ಟೆಹರಾನ್: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಶುಕ್ರವಾರ ಅಂತಿಮ ನಮನವನ್ನು ಸಲ್ಲಿಸಿತು.
ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಖಮೇನಿ ಅವರ ಅಂತ್ಯಕ್ರಿಯೆ ವಿಧಿ ವಿಧಾನಗಳು ಶನಿವಾರದಿಂದ ಆರಂಭವಾಗಲಿದೆ.
ಅಲ್ಲದೆ ಅಂತಿಮ ಗೌರವವನ್ನು ಸಲ್ಲಿಸಲು ಜಗತ್ತಿನಾದ್ಯಂತ ಪ್ರಮುಖ ನಾಯಕರು ಇರಾನ್‌ಗೆ ಭೇಟಿ ನೀಡುತ್ತಿದ್ದಾರೆ. 30 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಇರಾನ್ ಕರೆ ನೀಡಿದೆ. ಇಸ್ಲಾಮ್ ಗಣರಾಜ್ಯದ ಇತಿಹಾಸದಲ್ಲಿ ದಾಖಲೆ ನಿರ್ಮಿಸಬೇಕು ಎಂದಿದೆ.
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಆರಂಭಿಸಿದಾಗ, ಮೊದಲ ದಿನವಾದ ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಅಲಿ ಖಮೇನಿ ಅವರ ಹತ್ಯೆಯಾಗಿತ್ತು. ಅವರಿಗೆ 86 ವರ್ಷವಾಗಿತ್ತು.
ಅಂತ್ಯಸಂಸ್ಕಾರದ ವಿಧಿವಿಧಾನಗಳು ಶನಿವಾರದಿಂದ ಸೋಮವಾರದವರೆಗೆ ನಡೆಯಲಿದ್ದು, ಮುಖ್ಯ ಕಾರ್ಯಕ್ರಮ ಟೆಹರಾನ್‌ನಲ್ಲಿ ನೆರವೇರಲಿದೆ. ಈ ವೇಳೆ, ಖಮೇನಿ ಅವರ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಉಪಸ್ಥಿತರಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

