ಇವಿಯಾನ್: 'ಇದು ಅಂತಿಮ ಶಾಂತಿ ಒಪ್ಪಂದವಲ್ಲ. ಇದು ನನಗೆ ಇಷ್ಟವಾಗಲಿಲ್ಲ ಎಂದಾದರೆ, ನಾನು ಇರಾನ್ ಮೇಲೆ ಮತ್ತೊಮ್ಮೆ ಯುದ್ಧ ಆರಂಭಿಸುತ್ತೇನೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ವೇಳೆ ಟ್ರಂಪ್, ಇರಾನ್‌ಗೆ ಈ ಎಚ್ಚರಿಕೆ ನೀಡಿದರು.
ಯುದ್ಧ ಅಂತ್ಯಗೊಳಿಸುವ ಸಂಬಂಧ ಒಪ್ಪಂದಕ್ಕೆ ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ಶುಕ್ರವಾರ ಸಹಿ ಹಾಕಲಿವೆ. ಇದಕ್ಕೆ ಎರಡು ದಿನ ಇರುವಾಗಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
'ಅವರು ಸರಿಯಾಗಿ ನಡೆದುಕೊಳ್ಳಬೇಕು. ಇಲ್ಲಿವಾದರೆ, ಅವರ ಮಧ್ಯ ತಲೆಗೆ ಗುರಿಯಿಟ್ಟು ಬಾಂಬ್ ಹಾಕುತ್ತೇನೆ. ಯಾಕೆಂದರೆ, ಅವರು 47 ವರ್ಷಗಳಿಂದಲೂ ಸರಿಯಾಗಿ ವರ್ತಿಸುತ್ತಿಲ್ಲ. ನಾವು ಬಹಳ ಶಕ್ತಿಯುತವಾದ ಒಪ್ಪಂದ ಮಾಡಿಕೊಂಡಿದ್ದೇವೆ. ಯಾರಿಗೂ ಇದರ ಬಗ್ಗೆ ಮಾಹಿತಿ ಇಲ್ಲ. ಇದು ಬಹಿರಂಗಗೊಂಡರೆ, ಎಲ್ಲರೂ ಖುಷಿ ಪಡುತ್ತಾರೆ. ಮಾರುಕಟ್ಟೆಗೆ ಈ ಒಪ್ಪಂದವು ವರದಾನವಾಗಲಿದೆ' ಎಂದು
ಹೇಳಿದರು.

