ್ನು ಅವರು ತಿಳಿಸಿಲ್ಲ.
Explainer: ಅಮೆರಿಕ-ಇರಾನ್ ಯುದ್ಧ ತಡೆಯಲು ಮತ್ತೊಮ್ಮೆ ಮುಂದಾಯಿತೇ ಪಾಕಿಸ್ತಾನ?'ಒಪ್ಪಂದದ ಅಂತಿಮ ಅಂಶಗಳು, ವಿವರಗಳ ಕುರಿತು ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ಟ್ರುತ್ ಸೋಶಿಯಲ್‌ನಲ್ಲಿ ಟ್ರಂಪ್ ಬರೆದಿದ್ದಾರೆ.
ಆದರೆ, ಈ ಒಪ್ಪಂದವು ಜಲಸಂಧಿಯನ್ನು ನಿರ್ವಹಿಸಲು ಇರಾನ್‌ಗೆ ಅವಕಾಶ ನೀಡುತ್ತದೆ, ಜಲಸಂಧಿಯ ಕುರಿತಾದ ಟ್ರಂಪ್ ಅವರ ಹೇಳಿಕೆಯು 'ವಾಸ್ತವಕ್ಕೆ ದೂರವಾಗಿದೆ' ಎಂದು ಫಾರ್ಸ್ ಭಾನುವಾರ ಮುಂಜಾನೆ ವರದಿ ಮಾಡಿದೆ.
ಸಮೃದ್ಧೀಕರಿಸಿದ ಯುರೇನಿಯಂನ್ನು ಒಪ್ಪಿಸುವುದೂ ಕೂಡ ಈ ಒಪ್ಪಂದದಲ್ಲಿ ಸೇರಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ. ಆ ದಾಸ್ತಾನನ್ನು ಹೇಗೆ ಹಸ್ತಾಂತರಿಸಬೇಕು ಎಂಬುದರ ವಿವರಗಳನ್ನು ಮುಂದಿನ ಸುತ್ತಿನ ಮಾತುಕತೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಪತ್ರಿಕೆ ಉಲ್ಲೇಖಿಸಿದೆ.
ಇರಾನ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಗಂಭೀರ ಚಿಂತನೆ: ವರದಿ
