ಚೆನ್ನೈ: ಜೋಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಬಾರದು ಎಂದು ತಡೆಯುವ ಪ್ರಯತ್ನಗಳೆಲ್ಲಾ ವಿಫಲವಾಗಿದ್ದಕ್ಕೆ, ಹತಾಶೆಯಿಂದ ಡಿಎಂಕೆ ನಾಟಕ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಡೆದ ಡಿಎಂಕೆ ಯುವ ಘಟಕದ ಸಭೆಯಲ್ಲಿ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಅಂಗೀಕರಿಸಲಾದ ನಿರ್ಣಯದ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
'ಡಿಎಂಕೆ ಯುವ ಘಟಕವು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸುತ್ತಿದೆ ಏಕೆಂದರೆ ಅವರ ಯೋಜನೆ ವಿಫಲವಾಗಿದೆ. ಬಿಜೆಪಿ ಬಯಸಿದಂತೆ ವಿಜಯ್ ಮುಖ್ಯಮಂತ್ರಿಯಾಗುವುದನ್ನು ತಡೆಯುವುದು ಅವರ ಯೋಜನೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ' ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಎಡಪಕ್ಷಗಳು, ವಿಸಿಕೆ ಮತ್ತು ಐಯುಎಂಎಲ್ ನಾಯಕರು ಸಹ ಡಿಎಂಕೆಯ ಹಿಂಬಾಗಿಲಿನ ರಾಜಕೀಯ ವ್ಯವಹಾರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವೆ: ಸಿಎಂ ವಿಜಯ್ಜಾತ್ಯತೀತ ಮುಖವಾಡ ಧರಿಸಿಕೊಂಡು ದ್ರಾವಿಡ ಪಕ್ಷವು ಕೇಸರಿ ಪಕ್ಷದೊಂದಿಗೆ ರಹಸ್ಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
'ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ರಹಸ್ಯ ಮಾತುಕತೆಗಳು ಫಲಿತಾಂಶಗಳು ಬರುತ್ತಿರುವಾಗಲೇ ಪ್ರಾರಂಭವಾಗಿದ್ದವು. ಬಿಜೆಪಿಯ ಹಿರಿಯ ನಾಯಕರೊಬ್ಬರು ಇದಕ್ಕೆ ನೆರವಾಗಿದ್ದರು. ಈಗ ಅದು ನಿಧಾನವಾಗಿ ಬಹಿರಂಗಗೊಳ್ಳುತ್ತಿದೆ' ಎಂದು ಹೇಳಿದ್ದಾರೆ.
ಅಧಿಕಾರಕ್ಕೇರಿದ 12 ದಿನಕ್ಕೆ 6 IPS ಅಧಿಕಾರಿಗಳ ವರ್ಗಾವಣೆ ಮಾಡಿದ ವಿಜಯ್ ಸರ್ಕಾರ
