ವಾಷಿಂಗ್ಟನ್: ಇರಾನ್‌ನ ಪ್ರಮುಖ ತೈಲ ತಾಣವಾದ ಖರ್ಗ್ ದ್ವೀಪದ ಮೇಲೆ ಭಾರಿ ಪ್ರಮಾಣದ ಬಾಂಬ್ ದಾಳಿ ನಡೆಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇವೇಳೆ, ಅಮೆರಿಕ ನೌಕಾಪಡೆಯು ಶೀಘ್ರದಲ್ಲೇ ಹೊರ್ಮುಜ್ ದ್ವೀಪದ ಮೂಲಕ ಹಡಗುಗಳ ಸಂಚಾರಕ್ಕೆ ಬೆಂಗಾವಲಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ರ್‍ಯಾಲಿ ನಡೆದಿದ್ದು, ಹಲವು ಅಧಿಕಾರಿಗಳು ಭಾಗವಹಿಸಿದ್ದರು. 'ಡೆತ್ ಟು ಅಮೆರಿಕ' ಮತ್ತು 'ಡೆತ್ ಟು ಇಸ್ರೇಲ್' ಎಂಬ ಬ್ಯಾನರ್‌ಗಳನ್ನು ಅವರು ಪ್ರದರ್ಶಿಸಿದರು.
ಅಮೆರಿಕ ಬಾಂಬ್ ದಾಳಿ ಹೆಚ್ಚಿಸುತ್ತಿದ್ದಂತೆ ಇತ್ತ ಇರಾನ್ ಸಹ ಇಸ್ರೇಲ್ ಮತ್ತು ಗಲ್ಫ್ ದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ.
ಅತ್ತ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಯುದ್ಧವೂ ಮತ್ತಷ್ಟು ಭೀಕರಗೊಂಡಿದೆ. ದಕ್ಷಿಣ ಲೆಬನಾನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 12 ಮಂದಿ ಆರೋಗ್ಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಲೆಬನಾನ್ ವರದಿಗಳ ಪ್ರಕಾರ, ಈವರೆಗೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ 773 ಮಂದಿ ಮೃತಪಟ್ಟಿದ್ದಾರೆ.
'ಇರಾನ್‌ನ ಬಹುತೇಕ ಕಚ್ಚಾ ತೈಲ ರಫ್ತು ನಿರ್ವಹಿಸುವ ಖರ್ಗ್ ದ್ವೀಪದ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಗಳಲ್ಲಿ ಒಂದಾದ ಇದರಲ್ಲಿ ದ್ವೀಪದ ಕೆಲ ಮೂಲಸೌಕರ್ಯ ಸಂಪೂರ್ಣ ನಾಶವಾಗಿದೆ. ಸದ್ಯ, ದ್ವೀಪದಲ್ಲಿನ ತೈಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಆದರೆ, ಇರಾನ್ ಅಥವಾ ಬೇರೆ ಯಾರಾದರೂ ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಾಗಣೆಗೆ ಅಡ್ಡಿಪಡಿಸಿದರೆ ನಾನು ತಕ್ಷಣ ಈ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆ' ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ತಡೆಯಿಂದಾಗಿ ಜಾಗತಿಕ ತೈಲ ಸರಬರಾಜಿಗೆ ಅಡ್ಡಿಯುಂಟಾಗಿದ್ದು, ತೈಲ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆಯು ಕೊಲ್ಲಿಯ ನಿರ್ಣಾಯಕ ಹೊರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳಿಗೆ ಬೆಂಗಾವಲು ನೀಡಲು ಮುಂದಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಇದು ಶೀಘ್ರದಲ್ಲೇ ಆಗಲಿದೆ ಎಂದಿದ್ದಾರೆ.
ಹಡಗುಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ಮತ್ತು ಸ್ಫೋಟಗಳನ್ನು ಹುದುಗಿಸುವ ಇರಾನ್ ಉಪಟಳದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ಸಮುದ್ರ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ತೈಲ ಟ್ಯಾಂಕರ್‌ಗಳು ಮತ್ತು ಸರಕು ಸಾಗಣೆ ಹಡಗುಗಳ ಹಲವು ದಿನಗಳಿಂದ ಒಮಾನ್ ಬದಿಯ ಸಮುದ್ರದಲ್ಲೇ ನಿಂತಿವೆ ಎಂದು ವರದಿ ತಿಳಿಸಿದೆ.
ಇರಾನ್ ಶರಣಾಗುವ ಹಂತದಲ್ಲಿದೆ: ಜಿ7 ಸಭೆಯಲ್ಲಿ ಡೊನಾಲ್ಡ್ ಟ್ರಂಪ್ತೈಲ ಮತ್ತು ಇತರ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಗಲ್ಫ್ ಮೇಲೆ ಇರಾನ್ ದಾಳಿ
