Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಮೇಲೆ 2ನೇ ಮಹಾಯುದ್ಧ ನಂತರದ ಭೀಕರ ದಾಳಿಗೆ ಸಜ್ಜಾಗಿದ್ದೆವು: ಟ್ರಂಪ್

ಇರಾನ್ ಮೇಲೆ 2ನೇ ಮಹಾಯುದ್ಧ ನಂತರದ ಭೀಕರ ದಾಳಿಗೆ ಸಜ್ಜಾಗಿದ್ದೆವು: ಟ್ರಂಪ್

ವಾಷಿಂಗ್ಟನ್‌: 'ಜನರನ್ನು ಕೊಲ್ಲಲ್ಲು ನನಗೆ ಇಷ್ಟವಿಲ್ಲ. ಹಾಗಾಗಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇನೆ. ಇರಾನ್ ಮೇಲೆ ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ದಾಳಿಗೆ ನಾವು ಸಜ್ಜಾಗಿದ್ದೆವು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದೆವು. ಆದರೆ ಅವರು (ಇರಾನ್‌) ಕರೆ ಮಾಡಿ ದಯವಿಟ್ಟು ದಾಳಿ ನಡೆಸಬೇಡಿ, ನಾವು ಮಾತುಕತೆ ನಡೆಸೋಣ ಎಂದು ಮನವಿ ಮಾಡಿದ್ದರು. ಅದಾದ ಬಳಿಕ ಹಾಗೇ ಹೇಳಿಲ್ಲ ಎಂದು ಮಾತು ಬದಲಿಸಿದರು. ಯಾವುದೇ ಕಾರಣಕ್ಕೂ ಇರಾನ್ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

ವೆನೆಜುವೆಲಾದಲ್ಲಿ ಮಾಡಿದ್ದನ್ನೇ ಮಾಡುತ್ತೇವೆ: ಟ್ರಂಪ್‌

ವೆನೆಜುವೆಲಾದಲ್ಲಿ ನಾವು ಅನುಸರಿಸಿದ ಅದೇ ಕ್ರಮಗಳನ್ನೇ ಇರಾನ್ ವಿಚಾರದಲ್ಲೂ ಮುಂದುವರಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಮಿಲಿಟರಿ ಕಾರ್ಯಾಚರಣೆ ಮೂಲಕ ಆ ದೇಶವನ್ನು ದುರ್ಬಲಗೊಳಿಸಲಾಗಿದೆ. ವೆನೆಜುವೆಲಾದಲ್ಲಿ ನಡೆದದ್ದು ಕೇವಲ 48 ನಿಮಿಷಗಳ ಯುದ್ಧವಾಗಿತ್ತು. ನಾವು ಅಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದೇವೆ. ಇರಾನ್ ವಿಚಾರದಲ್ಲೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಜನರ ಪ್ರಾಣಹಾನಿ ತಪ್ಪಿಸಲು ಒಪ್ಪಂದ ಮಾಡಿಕೊಳ್ಳಲು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani