ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅಲಿ ಖಮೇನಿ ಅಂತ್ಯಕ್ರಿಯೆ ಹೊತ್ತಲ್ಲಿ ಕಾಡುತ್ತಿದೆ ಜನದಟ್ಟಣೆಯ ಆತಂಕ!
ಒಂದು ಸಾಲಿನಲ್ಲಿಇರಾನ್‌ನ ಮಾಜಿ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಿದ್ಧತೆಗಳು ನಡೆಯುತ್ತಿದ್ದು, ಅಪಾರ ಜನದಟ್ಟಣೆಯ ಭೀತಿಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖ ಪ್ರಶ್ನೋತ್ತರ
ಖಮೇನಿ ಅವರ ಅಂತ್ಯಕ್ರಿಯೆ ಯಾವಾಗ ನಡೆಯಲಿದೆ?
ಅಯಾತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಜುಲೈ 4ರಂದು ಆರಂಭವಾಗಿ, ಜುಲೈ 9ರಂದು ಮಷಾದ್ ನಗರದಲ್ಲಿ ಮುಕ್ತಾಯಗೊಳ್ಳಲಿವೆ.
ಅಂತ್ಯಕ್ರಿಯೆ ತಡವಾಗಲು ಕಾರಣವೇನು?
ಅಮೆರಿಕ ಮತ್ತು ಇಸ್ರೇಲ್ ಪಡೆಗಳ ಆಕ್ರಮಣದ ಭೀತಿಯಿಂದಾಗಿ ಹಾಗೂ ಯುದ್ಧಭೂಮಿಯ ಸನ್ನಿವೇಶಗಳಿಂದಾಗಿ ಅಂತಿಮ ಸಂಸ್ಕಾರವನ್ನು ನಾಲ್ಕು ತಿಂಗಳ ಕಾಲ ಮುಂದೂಡಲಾಗಿತ್ತು.
ಜನದಟ್ಟಣೆ ನಿರ್ವಹಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?
ಸಂಭವನೀಯ ಕಾಲ್ತುಳಿತ ತಪ್ಪಿಸಲು ಹೆಲಿಕಾಪ್ಟರ್ ಕಣ್ಗಾವಲು ಬಳಸಲು ನಿರ್ಧರಿಸಲಾಗಿದೆ ಮತ್ತು ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತಿದೆ.
ಶವವನ್ನು ನಾಲ್ಕು ತಿಂಗಳ ಕಾಲ ಸಂರಕ್ಷಿಸಿದ್ದು ಹೇಗೆ?
ಧಾರ್ಮಿಕ ಮತ್ತು ಕಾನೂನು ಮಾನದಂಡಗಳ ಪ್ರಕಾರ, ಅಸಾಧಾರಣ ಸಂದರ್ಭಗಳಲ್ಲಿ ಕೋಲ್ಡ್ ಸ್ಟೋರೇಜ್ ಬಳಸಿ ಶವವನ್ನು ಸಂರಕ್ಷಿಸಲು ಶಿಯಾ ಕಾನೂನಿನಲ್ಲಿ ಅವಕಾಶವಿದೆ.
ಹಿಂದಿನ ಅಂತ್ಯಕ್ರಿಯೆಗಳಿಂದ ಕಲಿತ ಪಾಠಗಳೇನು?
1989ರಲ್ಲಿ ರುಹೊಲ್ಲಾ ಖಮೇನಿ ಮತ್ತು 2020ರಲ್ಲಿ ಖಾಸಿಂ ಸುಲೇಮಾನಿ ಅಂತ್ಯಕ್ರಿಯೆ ವೇಳೆ ಉಂಟಾದ ಭಾರಿ ಜನದಟ್ಟಣೆ ಮತ್ತು ಅವಘಡಗಳ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಪ್ರಮುಖ ಅಂಕಿಅಂಶಗಳು
2 ಕೋಟಿಗೂ ಹೆಚ್ಚುಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷಿತ ಜನರ ಸಂಖ್ಯೆ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ರಾಜಧಾನಿ ಟೆಹರಾನ್‌ನಲ್ಲಿ ಸಿದ್ಧತೆ ಆರಂಭವಾಗಿದೆ. ಅಂತ್ಯಕ್ರಿಯೆಯ ವಿಧಿ-ವಿಧಾನಗಳು ಇಂದಿನಿಂದ (ಜುಲೈ 4ರಂದು) ಆರಂಭವಾಗಲಿದ್ದು, ಜುಲೈ 9ರಂದು ಮಷಾದ್ ನಗರದಲ್ಲಿ ಮುಕ್ತಾಯಗೊಳ್ಳಲಿವೆ.
ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿ ವೇಳೆಯೇ ಖಮೇನಿ ಹತ್ಯೆಯಾಗಿದ್ದರು. ಅದಾಗಿ ನಾಲ್ಕು ತಿಂಗಳು ಕಳೆದರೂ ಅಂತ್ಯಕ್ರಿಯೆ ನಡೆದಿಲ್ಲ. ಅಮೆರಿಕ, ಇಸ್ರೇಲ್ ದಾಳಿ ನಡೆಸಬಹುದು ಎಂಬ ಆತಂಕದಿಂದಾಗಿ, ಅಂತಿಮ ಸಂಸ್ಕಾರವನ್ನು ಮುಂದೂಡಲಾಗಿತ್ತು.
ಸದ್ಯ, ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ - ಇರಾನ್ ಮಾತುಕತೆ ನಡೆಸುತ್ತಿರುವುದರಿಂದ, ಖಮೇನಿ ಅಂತಿಮ ವಿಧಿ-ವಿಧಾನಕ್ಕೆ ಸಿದ್ಧತೆ ನಡೆಯುತ್ತಿದೆ. ಆದಾಗ್ಯೂ, ಇರಾನ್ ಆಡಳಿತಕ್ಕೆ ಮತ್ತೊಂದು ಆತಂಕ ಕಾಡುತ್ತಿದೆ.
ಇರಾನ್ ಮತ್ತು ಇರಾಕ್‌ನಾದ್ಯಂತ ಐದು ದಿನಗಳವರೆಗೆ ವಿಧಿ-ವಿಧಾನ ಕಾರ್ಯಗಳು ನೆರವೇರಲಿವೆ. ರಾಜಧಾನಿಯಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಸುವ ಮುನ್ನ, ಮೂರು ದಿನಗಳ ಕಾಲ ಮೊಸಲ್ಲಾ ಪ್ರಾರ್ಥನಾ ಸಂಕೀರ್ಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ವರದಿಯಾಗಿದೆ.
ಖಮೇನಿ ಅವರ ಅಂತಿಮ ದರ್ಶನ ಪಡೆಯಲು ಸುಮಾರು 2 ಕೋಟಿಗೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿದೆ. ಇದು, ಕಾಲ್ತುಳಿತದ ಭೀತಿ ಹೆಚ್ಚಿಸಿದೆ.
ಹತ್ಯೆಯಾದ ಮೂರು ತಿಂಗಳ ನಂತರ ಇರಾನ್ ನಾಯಕ ಖಮೇನಿ ಶವಸಂಸ್ಕಾರಕ್ಕೆ ದಿನಾಂಕ ನಿಗದಿತಂದೆ ಅಯಾತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವರೇ ಮೊಜ್ತಬಾ?ವರದಿಗಳ ಪ್ರಕಾರ, ಖಮೇನಿ ಅವರ ಶವವನ್ನು ಇರಾಕ್‌ನಲ್ಲಿರುವ ಶಿಯಾ ಮುಸ್ಲಿಮರ ಪಾಲಿನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಾಲಾಗೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ, ಅವರ ತವರು ನಗರವಾದ ಮಷಾದ್‌ಗೆ ತಂದು ಸಮಾಧಿ ಮಾಡಲಾಗುತ್ತದೆ.
ಆದಾಗ್ಯೂ, ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಅಧಿಕಾರಿಗಳು ಈವರೆಗೆ ಬಹಿರಂಗಪಡಿಸಿಲ್ಲ. ಯುದ್ಧ ಆರಂಭವಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಪಾಲ್ಗೊಂಡರೆ, ಅವರೇ ಪ್ರಾರ್ಥನೆ ಮುನ್ನಡೆಸಲಿದ್ದಾರೆ ಎಂಬುದಾಗಿ ಕೆಲವು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮೊಜ್ತಬಾ ಪಾಲ್ಗೊಳ್ಳುವುದು ಅನುಮಾನ ಎಂಬ ಮಾತೂ ಕೇಳಿಬರುತ್ತಿದೆ.
ಭದ್ರತೆಗೆ ಆದ್ಯತೆ
ಅಂತ್ಯಕ್ರಿಯೆ ವೇಳೆ ಜನಸಮೂಹವನ್ನು ನಿಯಂತ್ರಿಸುವುದು ಮತ್ತು ಸೂಕ್ತ ಭದ್ರತೆ ವ್ಯವಸ್ಥೆ ಮಾಡುವುದು ಆದ್ಯತೆಯ ವಿಚಾರಗಳಾಗಿವೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಮೆರವಣಿಗೆ ವೇಳೆ ಜನಸಂದಣಿ ನಿರ್ವಹಿಸಲು ಮತ್ತು ಶವಪೆಟ್ಟಿಗೆಯ ರಕ್ಷಣೆಯನ್ನು ಖಾತ್ರಿಪಡಿಸಲು ಹೆಲಿಕಾಪ್ಟರ್ ಕಣ್ಗಾವಲು ನಿಯೋಜಿಸಬಹುದು ಎಂದು ರಜಾವಿ ಖೊರಾಸನ್ ಪ್ರಾಂತ್ಯದ ಗವರ್ನರ್ ಘೋಲಮ್ ಹೊಸೈನ್ ಮೊಝಫ್ಫಾರಿ ಹೇಳಿದ್ದಾರೆ. ಆದರೆ, ಈ ಕ್ರಮವು ಮಷಾದ್‌ಗೆ ಸೀಮಿತವಾಗಿರುತ್ತದೆಯೇ, ಕಾರ್ಯಕ್ರಮಗಳು ನಡೆಯುವ ಇನ್ನಷ್ಟು ನಗರಗಳಿಗೂ ವಿಸ್ತರಣೆಗೊಳ್ಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ದೇಶದ ಉನ್ನತ ನಾಯಕರ ಸುರಕ್ಷತೆ, ಶೋಕದಲ್ಲಿರುವ ಲಕ್ಷಾಂತರ ಮಂದಿಯನ್ನು ನಿರ್ವಹಿಸುವುದು ಹಾಗೆಯೇ, ಶವಪೆಟ್ಟಿಗೆಯನ್ನು ಎರಡು ದೇಶಗಳಲ್ಲಿ ಸಾಗಿಸುವುದು ಇಸ್ಲಾಮಿಕ್ ಗಣರಾಜ್ಯದ ಮಟ್ಟಿಗೆ ಅತಿದೊಡ್ಡ ಭದ್ರತಾ ಕಾರ್ಯಾಚರಣೆಗಳಲ್ಲಿ ಒಂದಾಗುವ ಸಾಧ್ಯತೆ ಇದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಗಡಿಯಾಚೆಗಿನ ಮೆರವಣಿಗೆಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಲುವಾಗಿ, ಇರಾಕ್ ರಾಜಧಾನಿ ಬಾಗ್ದಾದ್‌ಗೆ ಈ ವಾರದ ಆರಂಭದಲ್ಲಿ ಭೇಟಿ ನೀಡಿದ್ದರು.
ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...ತಂದೆ ಖಮೇನಿ ಅಂತ್ಯಕ್ರಿಯೆಗೂ ಹೋಗಲ್ಲ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ!1989ರ ನೆನಪು..
ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಅವರು 1989ರ ಜೂನ್ 3ರಂದು ನಿಧನರಾದ ನಂತರ ಆದ ಬೆಳವಣಿಗೆಗಳು, ಪ್ರಸ್ತುತ ವ್ಯಾಪಕ ಭದ್ರತಾ ಯೋಜನೆಗಳನ್ನು ಕೈಗೊಳ್ಳುವಂತೆ ಮಾಡಿವೆ.
ರುಹೊಲ್ಲಾ ಖಮೇನಿ ಅವರ ಪಾರ್ಥೀವ ಶರೀರವನ್ನು ಮೊದಲು ಟೆಹರಾನ್‌ನ ಮೊಸಲ್ಲಾದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಅಯಾತೊಲ್ಲಾ ಮೊಹಮ್ಮದ್ ರೇಝಾ ಗೊಲ್ಪಾಯೆಗನಿ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಗಳು ನಡೆದಿದ್ದವು. ಮರುದಿನ ಶವಪೆಟ್ಟಿಗೆಯನ್ನು ಸಮಾಧಿ ಸ್ಥಳಕ್ಕೆ ಸಾಗಿಸುವಾಗ ಲಕ್ಷಾಂತರ ಜನರು ಜಮಾಯಿಸಿದರು. ಪೆಟ್ಟಿಗೆಯನ್ನು ಮುಟ್ಟಲು ಮುಗಿಬಿದ್ದರು. ಭದ್ರತಾ ಪಡೆಗಳು ಜನರನ್ನು ನಿಯಂತ್ರಿಸಲು ಸಾಹಸ ಮಾಡಬೇಕಾಯಿತು. ಆದಾಗ್ಯೂ, ಶವಪೆಟ್ಟಿಗೆಗೆ ಹಾನಿಯಾಗಿತ್ತು.
ಕೊನೆಗೆ ಹೆಲಿಕಾಪ್ಟರ್ ಮೂಲಕ ಪಾರ್ಥೀವ ಶರೀರವನ್ನು ಕೊಂಡೊಯ್ಯಬೇಕಾಯಿತು.
ಭಾರಿ ಜನಸ್ತೋಮದಿಂದ ಉಂಟಾದ ಕಾಲ್ತುಳಿತದ ವೇಳೆ ಸಾಕಷ್ಟು ಜನರು ಗಾಯಗೊಂಡು, ಹಲವರು ಮೃತಪಟ್ಟಿದ್ದರು ಎನ್ನಲಾಗಿದೆಯಾದರೂ, ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆ ವೇಳೆ ಸುಮಾರು ಒಂದು ಕೋಟಿ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿತ್ತು. ಆದರೆ, ವಿದೇಶಿ ಮಾಧ್ಯಮಗಳು ಅಷ್ಟು ಜನರ ಇರಲಿಲ್ಲ ಎಂದು ವರದಿ ಮಾಡಿದ್ದವು.
2020ರ ಕಹಿ ಅನುಭವ
ಐಆರ್‌ಜಿಸಿಯ ಮೇಜರ್ ಜನರಲ್ ಆಗಿದ್ದ ಖಾಸಿಂ ಸುಲೇಮಾನಿ ಅಂತ್ಯಕ್ರಿಯೆಯು ರುಹೊಲ್ಲಾ ಖಮೇನಿ ನಂತರ, ಇರಾನ್‌ನಲ್ಲಿ ನಡೆದ ಅತಿದೊಡ್ಡ ಸರ್ಕಾರಿ ಕಾರ್ಯಕ್ರಮವಾಗಿದೆ.
2020ರ ಜನವರಿ 3ರಂದು ಅಮೆರಿಕ ನಡೆಸಿದ ಡ್ರೋನ್ ದಾಳಿ ವೇಳೆ ಹತ್ಯೆಯಾದ ಸುಲೇಮಾನಿ ಅವರ ಪಾರ್ಥೀವ ಶರೀರವನ್ನು ಇರಾನ್, ಇರಾಕ್‌ನ ಪ್ರಮುಖ ನಗರಗಳಲ್ಲಿ ಮೆರವಣಿಗೆ ನಡೆಸಿ, ನಂತರ ಕೆರ್ಮನ್‌ಗೆ ಕೊಂಡೊಯ್ಯಲಾಗಿತ್ತು. ಅಲ್ಲಿ, ಅಪಾರ ಜನದಟ್ಟಣೆಯುಂಟಾಗಿ ಕನಿಷ್ಠ 56ಮಂದಿ ಮೃತಪಟ್ಟು, ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹೀಗಾಗಿ, ಅಂತ್ಯಕ್ರಿಯೆ ದಿನಾಂಕವನ್ನೇ ಮುಂದೂಡಲಾಗಿತ್ತು.
ಆಯಾತೊಲ್ಲಾ ಖಮೇನಿ ಅಂತ್ಯ ಸಂಸ್ಕಾರದ ಬಳಿಕ ಇರಾನ್-ಅಮೆರಿಕ ನಡುವೆ ಮುಂದಿನ ಮಾತುಕತೆಹತ್ಯೆಯಾದ ಸ್ಥಳಕ್ಕೆ ಖಮೇನಿ ಶವ ಕೊಂಡೊಯ್ಯಲಾಗಿದೆ: ಇರಾನ್ ಮಾಧ್ಯಮಗಳುಇದೇ ಕಾರಣದಿಂದ, ಅಲಿ ಖಮೇನಿ ಅಂತ್ಯಸಂಸ್ಕಾರದ ವೇಳೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಇರಾನ್‌ನ ಸಾಮರ್ಥ್ಯದ ಪ್ರದರ್ಶನದ ಕುರುಹಾಗಿ ಸ್ಮರಿಸುವಂತಾಗಬೇಕು ಎಂದು ಅಧಿಕಾರಿಗಳು ದೃಢನಿಶ್ಚಯ ಮಾಡಿದ್ದಾರೆ.
ನಾಲ್ಕು ತಿಂಗಳು ಪಾರ್ಥೀವ ಶರೀರ ಸಂರಕ್ಷಿಸಿದ್ದು ಹೇಗೆ?
ಈ ಎಲ್ಲ ವಿಚಾರಗಳ ನಡುವೆ, ಅವಶೇಷಗಳಿಂದ ಹೊರತೆಗೆದ ಖಮೇನಿ ಅವರ ಪಾರ್ಥೀವ ಶರೀರವನ್ನು ನಾಲ್ಕು ತಿಂಗಳವರೆಗೆ ಸಂರಕ್ಷಿಸಿದ್ದು ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ.
ಸಾಮಾನ್ಯವಾಗಿ ಸಾಧ್ಯವಾದಷ್ಟು ಬೇಗನೆ ಸಂಸ್ಕಾರ ಮಾಡುವುದಕ್ಕೆ ಒತ್ತು ನೀಡುವ ಇಸ್ಲಾಮಿಕ್ ರಾಷ್ಟ್ರವು, ರಾಸಾಯನಿಕ ಬಳಸಿ ಶವ ಕೊಳೆಯದಂತೆ ಇಡುವ ಕ್ರಮ ಅನುಸರಿಸುವುದಿಲ್ಲ. ಆದರೆ, ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡು, ಭದ್ರತೆಗೆ ಆತಂಕ ಎದುರಾಗಿದ್ದರಿಂದ ಅಲಿ ಖಮೇನಿ ಅವರ ಶವ ಸಂಸ್ಕಾರ ನಾಲ್ಕು ತಿಂಗಳು ತಡವಾಗಿ ನೆರವೇರುತ್ತಿದೆ.
ಹೀಗಿದ್ದರೂ, 'ರಾಸಾಯನಿಕ ಬಳಸಿ ಶವವನ್ನು ಸಂರಕ್ಷಿಸುವುದಕ್ಕೆ ನಿರ್ಬಂಧವಿರುವ ಕಾರಣ, ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ' ಎಂದು ಭಯೋತ್ಪಾದನಾ ನಿಗ್ರಹ ತಜ್ಞ ಡಾ. ಮೊಹಮ್ಮದ್ ಒಮರ್ ಅವರು ಫಾಕ್ಸ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಅಸಾಧಾರಣ ಸಂದರ್ಭಗಳಲ್ಲಿ ಅಂತಿಮ ವಿಧಿವಿಧಾನ ನಡೆಸುವುದು ವಿಳಂಬವಾದಲ್ಲಿ, ಕೋಲ್ಡ್ ಸ್ಟೋರೇಜ್‌ನಲ್ಲಿ ಶವ ಇರಿಸಲು ಶಿಯಾ ಕಾನೂನಿನಲ್ಲಿ ವಿನಾಯಿತಿ ಇದೆ ಎಂದೂ ಹೇಳಿದ್ದಾರೆ.
'ಇರಾನ್ ವಿಧಿ ವಿಜ್ಞಾನ ಶವಾಗಾರಗಳು ಈಗಾಗಲೇ ಸಾಕಷ್ಟು ಶವಗಳನ್ನು ಹಲವು ತಿಂಗಳುಗಳವರೆಗೆ ಇರಿಸಿಕೊಂಡಿವೆ. ಹಾಗಾಗಿ, ಖಮೇನಿ ಅವರ ಪಾರ್ಥೀವ ಶರೀರವನ್ನು ನಾಲ್ಕು ತಿಂಗಳು ಸಂರಕ್ಷಿಸಿರುವುದು ಅಸಾಮಾನ್ಯ ಬೆಳವಣಿಗೆಯೇನಲ್ಲ. ಧಾರ್ಮಿಕ ಮತ್ತು ಕಾನೂನು ಮಾನಗದಂಡಗಳಲ್ಲೂ ಅದಕ್ಕೆ ಅವಕಾಶವಿದೆ' ಎಂದೂ ಪ್ರತಿಪಾದಿಸಿದ್ದಾರೆ.
ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಇರಾನ್ ಆಹ್ವಾನ
