ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ ಹಲವು ಕಡೆಗಳಲ್ಲಿ ಮಳೆಯಾಗಿದೆ. ಅದರಲ್ಲೂ ಕರಾವಳಿ, ಮಲೆನಾಡು ಜಿಲ್ಲೆಗಳ ಜತೆಗೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾದ ವರದಿಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಬಿಡುಗಡೆ ಮಾಡಿರುವ ಮಳೆ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಅತ್ಯಧಿಕ 153 ಮಿ.ಮೀ ಮಳೆ ಸುರಿದಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಮಾಡಮಕ್ಕಿಯಲ್ಲಿ 119.5 ಮಿ,ಮೀ, ಹಲ್ಲಿಕೊಳೆಯಲ್ಲಿ 109.5 ಮಿ.ಮೀ, ಬೈಂದೂರು ತಾಲ್ಲೂಕಿನ ಕೇರ್ಗಾಲುವಿನಲ್ಲಿ 106 ಮಿ.ಮೀ, ಹೆಬ್ರಿಯಲ್ಲಿ 102 ಮಿ.ಮೀ ಮಳೆಯಾಗಿದೆ,
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ವಜ್ರಮಟ್ಟಿಯಲ್ಲಿ 100 ಮಿಮೀ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸಾಣೂರಿನಲ್ಲಿ 98.5 ಮಿ.ಮೀ, ನಿಟ್ಟೆಯಲ್ಲಿ 96 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯಲ್ಲಿ 95 ಮಿ.ಮೀ. ಕಾರ್ಕಳ ತಾಲ್ಲೂಕಿನ ನೀರೆಯಲ್ಲಿ 93.5 ಮಿ.ಮೀ, ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ 93 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೆತಾಳುವಿನಲ್ಲಿ 92.5 ಮಿ.ಮೀ ಮಳೆಯಾಗಿದೆ.
ಕಾರ್ಕಳ ತಾಲ್ಲೂಕಿನ ಬೆಜಗೋಳಿಯಲ್ಲಿ 91.5 ಮಿ.ಮೀ, ನಡಪಾಲುವಿನಲ್ಲಿ 89.5 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಸೀತೂರು, ಶೃಂಗೇರಿ ತಾಲ್ಲೂಕಿನ ಬೇಗಾರಿನಲ್ಲಿ ತಲಾ 85.5 ಮಿ,ಮೀ, ದಕ್ಷಿಣ ಕನ್ನಡದ ಬೆಳುವಾಯಿಯಲ್ಲಿ 84.5 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಬಿದರಗೂಡು, ದಕ್ಷಿಣ ಕನ್ನಡದ ನೆಲ್ಲಿಕಾರುವಿನಲ್ಲಿ 83.5 ಮಿ.ಮೀ ಮಳೆಯಾಗಿದೆ.
ಯಾದಗಿರಿ ಜಿಲ್ಲೆ ಶೋರಾಪುರ ತಾಲ್ಲೂಕಿನ ಮಾಲಗತ್ತಿಯಲ್ಲಿ 64.5 ಮಿ.ಮೀ, ದೇವಿಕೆರದಲ್ಲಿ 60 ಮಿ.ಮೀ, ಯಕ್ತಾಪುರ ಹಾಗೂ ಅರಕೇರಾದಲ್ಲಿ 54.5 ಮಿ.ಮೀ, ರಾಯಚೂರು ಜಿಲ್ಲೆ ಜಂಬಲದಿನ್ನಿಯಲ್ಲಿ 55 ಮಿ.ಮೀ, ಬೀದರ್ ದಕ್ಷಿಣದಲ್ಲಿ 56.6 ಮಿ.ಮೀ, ಕೊಡಗು ಜಿಲ್ಲೆ ಮದೆಯಲ್ಲಿ 505. ಮಿ.ಮೀ, ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಬೇಕಿನಾಳದಲ್ಲಿ 50 ಮಿ.ಮೀ ಮಳೆಯಾಗಿದೆ.

