Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಮೇಲಿನ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಅಮೆರಿಕ

ಇರಾನ್ ಮೇಲಿನ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದ ಅಮೆರಿಕ

ವಾಷಿಂಗ್ಟನ್: ಇರಾನ್ ಮೇಲೆ ವಿಧಿಸಿದ್ದ ತೈಲ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ ತೆರವುಗೊಳಿಸಿದೆ ಎಂದು 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಶಾಂತಿ ಒಪ್ಪಂದದ ಮಾತುಕತೆ 'ಫಲಪ್ರದ'ವಾಗಿದೆ ಎಂದು ಅಮೆರಿಕ ಹೇಳಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಸಕಾರಾತ್ಮಕ ಹಾಗೂ ರಚನಾತ್ಮಕ ಮಾತುಕತೆಯ ಭಾಗವಾಗಿ ಇರಾನ್‌ನಿಂದ ತೈಲವನ್ನು ಅಮೆರಿಕದ ಡಾಲರ್‌ಗಳಲ್ಲಿ ಖರೀದಿಸಲು ಅಧಿಕಾರ ನೀಡುವ 60 ದಿನಗಳ ನಿರ್ಬಂಧಗಳ ವಿನಾಯಿತಿ ನೀಡಲಾಗಿದೆ ಎಂದು ಖಜಾಂಚಿ ಕಾರ್ಯದರ್ಶಿ ಸ್ಕಾರ್ಟ್ ಬೆಸೆಂಟ್ ಹೇಳಿದ್ದಾರೆ.

ಇರಾನ್‌ನಲ್ಲಿನ ಪರಮಾಣು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲು ಟೆಹರಾನ್ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕದ ಅಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಇದು ಇರಾನ್‌ನಲ್ಲಿ ಅಣ್ವಸ್ತ್ರ ಹೊಂದುವ ಸಾಮರ್ಥ್ಯವನ್ನು ಶಾಶ್ವತವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದಿದ್ದಾರೆ.

ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಅಣ್ವಸ್ತ್ರ ಪ್ರಾಮಾಣಿಕತೆ' ಕಾಪಾಡಿಕೊಳ್ಳಲು ತನ್ನ ಶಸ್ತ್ರಾಸ್ತ್ರ ತಪಾಸಣೆ ನಡೆಸಲು ಇರಾನ್ ಸಮ್ಮತಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ' ಎಂದು ಹೇಳಿದ್ದಾರೆ.

ಹಾಗಿದ್ದರೂ ಪರಮಾಣು ನಿರೀಕ್ಷಕರು ಇರಾನ್‌ಗೆ ತೆರಳುತ್ತಾರೆಯೇ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.

ನಾನು ಮಾಡಬೇಕಾದುದ್ದನ್ನು ಮಾಡಿಯೇ ತಿರುತ್ತೇನೆ: ಡೊನಾಲ್ಡ್ ಟ್ರಂಪ್ಇರಾನ್ ಅಣ್ವಸ್ತ್ರ ಬೆದರಿಕೆ ಎದುರಿಸಲು ಕೈಜೋಡಿಸದ ಮೆಲೊನಿ ವಿರುದ್ಧ ಟ್ರಂಪ್ ಕಿಡಿ
Dailyhunt
Disclaimer: This content has not been generated, created or edited by Dailyhunt. Publisher: Prajavani