ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಮಾರ್ಚ್ ತಿಂಗಳ ಆರಂಭದಿಂದ 27ರವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಯಿಂದ ₹1.16 ಲಕ್ಷ ಕೋಟಿ (ಸುಮಾರು 12.3 ಬಿಲಿಯನ್ ಡಾಲರ್) ಬಂಡವಾಳವನ್ನು ವಾಪಸ್ ಪಡೆದಿದ್ದಾರೆ.
ರೂಪಾಯಿ ಮೌಲ್ಯ ಇಳಿಕೆ ಮತ್ತು ದೇಶದ ಬೆಳವಣಿಗೆಯ ಮೇಲೆ ಕಚ್ಚಾ ತೈಲದ ದರ ಹೆಚ್ಚಳವು ಪರಿಣಾಮ ಬೀರಬಹುದು ಎಂಬ ಆತಂಕವು ವಿದೇಶಿ ಬಂಡವಾಳದ ಹೊರಹರಿವಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
2024ರ ಅಕ್ಟೋಬರ್ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಯಿಂದ ₹94,017 ಕೋಟಿ ಬಂಡವಾಳ ವಾಪಸ್ ಪಡೆದಿದ್ದರು. ಇದು ಇಲ್ಲಿಯವರೆಗಿನ ಅತ್ಯಧಿಕ ಹೊರಹರಿವಾಗಿತ್ತು. ಆದರೆ, ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಇದಕ್ಕಿಂತಲೂ ಹೆಚ್ಚಿನ ಬಂಡವಾಳ ಹೊರಹರಿವಾಗಿದೆ.
2026ರ ಆರಂಭದಿಂದ ಮಾರ್ಚ್ 27ರವರೆಗೆ ಒಟ್ಟು ₹1.27 ಲಕ್ಷ ಕೋಟಿ ಬಂಡವಾಳ ವಾಪಸ್ ಆಗಿದೆ ಎಂದು ಎನ್‌ಎಸ್‌ಡಿಎಲ್ ಅಂಕಿ-ಅಂಶಗಳು ತಿಳಿಸಿವೆ.
ಫೆಬ್ರುವರಿಯಲ್ಲಿ ₹22,615 ಕೋಟಿ ಬಂಡವಾಳ ಒಳಹರಿವಾಗಿತ್ತು. ಇದು ಕಳೆದ 17 ತಿಂಗಳಿನಲ್ಲಿಯೇ ಅತಿ ಹೆಚ್ಚು.
ಕೊಲ್ಲಿ ಸಂಘರ್ಷ ಶಮನಕ್ಕೆ ಪಾಕಿಸ್ತಾನದ ಪ್ರಯತ್ನ ಶ್ಲಾಘಿಸಿದ ಕತಾರ್ಕೊಲ್ಲಿ ಸಂಘರ್ಷದ ಕದನ ವಿರಾಮಕ್ಕೆ ಪಾಕಿಸ್ತಾನದಲ್ಲಿ ಸಭೆ ನಿಗದಿಫೆಬ್ರುವರಿ ತಿಂಗಳಿನಲ್ಲಿ ₹ 22,615 ಕೋಟಿ ಎಫ್‌ಪಿಐ ಹೂಡಿಕೆಯಾಗಿತ್ತು. ಆದು 17 ತಿಂಗಳ ಗರಿಷ್ಠ ಒಳಹರಿವಾಗಿತ್ತು. ಆದರೆ, ಮಾರ್ಚ್‌ನಲ್ಲಿ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಜಾಗತಿಕ ಆರ್ಥಿಕ ಸವಾಲುಗಳು ಮತ್ತು ರಾಜಕೀಯ ಅನಿಶ್ಚಿತತೆಯೇ ಹೂಡಿಕೆ ಹಿಂಪಡೆಯಲು ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

