Dailyhunt Logo
  • Light mode
    Follow system
    Dark mode
    • Play Story
    • App Story
ನಾನು ಮಾಡಬೇಕಾದುದ್ದನ್ನು ಮಾಡಿಯೇ ತಿರುತ್ತೇನೆ: ಡೊನಾಲ್ಡ್ ಟ್ರಂಪ್

ನಾನು ಮಾಡಬೇಕಾದುದ್ದನ್ನು ಮಾಡಿಯೇ ತಿರುತ್ತೇನೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದಕ್ಕೆ ಬದ್ಧವಾಗಿರಲು ಇರಾನ್ ವಿಫಲವಾದರೆ ಬೇಕಾದ ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಟ್ರಂಪ್, 'ಇರಾನ್ ತನ್ನ ಬದ್ಧತೆಗಳನ್ನು ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.

'ಒಪ್ಪಂದಕ್ಕೆ ತಕ್ಕಂತೆ ಇರಾನ್ ನಡೆದುಕೊಳ್ಳದಿದ್ದರೆ ಅಥವಾ ಸರಿಯಾಗಿ ವರ್ತಿಸದಿದ್ದರೆ ನಾನು ಮಾಡಬೇಕಾಗಿರುವುದನ್ನು ಮಾಡಿಯೇ ತಿರುತ್ತೇನೆ' ಎಂದು ಹೇಳಿದ್ದಾರೆ.

'ಟೆಹರಾನ್ ನಿರಂತರ ಸಹಕಾರ ನೀಡಿದರೆ ಸ್ಥಿರತೆ ಉಂಟಾಗಲಿದೆ. ಅವರು ನಮಗೆ ಗೌರವ ನೀಡುವವರೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ' ಎಂದು ತಿಳಿಸಿದ್ದಾರೆ.

ಅಲ್ಲದೆ ಯಾವುದೇ ಹಂತದಲ್ಲಿ ಇರಾನ್ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಈ ನಡುವೆ ಇರಾನ್ ವಿರುದ್ಧದ ಮಿಲಿಟರಿ ಕ್ರಮದಿಂದ ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ವಾದವನ್ನು ಟ್ರಂಪ್ ತಳ್ಳಿ ಹಾಕಿದ್ದಾರೆ.

'ಇದರಿಂದ ಜಾಗತಿಕವಾಗಿ ಯಾವುದೇ ಆರ್ಥಿಕ ಹಿಂಜರಿತ ಉಂಟಾಗುವುದಿಲ್ಲ. ಆರ್ಥಿಕ ಹಿಂಜರಿತಕ್ಕಿಂತ ಅಣ್ವಸ್ತ್ರ ಪ್ರಸರಣವು ತೀವ್ರ ಅಪಾಯವನ್ನುಂಟು ಮಾಡಲಿದೆ' ಎಂದು ಹೇಳಿದ್ದಾರೆ.

ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಟ್ರುಥ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಅಣ್ವಸ್ತ್ರ ಪ್ರಾಮಾಣಿಕತೆ' ಕಾಪಾಡಿಕೊಳ್ಳಲು ತನ್ನ ಶಸ್ತ್ರಾಸ್ತ್ರ ತಪಾಸಣೆ ನಡೆಸಲು ಇರಾನ್ ಸಮ್ಮತಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ' ಎಂದು ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ ಶಾಂತಿ ಒಪ್ಪಂದಕ್ಕೆ ಮಾರ್ಗಸೂಚಿಯನ್ನು 60 ದಿನಗಳಲ್ಲಿ ಪೂರ್ಣಗೊಳಿಸಲು ಇರಾನ್ ಹಾಗೂ ಅಮೆರಿಕ ಸಮ್ಮತಿ ಸೂಚಿಸಿವೆ. ಅಲ್ಲದೆ ಮಾತುಕತೆಯು ಸಕಾರಾತ್ಮಕ ಹಾಗೂ ರಚನಾತ್ಮಕವಾಗಿ ನಡೆದಿದೆ ಎಂದು ಜಂಟಿ ಪ್ರಕಟಣೆ ತಿಳಿಸಿದೆ.

ಟ್ರಂಪ್-ಮೆಲೊನಿ ಮುನಿಸು: ಅಮೆರಿಕ-ಇಟಲಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟುಇರಾನ್ ಅಣ್ವಸ್ತ್ರ ಬೆದರಿಕೆ ಎದುರಿಸಲು ಕೈಜೋಡಿಸದ ಮೆಲೊನಿ ವಿರುದ್ಧ ಟ್ರಂಪ್ ಕಿಡಿ
Dailyhunt
Disclaimer: This content has not been generated, created or edited by Dailyhunt. Publisher: Prajavani